ಎಥರ್ ರಿಜ್ಟಾ VS ಸುಜುಕಿ ಇ-ಆಕ್ಸೆಸ್: ಖರೀದಿ ಗೊಂದಲವೇ? ಗೆಲ್ಲೋ ಕುದುರೆ ಯಾವುದು?

ಭಾರತದಲ್ಲಿ ದ್ವಿಚಕ್ರ ವಾಹನ ವಿಭಾಗವು ವೇಗವಾಗಿ ಬೆಳೆಯುತ್ತಿದೆ, ಇಂಧನ ಬೆಲೆಗಳ ಏರಿಕೆಯು ಗ್ರಾಹಕರನ್ನು ಎಲೆಲಕ್ಟ್ರಿಕ್ ವಾಹನಗಳತ್ತ ಮುಖ ಮಾಡುವಂತೆ ಮಾಡಿದೆ. ಮೇಂಟೆನನ್ಸ್ ಖರ್ಚು ಕೂಡ ತೀರಾ ಕಡಿಮೆ ಇರುವುದರಿಂದ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಇದನ್ನು ಅರಿತಿರುವ ದೊಡ್ಡ ಬ್ರಾಂಡ್‌ಗಳು ಈಗ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತಿದ್ದಾರೆ. ಮೊನ್ನೆಯಷ್ಟೆ ಸುಜುಕಿ ತನ್ನ ಜನಪ್ರಿಯ ಮಾಡಲ್ ಆಕ್ಸಿಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಅನ್ನು ಪ್ರಸ್ತುತ ಹೆಚ್ಚು ಮಾರಾಟ ಕಾಣುತ್ತಿರುವ ಅಗ್ಗದ ಬೆಲೆಯ ಎಥರ್ ರಿಜ್ಟಾಗೆ ಹೋಲಿಕೆ ಮಾಡಿ ಯಾವುದು ಬೆಸ್ಟ್ ಎಂಬುದನ್ನು ತಿಳಿಯೋಣ.

ಬೆಲೆ: ಎಥರ್ ರಿಜ್ಟಾ ಮೂರು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ, ಬೆಲೆಯು ರೂ. 1.11 ಲಕ್ಷದಿಂದ ಆರಂಭವಾಗಿ ಟಾಪ್ ವೇರಿಯೆಂಟ್ ರೂ. 1.51 ಲಕ್ಷ ಎಕ್ಸ್-ಶೋರೂಂವರೆಗೆ ಇದೆ. ಇತ್ತ ಸುಜುಕಿ ಇ-ಆಕ್ಸೆಸ್ ಬೆಲೆ ತುಸು ಹೆಚ್ಚಾಗಿದ್ದು ರೂ. 1.88 ಲಕ್ಷ ಎಕ್ಸ್‌ ಶೋರೂಂ ಬೆಲೆಯನ್ನು ಹೊಂದಿದೆ. ಬೆಲೆ ವಿಷಯದಲ್ಲಿ ನೋಡುವುದಾದರೆ ಎಥರ್ ರಿಜ್ಟಾ ಸುಜುಕಿ ಆಕ್ಸಿಸ್‌ಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ.

ather-rizta-vs-suzuki-e-access-specs-comparison

ಬ್ಯಾಟರಿ & ಪರ್ಫಾಮೆನ್ಸ್

ಎಥರ್ ರಿಜ್ಟಾ ಸ್ಕೂಟರ್ ಅನ್ನು 2.9 kWh ಮತ್ತು 3.7 kWh ಬ್ಯಾಟರಿ ಪ್ಯಾಕ್‌ಗಳ ನಡುವೆ ಆಯ್ಕೆ ಮಾಡಬಹುದು. ವೇರಿಯೆಂಟ್ ಅವಲಂಭಿಸಿ ಇದರ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 123 ಕಿ.ಮೀ ನಿಂದ 160 ಕಿ.ಮೀ ವರೆಗೆ ಓಡಿಸಬಹುದು. ಎಥರ್ ರಿಜ್ಟಾ ಟಾಪ್ ಸ್ಪೀಡ್ 80 ಕಿ.ಮೀ ಹೋಗಬಲ್ಲದು, ದೈನಂದಿನ ಬಳಕೆಯಲ್ಲಿ ಹೆಚ್ಚಿನ ಪರ್ಫಾಮೆನ್ಸ್ ಬಯಸುವ ಸವಾರರಿಗೆ ಎಥರ್ ರಿಜ್ಟಾ ಸೂಕ್ತವಾಗಿರುತ್ತದೆ.

