ಬಡವರ ಬಂಡಿಯಿದು.. 67,885 ರೂಪಾಯಿ, ಫುಲ್ ಟ್ಯಾಂಕ್ ಮಾಡಿಸಿದ್ರೆ 770 KM ಮೈಲೇಜ್.. ದುಡಿಯುವವರಿಗೆ ಬೆಸ್ಟ್!
ಬಜಾಜ್ ಸಿಟಿ 110ಎಕ್ಸ್ (Bajaj CT 110X) ಜನಪ್ರಿಯ ಬೈಕ್ ಎಂದೇ ಹೆಸರುವಾಸಿಯಾಗಿದೆ. ಇದನ್ನು ನಗರ ಹಾಗೂ ಗ್ರಾಮೀಣ ಪ್ರದೇಶದ ದುಡಿಯುವ ವರ್ಗದ ಜನರು ಮೆಚ್ಚಿಕೊಂಡಿದ್ದಾರೆ. ನೀವು ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಖರೀದಿಸಲು ಆಲೋಚಿದ್ದೀರಾ.. ಹಾಗಾದರೆ 'ಸಿಟಿ 110ಎಕ್ಸ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಬೈಕ್‌ನ ಬೆಲೆ ಎಷ್ಟು, ಹೇಗೆ ಕಾರ್ಯ ನಿರ್ವಹಿಸುತ್ತದೆ ಹಾಗೂ ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಬೆಲೆ (Price):
ಇದು ಅಗ್ಗದ ದರದಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ರೂ.67,885 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಎಲ್ಲ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ಆನ್-ರೋಡ್ ಬೆಲೆಯು ರೂ.82,764 ಇದೆ. ರೂ.20,000 ಡೌ-ಪೇಮೆಂಟ್ ಪಾವತಿಸಿ, ಖರೀದಿಸಿದರೆ, 3 ವರ್ಷದ ಅವಧಿಗೆ ಪ್ರತಿ ತಿಂಗಳು ರೂ.2,000 ವರೆಗೆ ಇಎಂಐ ಕಟ್ಟಬೇಕು.

ವಿನ್ಯಾಸ & ಬಣ್ಣಗಳು (Design & Colours):
ಈ ಬೈಕ್ ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾಗಿರುವ ಎಲ್ಇಡಿ ಹೆಡ್‌ಲೈಟ್, ಹ್ಯಾಲೊಜೆನ್ ಟೈಲ್ ಲೈಟ್ ಮತ್ತು ಇಂಡಿಕೇಟರ್‌ಗಳನ್ನು ಹೊಂದಿದೆ. ಮ್ಯಾಟ್ ವೈಲ್ಡ್ ಗ್ರೀನ್, ಎಬೊನಿ ಬ್ಲ್ಯಾಕ್ - ರೆಡ್ ಮತ್ತು ಎಬೊನಿ ಬ್ಲ್ಯಾಕ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ಸುತ್ತಳತೆ (Dimension):
ನೂತನ 'ಬಜಾಜ್ ಸಿಟಿ 110ಎಕ್ಸ್' ಸಾಕಷ್ಟು ವಿಶಾಲ ಗಾತ್ರದಲ್ಲಿದೆ. 1,998 ಮಿ.ಮೀ ಉದ್ದ, 753 ಮಿ.ಮೀ ಅಗಲ ಮತ್ತು 1,098 ಮಿ.ಮೀ ಎತ್ತರವಿದೆ. 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1285 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಬರೋಬ್ಬರಿ 127 ಕೆಜಿ ತೂಕವಿದೆ.

ಕಾರ್ಯಕ್ಷಮತೆ (Performance):
ಇದು ಬೆಲೆಗೆ ತಕ್ಕಂತೆ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 115.45-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 8.6 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 9.81 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ.
ಮೈಲೇಜ್ (Mileage):
ಈ ಮೋಟಾರ್‌ಸೈಕಲ್‌ಗೆ 1 ಲೀಟರ್ ಪೆಟ್ರೋಲ್ ಹಾಕಿಸಿದರೆ, 70 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 11 ಲೀಟರ್ ಸಾಮರ್ಥ್ಯದ ದೊಡ್ಡ ಗಾತ್ರದ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ. ಒಮ್ಮೆ ಪೂರ್ತಿಯಾಗಿ ತುಂಬಿಸಿದರೆ, ಸರಿ ಸಮಾರು 770 ಕಿಲೋಮೀಟರ್‌ವರೆಗೆ ಕ್ರಮಿಸಬಲ್ಲದು.

ವೈಶಿಷ್ಟ್ಯಗಳು (Features):
ಹೊಸ 'ಬಜಾಜ್ ಸಿಟಿ 110ಎಕ್ಸ್' ಬೈಕ್ ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಅದೇ ರೀತಿಯಲ್ಲಿ 8 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. 17-ಇಂಚಿನ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್ ಟೈಪ್ ಟೈರ್‌ಗಳನ್ನು ಒಳಗೊಂಡಿದೆ. ಸೀಟ್ ಎತ್ತರವು 810 ಮಿ.ಮೀ ಇದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup And Braking System):
ಇದು ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ & ಹಿಂಭಾಗ (ರೇರ್) ಪ್ರಿ ಲೋಡ್ ಅಡ್ಜಸ್ಟೇಬಲ್ ಟ್ವಿನ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಸಿಬಿಎಸ್ (ಕಂಬೈನ್ಡ್ - ಬ್ರೇಕಿಂಗ್ ಸಿಸ್ಟಮ್) ಹಾಗೂ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.
ಪ್ರತಿಸ್ಪರ್ಧಿ ಬೈಕ್‌ಗಳು (Rival bikes):
ಈ ಮೋಟಾರ್‌ಸೈಕಲ್‌ಗೆ ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ ಟಿವಿಎಸ್ ಸ್ಪೋರ್ಟ್ (TVS Sport), ಟಿವಿಎಸ್ ರೇಡಿಯನ್ (TVS Radeon), ಹೋಂಡಾ ಶೈನ್ 100 (Honda Shine 100), ಹೀರೋ ಎಚ್‌ಎಫ್ ಡಿಲಕ್ಸ್ (Hero HF Deluxe), ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ (TVS Star City Plus) ಹಾಗೂ ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಬೈಕ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಗಳಾಗಿವೆ.


Click it and Unblock the Notifications








