ಭಾರತದಲ್ಲಿ ಹೊಸ ಬೈಕ್ ಬಿಡುಗಡೆ: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ... ಹತ್ತು ಕಾರು ಖರೀದಿಸಬಹುದು!
ಐಷಾರಾಮಿ ಮೋಟಾರ್‌ಸೈಕಲ್ ಬ್ರಾಂಡ್ ಆಗಿರುವ ಡುಕಾಟಿ ಇಂದು ಭಾರತದಲ್ಲಿ ಹೊಸ ಪ್ಯಾನಿಗೇಲ್ V4 R ಅನ್ನು ಬಿಡುಗಡೆ ಮಾಡಿದೆ. ಖರೀದಿಸುವ ಪ್ರತಿಯೊಂದು ಪ್ಯಾನಿಗೇಲ್ V4 R ಬೈಕ್‌ನ್ನು ಸಂಖ್ಯೆಯ ಸರಣಿಯಲ್ಲಿ ಉತ್ಪಾದಿಸಲಾಗುತ್ತದೆ, ಮಾಡಲ್ ಹೆಸರು ಮತ್ತು ಸರಣಿ ಸಂಖ್ಯೆಯನ್ನು ಅದರ ಮೇಲೆ ಪ್ರದರ್ಶಿಸಲಾಗುತ್ತದೆ. ವಿಶ್ವ ಸೂಪರ್‌ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ನಿರ್ಮಿಸಲಾದ ಪ್ಯಾನಿಗೇಲ್ V4 R, ಉತ್ಸಾಹಿಗಳಿಗೆ ಸ್ಪೋರ್ಟಿ ಬೈಕಿಂಗ್‌ನ ಉತ್ತುಂಗವನ್ನು ನೀಡುತ್ತದೆ. ರೇಸಿಂಗ್ ಪ್ರಪಂಚದಿಂದ ನೇರವಾಗಿ ಪಡೆದ ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದ್ದು, ಈ ಫೀಚರ್‌ಗಳು ಸಾಮಾನ್ಯ ಮೋಟಾರ್‌ಸೈಕಲ್‌ಗಳಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ ಎಂದು ಡುಕಾಟಿ ತಿಳಿಸಿದೆ.
ಪ್ಯಾನಿಗೇಲ್ V4 R 998 ಸಿಸಿ ಡೆಸ್ಮೊಸೆಡಿಸಿ ಸ್ಟ್ರಾಡೇಲ್ ಆರ್ ಎಂಜಿನ್ ಹೊಂದಿದ್ದು, ಇದನ್ನು ಸ್ಪರ್ಧಿಸಲು ಮತ್ತು ಗೆಲ್ಲಲು ವಿನ್ಯಾಸಗೊಳಿಸಲಾಗಿದೆ. ಆರನೇ ಗೇರ್‌ನಲ್ಲಿ 16,500 ಆರ್‌ಪಿಎಂ ಗರಿಷ್ಠ ಎಂಜಿನ್ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರುವ ಇದು 15,500 ಆರ್‌ಪಿಎಂನಲ್ಲಿ 218 ಎಚ್‌ಪಿ ಗರಿಷ್ಠ ಪವರ್ ನೀಡುತ್ತದೆ. ಈ ಎಂಜಿನ್ ಅನ್ನು ಡುಕಾಟಿಯ ಮೋಟೋಜಿಪಿ ಅಭಿವೃದ್ಧಿಯಿಂದ ನೇರವಾಗಿ ಪಡೆಯಲಾಗಿದೆ.

