ಈ ಬಡವರ ಬಂಡಿಗೆ 5 ಬದಲಿ ಬೈಕ್‌ಗಳಿವು.. ಫುಲ್ ಟ್ಯಾಂಕ್ ಮಾಡಿಸಿದ್ರೆ 630 Km ಮೈಲೇಜ್.. ಬರೀ 81,000 ರೂಪಾಯಿ!
ಹೋಂಡಾ ಶೈನ್ 125 (Honda Shine 125) ಪ್ರಖ್ಯಾತ ಮೋಟಾರ್‌ಸೈಕಲ್ ಎಂದೇ ಮನೆ ಮಾತಾಗಿದೆ. ಅಗ್ಗದ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ರೂ.80,852 ರಿಂದ ರೂ.85,211 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ರೆಬೆಲ್ ರೆಡ್ ಮೆಟಾಲಿಕ್, ಡೀಸೆಂಟ್ ಬ್ಲೂ ಮೆಟಾಲಿಕ್ ಮತ್ತು ಪರ್ಲ್ ಸೈರನ್ ಬ್ಲೂ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 162 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,285 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.
ಈ ಬೈಕ್ 123.94 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 50 ರಿಂದ 60 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಫುಲ್ ಟ್ಯಾಂಕ್‍ನಲ್ಲಿ 525 ರಿಂದ 630 ಕಿಲೋಮೀಟರ್‌ವರೆಗೂ ಓಡುತ್ತದೆ. 102 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ ಡ್ರಮ್/ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ನೀವು ಇದೇ 'ಹೋಂಡಾ ಶೈನ್ 125'ಗೆ ಪರ್ಯಾಯವಾಗಿ ಈ 5 ಮೋಟಾರ್‌ಸೈಕಲ್‌ಗಳಾದ ಹೀರೋ ಸೂಪರ್ ಸ್ಪ್ಲೆಂಡರ್, ಬಜಾಜ್ ಪಲ್ಸರ್, ಹೀರೋ ಗ್ಲಾಮರ್ ಹಾಗೂ ಟಿವಿಎಸ್ ರೈಡರ್ ಹಾಗೂ ಹೀರೋ ಎಕ್ಸ್‌ಟ್ರೀಮ್ 125ಆರ್‌ಗಳನ್ನು ಖರೀದಿಸಬಹುದು. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಹೀರೋ ಸೂಪರ್ ಸ್ಪ್ಲೆಂಡರ್ (Hero Super Splendor):
ಇದು ಜನಪ್ರಿಯ ಬೈಕ್ ಆಗಿದೆ. ರೂ.82,248 ರಿಂದ ರೂ.85,844 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 123.94 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 69 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. ಒಮ್ಮೆ ಭರ್ತಿಯಾಗಿ ತುಂಬಿಸಿದರೆ, 816 ರಿಂದ 828 ಕಿಲೋಮೀಟರ್‌ವರೆಗೂ ಕ್ರಮಿಸುತ್ತದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡ್ರಮ್/ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಬಜಾಜ್ ಪಲ್ಸರ್ 125 (Bajaj Pulsar 125):
ಈ ಮೋಟಾರ್‌ಸೈಕಲ್‌ನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ರೂ.89,910 ರಿಂದ ರೂ.92,046 (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. 124.4 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 50 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಫುಲ್ ಟ್ಯಾಂಕ್ ಮಾಡಿಸಿದರೆ, 575 ರಿಂದ 650 ಕಿಲೋಮೀಟರ್‌ವರೆಗೂ ಓಡುತ್ತದೆ. 100 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಡಿಜಿಟಲ್ ಕನ್ಸೋಲ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯಂತಹ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಡ್ರಮ್/ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.
ಹೀರೋ ಗ್ಲಾಮರ್ (Hero Glamour):
ಇದೊಂದು ಸ್ಟೈಲಿಶ್ ಬೈಕ್ ಆಗಿ ಹೊರಹೊಮ್ಮಿದೆ. ರೂ.82,398 ರಿಂದ ರೂ.86,085 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 124.7 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 65 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. ಪೂರ್ತಿಯಾಗಿ ಪೆಟ್ರೋಲ್ ಹಾಕಿಸಿದರೆ, 550 ರಿಂದ 650 ಕಿಲೋಮೀಟರ್‌ವರೆಗೂ ಕ್ರಮಿಸುತ್ತದೆ. ಡಿಜಿಟಲ್ ಕನ್ಸೋಲ್ & ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಡ್ರಮ್/ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಟಿವಿಎಸ್ ರೈಡರ್ 125 (TVS Raider 125):
ಈ ಮೋಟಾರ್‌ಸೈಕಲ್‌ನ್ನು ಯುವ ಖರೀದಿದಾರರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ರೂ.84,490 ರಿಂದ ರೂ.97,719 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 124.8 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 67 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಫುಲ್ ಟ್ಯಾಂಕ್‍ನಲ್ಲಿ 670 ಕಿಲೋಮೀಟರ್‌ವರೆಗೂ ಓಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಡ್ರಮ್/ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಹೀರೋ ಎಕ್ಸ್‌ಟ್ರೀಮ್ 125ಆರ್ (Hero Xtreme 125R):
ಇದು ಜನಮೆಚ್ಚಿದ ಬೈಕ್ ಆಗಿದೆ. ರೂ.89,000 ರಿಂದ ರೂ.1.04 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 124.7 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 66 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. ಒಮ್ಮೆ ಭರ್ತಿಯಾಗಿ ತುಂಬಿಸಿದರೆ 660 ಕಿಲೋಮೀಟರ್‌ವರೆಗೂ ಕ್ರಮಿಸುತ್ತದೆ. 95 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. 4.2-ಇಂಚಿನ ಕಲರ್ ಎಲ್‍ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್ ಹಾಗೂ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯಂತಹ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.


Click it and Unblock the Notifications








