100 Km ಮೈಲೇಜ್.. ಆದ್ರೂ ಈ ಅಗ್ಗದ ಬೈಕ್‌ನ್ನು ಖರೀದಿಸಲು ಗ್ರಾಹಕರಿಗೆ ಮನಸಿಲ್ಲ.. ಕಾರಣವೇನು?

ಬಜಾಜ್ ಫ್ರೀಡಂ 125 (Bajaj Freedom 125) ಪ್ರಖ್ಯಾತ ಸಿಎನ್‌ಜಿ ಮೋಟಾರ್‌ಸೈಕಲ್‌ ಎಂದೇ ಹೆಸರುವಾಸಿಯಾಗಿದೆ. ಆದರೂ ದಿನದಿಂದ ದಿನಕ್ಕೆ ಮಾರಾಟ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿದೆ. ಈ 2026ರ ಜನವರಿಯಲ್ಲಿಯೂ ಅದು ಮುಂದುವರಿದಿದೆ. ಬರೀ 1,157 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1,345 ಯುನಿಟ್‌ಗಳನ್ನು ಮಾರಾಟಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -14% ಕುಸಿತವಾಗಿದೆ.

ನೂತನ 'ಬಜಾಜ್ ಫ್ರೀಡಂ 125' ಮಾರಾಟವು ಇಳಿಕೆಯಾಗಲು ಹಲವು ಕಾರಣಗಳಿವೆ. ಸಿಎನ್‌ಜಿ ಇಂಧನ ತುಂಬುವ ಸ್ಟೇಷನ್‌ಗಳು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿವೆ. ಹಳ್ಳಿಗಾಡಿನಲ್ಲಿ ಹೆಚ್ಚಿನ ಸ್ಟೇಷನ್‌ಗಳಿಲ್ಲ. ಜನರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿಯತ್ತ ಒಲವನ್ನು ತೋರಿಸುತ್ತಿದ್ದಾರೆ. ಜೊತೆಗೆ ಬೆಲೆಯೂ ಸ್ವಲ್ಪ ಮಟ್ಟಿಗೆ ಅಧಿಕವಿದೆ. ಹೀಗಾಗಿ, ಮಾರಾಟ ಸಂಖ್ಯೆ ಕಡಿಮೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Bajaj Freedom 125 January 2026 Sales Details

'ಬಜಾಜ್ ಫ್ರೀಡಂ 125' ವಿಶೇಷತೆಗಳೇನು:

ಇದು ಕನಿಷ್ಠ ರೂ.91,566 ಹಾಗೂ ಗರಿಷ್ಠ ರೂ.1.07 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಎನ್‌ಜಿ04 ಡ್ರಮ್ (NG04 Drum), ಎನ್‌ಜಿ04 ಡ್ರಮ್ ಎಲ್ಇಡಿ (NG04 Drum LED) ಹಾಗೂ ಎನ್‌ಜಿ04 ಡಿಸ್ಕ್ ಎಲ್ಇಡಿ (NG04 Disc LED) ಎಂಬ ರೂಪಾಂತರಗಳೊಂದಿಗೂ ಸಿಗುತ್ತದೆ.

ಈ ಮೋಟಾರ್‌ಸೈಕಲ್‌ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್ ಲ್ಯಾಂಪ್‌ ಹಾಗೂ ಸಿಂಗಲ್ ಪೀಸ್ ಸೀಟ್‌ನ್ನು ಪಡೆದಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಲು 17-ಇಂಚಿನ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ರೇಸಿಂಗ್ ರೆಡ್, ಸೈಬರ್ ವೈಟ್, ಎಬೊನಿ ಬ್ಯ್ಲಾಕ್, ಪ್ಯೂಟರ್ ಗ್ರೇ ಮತ್ತು ಕೆರಿಬಿಯನ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Bajaj Freedom 125 January 2026 Sales Details

ಹೊಸ 'ಫ್ರೀಡಂ 125' ಹೆಚ್ಚು ವಿಶಾಲವಾಗಿದೆ. 1,970 ಮಿ.ಮೀ ಉದ್ದ, 730 ಮಿ.ಮೀ ಅಗಲ ಮತ್ತು 1,080 ಮಿ.ಮೀ ಎತ್ತರವಿದೆ. ಜೊತೆಗೆ 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,340 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಬರೋಬ್ಬರಿ 149 ಕೆಜಿ ತೂಕವಿದೆ.

ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 124.58-ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 9.5 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) & 9.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

Bajaj Freedom 125 January 2026 Sales Details

ತಲಾ 2 ಲೀಟರ್/ಕೆಜಿಯಷ್ಟು ಪೆಟ್ರೋಲ್ ಹಾಗೂ ಸಿಎನ್‌ಜಿ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ. ಪೆಟ್ರೋಲ್ ಮೋಡ್‌ನಲ್ಲಿ 130 ಕಿ.ಮೀ ಮತ್ತು ಸಿಎನ್‌ಜಿ ಮೋಡ್‌ನಲ್ಲಿ 200 ಕಿ.ಮೀ ಮೈಲೇಜ್ ಕೊಡುತ್ತದೆ. ಒಮ್ಮೆ ಪೂರ್ತಿಯಾಗಿ ತುಂಬಿಸಿದರೆ, 330 ಕಿ.ಮೀ ವರೆಗೆ ಕ್ರಮಿಸಬಲ್ಲದು. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 7.85 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ನೂತನ 'ಬಜಾಜ್ ಫ್ರೀಡಂ 125' ಬೈಕ್ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಹಾಗೆಯೇ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ ಟಿವಿಎಸ್ ರೈಡರ್ 125 (TVS Raider 125), ಹೋಂಡಾ ಎಸ್‌ಪಿ 125 (Honda SP 125), ಹೀರೋ ಎಕ್ಸ್‌ಟ್ರೀಮ್ 125ಆರ್ (Hero Xtreme 125R), ಹೀರೋ ಸೂಪರ್ ಸ್ಪ್ಲೆಂಡರ್ (Hero Super Splendor) ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Saturday, February 28, 2026, 20:17 [IST]
English summary
Bajaj freedom 125 january 2026 sales details
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+