ಬಡವರ ಬಂಡಿಗಳು.. ಕಚೇರಿಗೆ ಹೋಗಲು ಬೆಸ್ಟ್, ರೂ.64,950 ದಿಂದ ಶುರು.. 50 ಕಿ.ಮೀಗೂ ಹೆಚ್ಚಿನ ಮೈಲೇಜ್!
'ದ್ವಿಚಕ್ರ ವಾಹನಗಳು' ಜನ ಜೀವನದ ಅವಿಭಾಗ್ಯ ಅಂಗವಾಗಿ ಬಿಟ್ಟಿವೆ. ಅದರಲ್ಲೂ ಪ್ರತಿನಿತ್ಯ ಕಚೇರಿಗೆ ತೆರಳುವ ಪುರುಷ ಹಾಗೂ ಮಹಿಳೆಯರಿಗೆ ಸ್ಕೂಟರ್‌ಗಳು ಬೇಕೇ ಬೇಕು. ಇವು ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿವೆ. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, 110 ಸಿಸಿ ವಿಭಾಗದಲ್ಲಿ ಲಭ್ಯವಾಗುವಾಗ ಹೋಂಡಾ ಆಕ್ಟಿವಾ, ಟಿವಿಎಸ್ ಜೆಸ್ಟ್, ಹೋಂಡಾ ಡಿಯೋ, ಟಿವಿಎಸ್ ಜುಪಿಟರ್ ಹಾಗೂ ಹೀರೋ ಜೂಮ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಈ ಸ್ಕೂಟರ್‌ಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
ಹೋಂಡಾ ಆಕ್ಟಿವಾ 110 (Honda Activa 110):
ಇದೊಂದು ಜನಪ್ರಿಯ ಸ್ಕೂಟರ್ ಎಂದೇ ಹೆಸರುವಾಸಿಯಾಗಿದ್ದು, ಅಗ್ಗದ ದರದಲ್ಲೂ ಲಭ್ಯವಿದೆ. ರೂ.75,433 ರಿಂದ ರೂ.89,806 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಡೀಸೆಂಟ್ ಬ್ಲೂ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಹಾಗೂ ರೆಬೆಲ್ ರೆಡ್ ಮೆಟಾಲಿಕ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ 'ಆಕ್ಟಿವಾ' 109.51 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 50 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯಂತಹ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.
ಟಿವಿಎಸ್ ಜೆಸ್ಟ್ 110 (TVS Zest 110):
ಈ ಸ್ಕೂಟರ್‌ನ್ನು ಮಹಿಳೆಯರಿಗಾಗಿಯೇ ಸಿದ್ದಪಡಿಸಲಾಗಿದೆ. ಅದಕ್ಕೆ ತಕ್ಕಂತೆ ರೂ.64,950 ರಿಂದ ರೂ.70,850 (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಬೋಲ್ಡ್ ಬ್ಲ್ಯಾಕ್, ಗ್ರ್ಯಾಫೈಟ್ ಗ್ರೇ, ಮ್ಯಾಟ್ ಬ್ಲ್ಯಾಕ್, ಮ್ಯಾಟ್ ಬ್ಲೂ, ಪರ್ಪಲ್, ಮ್ಯಾಟ್ ರೆಡ್ ಮತ್ತು ಪರ್ಲ್ ವೈಟ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಹೊಸ 'ಜೆಸ್ಟ್' ಸ್ಕೂಟರ್ 109.7 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 50 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಹೋಂಡಾ ಡಿಯೋ 110 (Honda Dio 110):
ಇದು ಪ್ರಖ್ಯಾತ ಸ್ಕೂಟರ್ ಆಗಿದ್ದು, ಯುವ ಜನರಿಗಾಗಿಯೇ ತಯಾರಿಸಲಾಗಿದೆ. ರೂ.70,159 ರಿಂದ ರೂ.81,836 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 109.51 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 50 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಯುಎಸ್‌ಬಿ-ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಟಿವಿಎಸ್ ಜುಪಿಟರ್ 110 (TVS Jupiter 110):
ಈ ಸ್ಕೂಟರ್‌ನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ರೂ.76.150 ರಿಂದ ರೂ.88,350 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 113 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 50 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಪುಲ್ ಡಿಜಿಟಲ್ ಕಲರ್ ಇನ್ಸ್ಟ್ರುಮೆಂಟ್ ಕನ್ಸೋಲ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

ಹೀರೋ ಜೂಮ್ 110 (Hero Xoom 110):
ಇದೊಂದು ನಂಬಿಕಾರ್ಹ ಸ್ಕೂಟರ್ ಆಗಿದೆ. ರೂ.76,251 ರಿಂದ ರೂ.81,920 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 110.9 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 53 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಫೋನ್ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ಹಲವು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.


Click it and Unblock the Notifications








