ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ: ಬೈಕ್ ಸವಾರರು ಸುರಕ್ಷಿತವಾಗಿರಲು ಈ 3 ವಸ್ತುಗಳು ಕಡ್ಡಾಯ!
2026 ರ ನವೆಂಬರ್ 21 ರ ಶನಿವಾರ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಮತ್ತಷ್ಟು ಹದಗೆಟ್ಟಿದೆ. ಬೆಳಿಗ್ಗೆ 7 ಗಂಟೆಯ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದತ್ತಾಂಶದ ಪ್ರಕಾರ, ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 279 ರಷ್ಟಿದ್ದು, 'ಕಳಪೆ' ವಿಭಾಗದಲ್ಲಿದೆ. ಶುಕ್ರವಾರ ದಾಖಲಾಗಿದ್ದ 270 ಕ್ಕೆ ಹೋಲಿಸಿದರೆ ಇದು ತುಸು ಹೆಚ್ಚಾಗಿದೆ. ಬೆಳಗಿನ ಜಾವ ಗಾಳಿಯ ವೇಗ ಕಡಿಮೆಯಿದ್ದಿದ್ದರಿಂದ ಮಾಲಿನ್ಯಕಾರಕಗಳು ವಾತಾವರಣದಲ್ಲಿ ಬೇಗನೆ ಕರಗಲಿಲ್ಲ. ಹೀಗಾಗಿ, ದ್ವಿಚಕ್ರ ವಾಹನ ಸವಾರರಿಗೆ ಸೂಕ್ತ ರಕ್ಷಣೆ ಹಾಗೂ ಸ್ಪಷ್ಟ ಚಾಲನಾ ದೃಷ್ಟಿ ಅತ್ಯಗತ್ಯ. ನಿಮ್ಮ ಸುರಕ್ಷತೆಗೆ ತಕ್ಷಣವೇ ಖರೀದಿಸಬಹುದಾದ ಬೆಸ್ಟ್ ಮಾಸ್ಕ್ ಹಾಗೂ ವೈಸರ್ ಆಯ್ಕೆಗಳು ಇಲ್ಲಿವೆ ನೋಡಿ.
ಅಧಿಕೃತ ವರದಿಗಳು ಮತ್ತು ಮಾಧ್ಯಮ ಬುಲೆಟಿನ್‌ಗಳ ಪ್ರಕಾರ ನಗರದಾದ್ಯಂತ ಗಾಳಿಯ ಸ್ಥಿತಿ ಕಳಪೆಯಾಗಿಯೇ ಇದೆ. ಬೇರೆ ಬೇರೆ ಪ್ರದೇಶಗಳಲ್ಲಿ ಗಾಳಿಯ ಮಾಲಿನ್ಯದ ಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಹೀಗಾಗಿ ಸಿಗ್ನಲ್‌ಗಳಲ್ಲಿ ವಾಹನಗಳನ್ನು ಸುಮ್ಮನೆ ಸ್ಟಾರ್ಟ್‌ನಲ್ಲಿಡುವುದು (idling) ಮತ್ತು ವಿಪರೀತ ಟ್ರಾಫಿಕ್ ಇರುವ ರಸ್ತೆಗಳಲ್ಲಿ ಸಂಚರಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಬೈಕ್ ರೈಡ್‌ಗೂ ಮುನ್ನ ಸಿಪಿಸಿಬಿ (CPCB) ವೆಬ್‌ಸೈಟ್/ಆಪ್‌ನಲ್ಲಿ ನಿಮ್ಮ ಹತ್ತಿರದ ಲೊಕೇಶನ್‌ನ AQI ಚೆಕ್ ಮಾಡಿ. ಒಂದು ವೇಳೆ ಮಾಲಿನ್ಯದ ಪ್ರಮಾಣ ವೇಗವಾಗಿ ಏರುತ್ತಿದ್ದರೆ, ಹೊರಡುವುದನ್ನು ಕೊಂಚ ತಡ ಮಾಡಿ ಅಥವಾ ಟ್ರಾಫಿಕ್ ಕಮ್ಮಿ ಇರುವ ಪರ್ಯಾಯ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಿ.

ಹೆಲ್ಮೆಟ್‌ಗೆ ಸೂಕ್ತವಾಗಿ ಹೊಂದುವ N95/N99 ಮಾಸ್ಕ್‌ಗಳು
ನಿಮ್ಮ ಹೆಲ್ಮೆಟ್ ಒಳಗಡೆ ಆರಾಮವಾಗಿ ಫಿಟ್ ಆಗುವಂತಹ 'ವಾಲ್ವ್ ರಹಿತ' N95 ಅಥವಾ FFP2 ರಿಸ್ಪಿರೇಟರ್ ಮಾಸ್ಕ್ ಆಯ್ಕೆ ಮಾಡಿಕೊಳ್ಳಿ. ವಾಲ್ವ್ ಇರುವ ಮಾಸ್ಕ್‌ಗಳು ಉಸಿರಾಡುವಾಗ ಫಿಲ್ಟರ್ ಆಗದ ಗಾಳಿಯನ್ನು ಹೊರಬಿಡುವುದರಿಂದ ಟ್ರಾಫಿಕ್ ಪ್ರದೇಶಗಳಲ್ಲಿ ಪೂರ್ಣ ರಕ್ಷಣೆ ನೀಡುವುದಿಲ್ಲ. ಫುಲ್-ಫೇಸ್ ಅಥವಾ ಫ್ಲಿಪ್-ಅಪ್ ಹೆಲ್ಮೆಟ್ ಧರಿಸುವಾಗ ಇಯರ್‌ಲೂಪ್‌ಗಳಿಗಿಂತ 'ಹೆಡ್‌ಬ್ಯಾಂಡ್' ಇರುವ ಮಾಸ್ಕ್‌ಗಳೇ ಸೂಕ್ತ ಗ್ರಿಪ್ ನೀಡುತ್ತವೆ. ನಕಲಿ ಮಾಸ್ಕ್‌ಗಳಿಂದ ಬಚಾವಾಗಲು FFP2 ಮಾಸ್ಕ್‌ಗಳಲ್ಲಿ 'BIS IS 9473' ಮಾರ್ಕ್ ಇದೆಯೇ ಅಥವಾ N95 ನಲ್ಲಿ 'NIOSH ಟಿಸಿ' (TC) ನಂಬರ್ ಇದೆಯೇ ಎಂಬುದನ್ನು ಪರಿಶೀಲಿಸಿ.