ರೇಸಿಂಗ್ ಎಕ್ಸಾಸ್ಟ್ ಅನ್ನು ಅಳವಡಿಸುವ ಮೂಲಕ ಎಂಜಿನ್‌ನ ಸಂಪೂರ್ಣ ಸಾಮರ್ಥ್ಯವನ್ನು ಟ್ರ್ಯಾಕ್‌ನಲ್ಲಿ ಬಿಡುಗಡೆ ಮಾಡಬಹುದು. ಇದು 235 ಎಚ್‌ಪಿ ಪವರ್ ತಲುಪಲು ಅನುವು ಮಾಡಿಕೊಡುತ್ತದೆ. ಡುಕಾಟಿ ಕೋರ್ಸೆ ಪರ್ಫಾರ್ಮೆನ್ಸ್ ಆಯಿಲ್ ಬಳಕೆಯಿಂದ ನಂಬಲಾಗದ 239 ಎಚ್‌ಪಿ ಪವರ್‌ಗೆ ಏರುತ್ತದೆ. ರೇಸಿಂಗ್ ಎಕ್ಸಾಸ್ಟ್‌ನೊಂದಿಗೆ, ಪ್ಯಾನಿಗೇಲ್ ವಿ 4 ಆರ್ 330 ಕಿ.ಮೀ/ಗಂ ಗರಿಷ್ಠ ವೇಗವನ್ನು ಮೀರಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಬೆಲೆ ಮತ್ತು ಲಭ್ಯತೆ: ಡುಕಾಟಿ ಪ್ಯಾನಿಗೇಲ್ V4 R ಬೆಲೆಯು ರೂ. 84.99 ಲಕ್ಷ (ಎಕ್ಸ್-ಶೋರೂಂ) ಇದೆ. ಇದು ಐಕಾನಿಕ್ ಡುಕಾಟಿ ರೆಡ್ ಲಿವರಿಯಲ್ಲಿ ಖರೀದಿಗೆ ಲಭ್ಯವಿದೆ. ಭಾರತದ ಎಲ್ಲಾ ಡುಕಾಟಿ ಡೀಲರ್‌ಶಿಪ್‌ಗಳಲ್ಲಿ ಬುಕಿಂಗ್‌ಗಳು ಈಗ ತೆರೆದಿವೆ. ಇದು ಎಕ್ಸ್ ಶೋರೂಂ ಬೆಲೆಯಾಗಿದ್ದು, ಆನ್‌ರೋಡ್ ಬೆಲೆ 1 ಕೋಟಿ ರೂ. ಮೀರಬಹುದು ಎಂದು ಹೇಳಲಾಗಿದೆ.

ಪ್ರತ್ತುತ ಬೆಂಗಳೂರಿನಲ್ಲಿ ಸ್ವಿಫ್ಟ್ ZXI Plus ವೇರಿಯೆಂಟ್ ಆನ್ ರೋಡ್ ಬೆಲೆಯು 10 ಲಕ್ಷವಿದೆ. ಈ ಬೈಕ್ ಬೆಲೆಯಲ್ಲಿ ಸುಲಭವಾಗಿ ನಾವು 10 ಸ್ವಿಫ್ಟ್ ಕಾರುಗಳನ್ನು ಖರೀದಿಸಬಹುದು. ಐದು ಮಂದಿ ಪ್ರಯಾಣಿಸುವ ಕಾರಿಗಿಂತ ಈ ಬೈಕ್ ಬೆಲೆ ಅಷ್ಟು ಹೆಚ್ಚಿರಲು ಎಂಜಿನ್ ಮಾತ್ರವಲ್ಲದೆ ಇನ್ನೂ ಹಲವು ಕಾರಣಗಳಿವೆ. ಅವುಗಳಲ್ಲಿ ಇದರ ಫೀಚರ್ಸ್ ಎಂದು ಹೇಳಬಹುದು, ಅವು ಈ ಕೆಳಗಿವೆ.
