ಹೊಸ ಹೋಂಡಾ ಶೈನ್ vs ಹೀರೋ ಸೂಪರ್ ಸ್ಪ್ಲೆಂಡರ್: ಅಗ್ಗದ ಬೈಕ್‌ಗಳಿವು.. ಮಧ್ಯಮ ವರ್ಗದವರಿಗೆ ಪರ್ಫೆಕ್ಟ್, ಯಾವುದು ಬೆಸ್ಟ್?
ಇತ್ತೀಚೆಗೆ ಹೊಸ ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್ (Honda Shine 125 Limited Edition) ಮೋಟಾರ್‌ಸೈಕಲ್‌ನ್ನು ಮಾರಾಟಕ್ಕೆ ತರಲಾಗಿತ್ತು. ಇದಕ್ಕೆ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ (Hero Super Splendor XTEC) ಪ್ರಬಲವಾದ ಪ್ರತಿಸ್ಪರ್ಧಿಯಾಗಿದ್ದು, ಯುವ ಗ್ರಾಹಕರಿಗೆ ಹೇಳಿ ಮಾಡಿಸಿದಂತಿವೆ. ದಿನಬಳಕೆಗೂ ಹೆಸರು ಸೂಕ್ತವಾಗಿವೆ. ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿವೆ. ನಾವಿಲ್ಲಿ ಇವೆರೆಡು ಬೈಕ್‌ಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಬೆಲೆ (Price):
ನೂತನ 'ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್' ರೂ.86,211 ಬೆಲೆಯನ್ನು ಹೊಂದಿದೆ. 'ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್' ರೂ.82,248 ರಿಂದ ರೂ.85,844 ದರವನ್ನು ಪಡೆದಿದೆ. ದರದ ವಿಚಾರದಲ್ಲಿ 'ಶೈನ್ ಲಿಮಿಟೆಡ್ ಎಡಿಷನ್' ಹೋಲಿಕೆ ಮಾಡಿದರೆ 'ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್' ಸ್ವಲ್ಪ ಮಟ್ಟಿಗೆ ಅಗ್ಗವಾಗಿದೆ.

ವಿನ್ಯಾಸ (Design):
ಈ ಬೈಕ್‌ಗಳು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿವೆ. 'ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್' ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ಮತ್ತು ಎಕ್ಸಾಸ್ಟ್ ಮಫ್ಲರ್ ಕವರ್‌ನ್ನು ಒಳಗೊಂಡಿದೆ. 'ಪರ್ಲ್ ಸೈರನ್ ಬ್ಲೂ' ಎಂಬ ಬಣ್ಣದೊಂದಿಗೂ ಸಿಗುತ್ತದೆ. 162 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,285 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.
'ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್' ಎಲ್ಇಡಿ ಹೆಡ್‌ಲ್ಯಾಂಪ್, ಇಂಟಿಗ್ರೇಟೆಡ್ ಡಿಆರ್‌ಎಲ್ ಮತ್ತು ಟೈಲ್ ಲ್ಯಾಂಪ್‌ನ್ನು ಒಳಗೊಂಡಿದೆ. ಮ್ಯಾಟ್ ನೆಕ್ಸಸ್ ಬ್ಲೂ, ಮ್ಯಾಟ್ ಗ್ರೇ, ಬ್ಲ್ಯಾಕ್ ಮತ್ತು ಕ್ಯಾಂಡಿ ಬ್ಲೇಜಿಂಗ್ ರೆಡ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 180 ಮಿ.ಮೀ ಗ್ರೌಂಡ್ ಕಿಯರೆನ್ಸ್ ಮತ್ತು 1267 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ.

ಕಾರ್ಯಕ್ಷಮತೆ (Performance):
ಇವೆರೆಡು ಮೋಟಾರ್‌ಸೈಕಲ್‌ಗಳು ಸಾಕಷ್ಟು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿವೆ. 'ಶೈನ್ 125 ಲಿಮಿಟೆಡ್ ಎಡಿಷನ್' 123.94-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 10.63 ಪಿಎಸ್ ಅಶ್ವ ಶಕ್ತಿ ಮತ್ತು 11 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 50 ರಿಂದ 60 ಕಿಲೋಮೀಟರ್‌ವರೆಗೂ ಮೈಲೇಜ್ ಕೊಡುತ್ತದೆ. 10.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ತನ್ನದಾಗಿಸಿಕೊಂಡಿದೆ.
'ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್' 124.7-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 10.72 ಪಿಎಸ್ ಅಶ್ವ ಶಕ್ತಿ ಹಾಗೂ 10.6 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಜೊತೆಗೆ 69 ಕಿಲೋಮೀಟರ್‌ವರೆಗೂ ನೀಡುತ್ತದೆ. 12 ಲೀಟರ್ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.
ವೈಶಿಷ್ಟ್ಯಗಳು (Features):
ಈ ಬೈಕ್‌ಗಳು ನಾನಾ ಬಗೆಯ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿವೆ. 'ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್' ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳನ್ನು ಒಳಗೊಂಡಿದೆ. ಸವಾರರ ರಕ್ಷಣೆಯಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಹಾಗೂ ಹಿಂಭಾಗ (ರೇರ್) ಡುಯಲ್-ರೇರ್ ಸ್ಪ್ರಿಂಗ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. 18-ಇಂಚಿನ ಅಲಾಯ್ ವೀಲ್‌ಗಳು & ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ.
'ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್' ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಐಡಲ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, ಎಂಜಿನ್ ಕಿಲ್ ಸ್ವೀಚ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) ಡುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. 18-ಇಂಚಿನ ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ತನ್ನದಾಗಿಸಿಕೊಂಡಿದೆ.


Click it and Unblock the Notifications








