TVS: ಪ್ರತಿ ದಿನ 365 ವಾಹನಗಳ ಮಾರಾಟ: ಡೀಲರ್‌ಗಳ ಫೇವರೆಟ್ ಸ್ಕೂಟರ್: ಮುಗಿಬಿದ್ದ ಜನ

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಈಗ ಇಂಧನ ಚಾಲಿತ ವಾಹನಗಳಿಗೆ ಪೈಪೋಟಿ ನೀಡುತ್ತಿವೆ. ಅದರಲ್ಲೂ ಬಜಾಜ್ ಚೇತಕ್ ಹಾಗೂ ಟಿವಿಎಸ್ ಐಕ್ಯೂಬ್ (TVS iQube) ಮಾರಾಟದಲ್ಲಿ ಮುನ್ನುಗ್ಗುತ್ತಿವೆ, ಗ್ರಾಹಕರು ಈ ವಾಹನಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಟಿವಿಎಸ್ ಕಂಪನಿಯ ಐಕ್ಯೂಬ್ ಬಗ್ಗೆ ಹೇಳಲೇಬೇಕು. 2020ರ ಜನವರಿಯಲ್ಲಿ ಬಿಡುಗಡೆಯಾದ ಟಿವಿಎಸ್ ಐಕ್ಯೂಬ್ ಆರಂಭದಲ್ಲಿ ಹಿನ್ನಡೆ ಅನುಭವಿಸದರೂ ಈಗ ಅದರ ಗತ್ತೇ ಬೇರೆ, ಹೆಚ್ಚುತ್ತಿರುವ ಬೇಡಿಕೆಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇವಿ ವಿಭಾಗದ ನಾಯಕನನ್ನಾಗಿ ಮಾಡಿದೆ. ಇಲ್ಲಿಯವರೆಗೆ ಬರೋಬ್ಬರಿ 8 ಲಕ್ಷ ಐಕ್ಯೂಬ್ ವಾಹನಗಳು ಭಾರತದಲ್ಲಿ ಮಾರಾಟವಾಗಿವೆ.

2020 ಜನವರಿ 20 ರಂದು ಭಾರತದಲ್ಲಿ ಟಿವಿಎಸ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಐಕ್ಯೂಬ್ ಅನ್ನು ಬಿಡುಗಡೆ ಮಾಡಿತು. ಪ್ರಸ್ತುತ ಟಿವಿಎಸ್ ಐಕ್ಯೂಬ್ ಭಾರತದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ, ಕೇವಲ ಆರು ವರ್ಷಗಳಲ್ಲಿ 8,00,000 ಯುನಿಟ್‌ ವಾಹನಗಳ ಮಾರಾಟವನ್ನು ದಾಟಿದೆ. ಅಂದರೆ ಇದನ್ನು ಪ್ರತಿ ದಿನಕ್ಕೆ ವಿಂಗಡಣೆ ಮಾಡಿದರೆ ಹೆಚ್ಚು-ಕಡಿಮೆ 365 ವಾಹನಗಳು ದಿನವೊಂದಕ್ಕೆ ಮಾರಾಟವಾದಂತೆ.

best-electric-scooter-in-india-tvs-iqube-sales-crossed-8-lakh

2020 ಜನವರಿಯಲ್ಲಿ ಬಿಡುಗಡೆಯಾದ ಮೊದಲ 52 ತಿಂಗಳುಗಳಲ್ಲಿ 3,00,000 ಯುನಿಟ್‌ಗಳು ಮಾರಾಟವಾಗಿವೆ. 2025 ರಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಬರೋಬ್ಬರಿ 1,05,357 ಯುನಿಟ್‌ ವಾಹನಗಳು ಮಾರಾಟವಾಗಿದ್ದರೇ, ಮುಂದಿನ 5,00,000 ಯುನಿಟ್‌ ವಾಹನಗಳು ಕೇವಲ 20 ತಿಂಗಳುಗಳಲ್ಲಿ ಮಾರಾಟವಾಗಿವೆ. ಇದರ ಮಾರಾಟ ಬೆಳವಣಿಗೆಯ ಹಾದಿಯನ್ನು ನೋಡಿದರೆ ಮಾರುಕಟ್ಟೆಯಲ್ಲಿ ಗ್ರಾಹಕರು ಯಾವ ಮಟ್ಟಿಗೆ ಈ ಸ್ಕೂಟರ್ ಅನ್ನು ಸ್ವೀಕರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಟಿವಿಎಸ್ ಐಕ್ಯೂಬ್ ವಿಶೇಷಗಳು

ಟಿವಿಎಸ್ ಐಕ್ಯೂಬ್ ಆರು ವೇರಿಯೆಂಟ್‌ಗಳು ಮತ್ತು 12 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಬೆಲೆಯು ರೂ. 1.15 ಲಕ್ಷ (ಎಕ್ಸ್‌ ಶೊರೂಂ) ದಿಂದ ರೂ.1.72 ಲಕ್ಷ(ಎಕ್ಸ್‌ ಶೊರೂಂ) ದವರೆಗೆ ಇದೆ. ಬ್ಯಾಟರಿ ಆಯ್ಕೆಗಳು 2.2 kWh ನಿಂದ ಆರಂಭವಾಗುತ್ತದೆ. ಈ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 94 ಕಿ.ಮೀ ಓಡಿಸಬಹುದು.