ಹೆಲ್ಮೆಟ್ ವೈಸರ್ ಮಂಜು ಮುಸುಕದಂತೆ ತಡೆಯಲು ಇಂದೇ ಇವುಗಳನ್ನು ಬಳಸಿ
ರೈಡಿಂಗ್ ವೇಳೆ ಹೆಲ್ಮೆಟ್ ವೈಸರ್ ಮೇಲೆ ಮಂಜು ಮುಸುಕುವುದನ್ನು ತಡೆಯಲು 'ಪಿನ್‌ಲಾಕ್ ಇನ್ಸರ್ಟ್' (Pinlock insert) ಬಳಸಿ. ಇದು ತೇವಾಂಶವನ್ನು ಹೀರಿಕೊಂಡು ವೈಸರ್ ಕ್ಲಿಯರ್ ಆಗಿಡುವಂತೆ ಮಾಡುತ್ತದೆ. ನಿಮ್ಮ ಹೆಲ್ಮೆಟ್ ವೈಸರ್ ಪಿನ್‌ಲಾಕ್ ಬೆಂಬಲಿಸಿದರೆ, ಸರಿಯಾದ ಸೈಜ್‌ನ ಇನ್ಸರ್ಟ್ ಫಿಟ್ ಮಾಡಿ. ಇದರ ಜೊತೆಗೆ ಹೆಲ್ಮೆಟ್‌ನ ಬ್ರೀತ್ ಡಿಫ್ಲೆಕ್ಟರ್ ಬಳಸಿ ಮತ್ತು ಚಿನ್ ವೆಂಟ್ (chin vent) ತೆರೆದಿಡಿ. ಟ್ರಾಫಿಕ್‌ನಲ್ಲಿ ನಿಧಾನವಾಗಿ ಸಾಗುವಾಗ, ವೈಸರ್ ಅನ್ನು ಸ್ವಲ್ಪವೇ ಓಪನ್ (micro-venting) ಮಾಡುವುದರಿಂದ ಒಳಗಿನ ಹಾವಿ ತಕ್ಷಣವೇ ಹೊರಹೋಗುತ್ತದೆ.
ಚಳಿಗಾಲದ ರೈಡಿಂಗ್ ಗೇರ್‌ಗಳು: ₹399 ರಿಂದ ₹2,499 ರ ಕ್ವಿಕ್ ಗೈಡ್
ಚಳಿಗಾಲದ ರೈಡಿಂಗ್ ಆರಾಮದಾಯಕವಾಗಿರಲು ಸರಿಯಾದ ಗೇರ್‌ಗಳನ್ನು ಧರಿಸಿ. ತೆಳುವಾದ ಬಾಲಾಕ್ಲಾವಾ (Balaclava) ಧರಿಸುವುದರಿಂದ ಚಳಿ ಮತ್ತು ತಣ್ಣನೆಯ ಗಾಳಿಯಿಂದ ರಕ್ಷಣೆ ಸಿಗುತ್ತದೆ. ರಾತ್ರಿ ಅಥವಾ ಸಂಜೆ ವೇಳೆ ಪಾರದರ್ಶಕ (Clear) ವೈಸರ್‌ಗಳನ್ನೇ ಬಳಸಿ, ಟಿಂಟೆಡ್ (ರಂಗಿನ) ವೈಸರ್‌ಗಳು ಹಗಲಿಗೆ ಮಾತ್ರ ಸೂಕ್ತ. ಪ್ರಸ್ತುತ ಮಾರುಕಟ್ಟೆಯಲ್ಲಿ ₹399–₹699 ಬೆಲೆಯ ಆಂಟಿ-ಫಾಗ್ ಸ್ಪ್ರೇಗಳು, ₹899–₹1,499 ಬೆಲೆಯ ಪಿನ್‌ಲಾಕ್ ಇನ್ಸರ್ಟ್‌ಗಳು, ₹499–₹899 ಬೆಲೆಯ ಬಾಲಾಕ್ಲಾವಾ ಹಾಗೂ ₹1,499–₹2,499 ಬೆಲೆಯ ಇನ್ಸುಲೇಟೆಡ್ ಗ್ಲೌಸ್‌ಗಳು ಲಭ್ಯವಿವೆ. ಬ್ರ್ಯಾಂಡ್ ಲೋಗೋಗಿಂತ ನಿಮಗೆ ಕಂಫರ್ಟ್ ಕೊಡುವ ಫಿಟ್ಟಿಂಗ್ ಮತ್ತು ಬಾಳಿಕೆಗೆ ಹೆಚ್ಚಿನ ಆದ್ಯತೆ ನೀಡಿ.


Click it and Unblock the Notifications