ಸುಜುಕಿ ಇ-ಆಕ್ಸೆಸ್ ವಿಷಯಕ್ಕೆ ಬಂದರೆ 3.07 kWh ಬ್ಯಾಟರಿಯನ್ನು ಹೊಂದಿದ್ದು, 5.49 bhp ಪವರ್ ಮತ್ತು 15 Nm ಟಾರ್ಕ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಸುಜುಕಿ 71 ಕಿ.ಮೀ ಟಾಪ್ ಸ್ಪೀಡ್ ಹೋಗಬಲ್ಲದು, ಸಿಂಗಲ್ ಚಾರ್ಜ್‌ನಲ್ಲಿ 95 ಕಿ.ಮೀ ವರೆಗೆ ಓಡಿಸಬಹುದು. ಸಂಪೂರ್ಣ ಚಾರ್ಜ್ ಆಗಲು ಆರು ಗಂಟೆಗಳಿಗಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ather-rizta-vs-suzuki-e-access-specs-comparison

ಫೀಷರ್ಸ್: ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ 7-ಇಂಚಿನ ಎಲ್‌ಸಿಡಿ ಸ್ಕ್ರೀನ್, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಸ್ಮಾರ್ಟ್, ಇಕೋ ಮತ್ತು ಜಿಪ್ ಎಂಬ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಸುಜುಕಿ ಇ-ಆಕ್ಸೆಸ್ ವಿಷಯಕ್ಕೆ ಬಂದರೆ 4.2 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ, ರಿಮೋಟ್ ಸ್ಟಾರ್ಟ್, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಇಕೋ, ರೈಡ್ ಎ ಹಾಗೂ ರೈಡ್ ಬಿ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಪರಿಚಿತ ಬ್ರ್ಯಾಂಡ್ ಮತ್ತು ಸರಳ ಎಲೆಕ್ಟ್ರಿಕ್ ವಾಹನ ಹುಡುಕುತ್ತಿರುವ ನಗರ ಪ್ರಯಾಣಿಕರಿಗೆ ಈ ಸ್ಕೂಟರ್‌ಗಳು ಉತ್ತಮ. ಆದರೆ, ಎಥರ್ ರಿಜ್ಟಾ ಪ್ರಸ್ತುತ ಬಲವಾದ ರೇಂಜ್, ಟಾಪ್ ಸ್ಪೀಡ್ ಮತ್ತು ವಿಭಿನ್ನ ಅಗತ್ಯಗಳನ್ನು ಪೂರೈಸುವ ಬಹು ವೇರಿಯೆಂಟ್‌ಗಳೊಂದಿಗೆ ಮೇಲುಗೈ ಸಾಧಿಸಿದೆ. ಸುಜುಕಿ ಇ-ಆಕ್ಸೆಸ್ ಹೆಚ್ಚಿನ ಬೆಲೆಯಿದ್ದರೂ, ಎಲ್ಲದರಲ್ಲೂ ರಿಜ್ಟಾಗಿಂತ ಹಿಂದುಳಿದಿದೆ ಎಂದು ಹೇಳಬಹುದು.

ather-rizta-vs-suzuki-e-access-specs-comparison

ಇತರ ಪ್ರತಿಸ್ಪರ್ಧಿಗಳು: ಈ ಬೆಲೆ ಶ್ರೇಣಿಯಲ್ಲಿ ಬೆಸ್ಟ್‌ ಮಾಡಲ್‌ಗಳಾಗಿ ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್, ಹೋಂಡಾ QC1 ಮತ್ತು ಆಕ್ಟಿವಾ e, ಹೀರೋ ಮೋಟೋಕಾರ್ಪ್‌ನ ವಿಡಾ ಇವಿಗಳು ಮಾರುಕಟ್ಟೆಯಲ್ಲಿ ಬಲವಾಗಿ ನಿಂತಿವೆ. ಈ ಎಲ್ಲಾ ವಾಹನಗಳಲ್ಲಿ ನಿಮಗೆ ಯಾವ ಮಾಡಲ್‌ಗಳ ಬಗ್ಗೆ ಹೋಲಿಕೆ ಬೇಕು ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, January 11, 2026, 10:35 [IST]
English summary
Ather rizta vs suzuki e access specs comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+