ಹೊಸ ಬಜಾಜ್ ಚೇತಕ್ ಸಿ25 vs ಎಥರ್ ರಿಜ್ಟಾ: ಎರಡು ಅಗ್ಗದ ಸ್ಕೂಟರ್‌ಗಳು.. ಯಾವುದು ಬೆಸ್ಟ್?

ಈಚೆಗೆ ನೂತನ ಬಜಾಜ್ ಚೇತಕ್ ಸಿ25 (Bajaj Chetak C25) ಇ-ಸ್ಕೂಟರ್‌ನ್ನು ಮಾರಾಟಕ್ಕೆ ತರಲಾಗಿದೆ. ಇದಕ್ಕೆ ಎಥರ್ ರಿಜ್ಟಾ (Ather Rizta) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಅತ್ಯಾಧುನಿಕವಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿವೆ. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿವೆ. ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ನಾವಿಲ್ಲಿ ಇವೆರೆಡು ಸ್ಕೂಟರ್‌ಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ.

ಬೆಲೆ (Price):

ಹೊಸ 'ಬಜಾಜ್ ಚೇತಕ್ ಸಿ25' ರೂ.91,399 ದರವನ್ನು ಪಡೆದಿದೆ. ಅದೇ ರೀತಿಯಲ್ಲಿ 'ಎಥರ್ ರಿಜ್ಟಾ' ರೂ.1.15 ಲಕ್ಷದಿಂದ ರೂ.1.32 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ದರದ ವಿಚಾರದಲ್ಲಿ ಎಥರ್ ರಿಜ್ಟಾಗೆ ಹೋಲಿಕೆ ಮಾಡಿದರೆ, ಬಜಾಜ್ ಚೇತಕ್ ಸಿ25 ಸಾಕಷ್ಟು ಅಗ್ಗವಾಗಿದೆ.

Bajaj Chetak C25 vs Ather Rizta Which Scooter Best Details

ವಿನ್ಯಾಸ (Design):

ಈ ಸ್ಕೂಟರ್‌ಗಳು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. 'ಬಜಾಜ್ ಚೇತಕ್ ಸಿ25' ಎಲ್ಇಡಿ ಹೆಡ್‌ಲ್ಯಾಂಪ್ ಹಾಗೂ ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಿದೆ. ಓಷನ್ ಟೀಲ್, ರೇಸಿಂಗ್ ರೆಡ್, ಆಕ್ಟಿವ್ ಬ್ಲ್ಯಾಕ್, ಓಪಲೆಸೆಂಟ್ ಸಿಲ್ವರ್, ಕ್ಲಾಸಿಕ್ ವೈಟ್ ಮತ್ತು ಮಿಸ್ಟಿ ಯೆಲ್ಲೋ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,225 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.

'ಎಥರ್ ರಿಜ್ಟಾ' ಸಹ ಉತ್ತಮವಾದ ಹೆಡ್‌ಲ್ಯಾಂಪ್‌ ಮತ್ತು ಟೈಲ್‌ಲೈಟ್‌ನ್ನು ಪಡೆದಿದೆ. ಸಿಯಾಚಿನ್ ವೈಟ್, ಡೆಕ್ಕನ್ ಗ್ರೇ, ಕಾರ್ಡಮೊಮ್ ಗ್ರೀನ್, ಮತ್ತು ಪ್ಯಾಂಗೊಂಗ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 150 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,285 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

Bajaj Chetak C25 vs Ather Rizta Which Scooter Best Details

ಕಾರ್ಯಕ್ಷಮತೆ (Permanence):

ಇವೆರೆಡು ಸ್ಕೂಟರ್‌ಗಳು ಬೆಲೆಗೆ ತಕ್ಕಂತೆ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿವೆ. 'ಬಜಾಜ್ ಚೇತಕ್ ಸಿ25' ಇ-ಸ್ಕೂಟರ್ 2.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 113 ರೇಂಜ್ (ಮೈಲೇಜ್) ಕೊಡುತ್ತದೆ. 55 ಕೆಎಂಪಿಎಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

'ಎಥರ್ ರಿಜ್ಟಾ' 2.9 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.7 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಗಳನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 123 ರಿಂದ 160 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಬಜಾಜ್ ಚೇತಕ್ ಸಿ25ಗೆ ಹೋಲಿಸಿದರೆ, ಎಥರ್ ರಿಜ್ಟಾ ಹೆಚ್ಚು ದೂರ ಕ್ರಮಿಸುತ್ತದೆ.

ವೈಶಿಷ್ಟ್ಯಗಳು (Features):

ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿವೆ. 'ಬಜಾಜ್ ಚೇತಕ್ ಸಿ25' ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ರಿವರ್ಸ್ ಅಸಿಸ್ಟ್, ಮ್ಯೂಸಿಕ್ ಪ್ಲೇಬ್ಯಾಕ್, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಯಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಇಕೋ ಮತ್ತು ಸ್ಪೋರ್ಟ್ ಎಂಬ 2 ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. 25 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್‍ನ್ನು ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

'ಎಥರ್ ರಿಜ್ಟಾ' 7-ಇಂಚಿನ ಎಲ್‌ಸಿಡಿ ಸ್ಕ್ರೀನ್, ಮಲ್ಟಿ ಪರ್ಪಸ್ ಚಾರ್ಜರ್ ಮತ್ತು ಪಿಲಿಯನ್ ಬ್ಯಾಕ್‌ರೆಸ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಮಾರ್ಟ್, ಇಕೋ ಹಾಗೂ ಜಿಪ್ ಎಂಬ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 34 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್‌ನ್ನು ಪಡೆದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

More from DriveSpark

Article Published On: Saturday, January 17, 2026, 8:37 [IST]
English summary
Bajaj chetak c25 vs ather rizta which scooter best details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+