ತ್ವರಿತ ಲೆವಲ್ ಬದಲಾವಣೆಗಳಿಗಾಗಿ ಬಟನ್‌ಗಳು, 8:3 ಆಕಾರ ರೇಷಿಯೋದೊಂದಿಗೆ ಹೊಸ 6.9" ಪೂರ್ಣ-TFT ಡ್ಯಾಶ್‌ಬೋರ್ಡ್, ರೈಡಿಂಗ್ ಮೋಡ್‌ಗಳು (ರೇಸ್ A, ರೇಸ್ B, ಸ್ಪೋರ್ಟ್, ರೋಡ್, ವೆಟ್), ಹೆಡ್‌ಲೈಟ್‌ನಲ್ಲಿ ಸಂಯೋಜಿಸಲಾದ DRL ಗಳು ಮತ್ತು ಟರ್ನ್ ಇಂಡಿಕೇಟರ್‌ಗಳೊಂದಿಗೆ ಪೂರ್ಣ - LED ಹೆಡ್‌ಲೈಟ್ ಸೆಟಪ್, ಈ ಬೈಕ್ ಇಂಧನವಿಲ್ಲದೆ 186.5 ಕೆ.ಜಿ ತೂಕವಿರುತ್ತದೆ, 17-ಲೀಟರ್ ಅಲ್ಯೂಮಿನಿಯಂ ಇಂಧನ ಟ್ಯಾಂಕ್ ಹೊಂದಿದೆ.
125 ಎಂಎಂ ಮ್ಯಾನುವಲ್ಲಿ ಅಡ್ಜಸ್ಟಬಲ್ Öhlins NPX 25-30 ಪ್ರಷರ್ ಫೋರ್ಕ್, 316 ಎಂಎಂ ವೀಲ್‌ಬೇಸ್‌ನೊಂದಿಗೆ ಮ್ಯಾನುವಲ್ಲಿ ಅಡ್ಜಸ್ಟಬಲ್ Öhlins TTX36 ಶಾಕ್ ಅಬ್ಸಾರ್ಬರ್, 316 ಎಂಎಂ ವೀಲ್‌ಬೇಸ್‌ನೊಂದಿಗೆ ಮ್ಯಾನುವಲ್ಲಿ ಅಡ್ಜಸ್ಟಬಲ್ Öhlins ಸ್ಟೀರಿಂಗ್ ಡ್ಯಾಂಪರ್, ಖೋಜ್ಡ್ ಅಲ್ಯೂಮಿನಿಯಂ ವೀಲ್‌ಗಳು, ಲಿಥಿಯಂ ಬ್ಯಾಟರಿ, ಬ್ರೆಂಬೊ ಹೈಪ್ಯೂರ್ ಮೊನೊಬ್ಲಾಕ್ ಕ್ಯಾಲಿಪರ್‌ಗಳೊಂದಿಗೆ ಬ್ರೇಕಿಂಗ್ ಸಿಸ್ಟಮ್ ಒದಗಿಸಲಾಗಿದೆ.
ಸುರಕ್ಷತೆಗಾಗಿ 6-ಆಕ್ಸಿಸ್ ಇನರ್ಶಿಯಲ್ ಮಾಪನ ಘಟಕ (6D IMU), ಸಂಯೋಜಿತ ಬ್ರೇಕಿಂಗ್ ಮತ್ತು ರೇಸ್ ಬ್ರೇಕ್ ನಿಯಂತ್ರಣದೊಂದಿಗೆ ABS ಕಾರ್ನರಿಂಗ್, ಡುಕಾಟಿ ಟ್ರಾಕ್ಷನ್ ಕಂಟ್ರೋಲ್ (DTC) DVO, ಡುಕಾಟಿ ಸ್ಲೈಡ್ ಕಂಟ್ರೋಲ್ (DSC), ಡುಕಾಟಿ ವೀಲಿ ಕಂಟ್ರೋಲ್ (DWC) DVO, ಡುಕಾಟಿ ಪವರ್ ಲಾಂಚ್ (DPL) DVO, ಡುಕಾಟಿ ಕ್ವಿಕ್ ಶಿಫ್ಟ್ (DQS) 2.0, ಎಂಜಿನ್ ಬ್ರೇಕ್ ಕಂಟ್ರೋಲ್ (EBC) ನೀಡಲಾಗಿದೆ.


Click it and Unblock the Notifications