best-electric-scooter-in-india-tvs-iqube-sales-crossed-8-lakh

ಹಾಗೆಯೇ ಟಾಪ್ ವೇರಿಯೆಂಟ್ 5.3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು ಇದನ್ನು ಒಮ್ಮೆ ಚಾರ್ಜ್ ಮಾಡಿದ 212 ಕೀ.ಮೀ ಓಡಿಸಬಹುದು. 4.4 kW BLDC ಹಬ್ ಮೋಟಾರ್ ಒಳಗೊಂಡಿರುವ ಈ ಸ್ಕೂಟರ್, ವೇರಿಯೆಂಟ್ ಅವಲಂಭಿಸಿ 75 (ಬೇಸ್‌ ವೇರಿಯೆಂಟ್) ಕಿ.ಮೀ ನಿಂದ 82 (ಟಾಪ್ ವೇರಿಯೆಂಟ್) ಕಿ.ಮೀವರೆಗೆ ಟಾಪ್ ಸ್ಪೀಡ್ ಹೋಗಬಲ್ಲದು. ನಗರದ ಟ್ರಾಫಿಕ್‌ನಲ್ಲಿ ತ್ವರಿತ ವೇಗ ನೀಡುವ ಈ ಎಲೆಕ್ಟ್ರಿಕ್ ಸ್ಕೂಟರ್, ಕೇವಲ 4.2 ಸೆಕೆಂಡುಗಳಲ್ಲಿ 40 ಕಿ.ಮೀ ಸ್ಪೀಡ್ ತಲುಪಬಲ್ಲದು.

ವಿನ್ಯಾಸ ದೃಷ್ಟಿಯಿಂದ ಐಕ್ಯೂಬ್‌ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಾಕರ್ಷಕ ಲುಕ್ ಹೊಂದಿದ್ದು, ಹ್ಯಾಂಡಲ್‌ಬಾರ್ ಕೌಲ್‌ನಲ್ಲಿ U- ಆಕಾರದ LED DRL ಜೊತೆಗೆ LED ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಅನ್ನು ಹೊಂದಿದೆ. ಇಷ್ಟೇ ಅಲ್ಲದೆ, ವಿಶಾಲವಾದ ಫುಟ್‌ಬೋರ್ಡ್, ದೊಡ್ಡದಾದ ಸ್ಟೋರೇಜ್ ಕಂಪಾರ್ಟ್‌ಮೆಂಟ್ ಹಾಗೂ ಲಗೇಜ್ ಹುಕ್ ಅನ್ನು ಪಡೆದಿದ್ದು, USB ಚಾರ್ಜಿಂಗ್ ಸಾಕೆಟ್ ಕೂಡ ಇದೆ.

best-electric-scooter-in-india-tvs-iqube-sales-crossed-8-lakh

ಟಿವಿಎಸ್ ಐಕ್ಯೂಬ್ ಫುಲ್-ಎಲ್ಇಡಿ ಲೈಟಿಂಗ್ ಜೊತೆಗೆ ಫುಲ್-ಕಲರ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ರೈಡಿಂಗ್ ಅಂಕಿಅಂಶಗಳು, ರಿಮೋಟ್ ಬ್ಯಾಟರಿ ರೇಂಜ್ ಮತ್ತು ಜಿಯೋ ಫೆನ್ಸಿಂಗ್‌ನಂತಹ ವಿವಿಧ ಮಾಹಿತಿಗಳನ್ನು ಪಡೆಯಲು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಡಿಸ್ಪ್ಲೆಯನ್ನು ಕನೆಕ್ಟ್ ಮಾಡಬಹುದು. ಇನ್-ಕಾಮಿಂಗ್ ಕಾಲ್, ಮೆಸೇಜ್ ನೋಟಿಫಿಕೇಶನ್ ಅನ್ನು ಕೂಡ ತೋರಿಸುತ್ತದೆ. ಸುಲಭ ಪಾರ್ಕಿಂಗ್‌ಗಾಗಿ Q-ಪಾರ್ಕ್ ವೈಶಿಷ್ಟ್ಯವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಇಂಧನ ದರ ಹೆಚ್ಚಳವಾಗಿದ್ದು, ಗ್ರಾಹಕರು ನಿಧಾನವಾಗಿ ಇವಿ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಅದರಂತೆ ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಬಜಾಜ್ ಹಾಗೂ ಟಿವಿಎಸ್ ತಮ್ಮ ಚೇತಕ್ ಹಾಗೂ ಐಕ್ಯೂಬ್ ಮೂಲಕ ಇವಿ ವಿಭಾಗವನ್ನು ಆಳುತ್ತಿವೆ.

More from DriveSpark

Article Published On: Tuesday, January 27, 2026, 13:02 [IST]
English summary
Best electric scooter in india tvs iqube sales crossed 8 lakh
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+