Jawa: ನಿನ್ನೆಯಷ್ಟೆ ಜಾವಾ 42 ಐವರಿ ಎಡಿಷನ್ ಬಿಡುಗಡೆ: ಬರೀ 1.8 ಲಕ್ಷ ಬೆಲೆ... ವಿಂಟೇಜ್ ಲುಕ್

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ (Jawa Yezdi Motorcycles), ತನ್ನ ಹೊಸ ಜಾವಾ 42 ಮೋಟಾರ್‌ಸೈಕಲ್‌ನ 'ಐವರಿ ಎಡಿಷನ್' ಅನ್ನು ಕೇವಲ ರೂ. 1,84,950 (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಬೈಕ್, ಐಲ್ ಆಫ್ ಮ್ಯಾನ್ ಟಿಟಿ ಯುಗದ ರೇಸಿಂಗ್ ಬೈಕ್‌ಗಳನ್ನು ನೆನಪಿಸುತ್ತದೆ, ಜಾವಾ 42 ರ ಆಧುನಿಕ ಎಂಜಿನಿಯರಿಂಗ್‌ನೊಂದಿಗೆ ವಿಂಟೇಜ್ ವೇಗದ ಸೌಂದರ್ಯವನ್ನು ಮಿಶ್ರಣ ಮಾಡುತ್ತದೆ. ಈ ಬೈಕ್ ಕುರಿತ ಪ್ರಮುಖ ವಿಷಯಗಳು ಇಲ್ಲಿವೆ.

ಪ್ರತಿಯೊಬ್ಬ ಸವಾರರಿಗೂ ಮಾಲೀಕತ್ವ ಭರವಸೆ: ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಗ್ರಾಹಕರ ತೃಪ್ತಿ ಮತ್ತು ತೊಂದರೆ - ಮುಕ್ತ ಮಾಲೀಕತ್ವಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಉದ್ಯಮ-ಮೊದಲ ಮಾಲೀಕತ್ವ ಭರವಸೆ ಕಾರ್ಯಕ್ರಮದೊಂದಿಗೆ ಬರುತ್ತಿದೆ. ಹೊಸ ಐವರಿ ಎಡಿಷನ್ ಮೋಟಾರ್‌ಸೈಕಲ್ ಮೇಲೆ 4-ವರ್ಷ/50,000 ಕಿ.ಮೀ ಪ್ರಮಾಣಿತ ವಾರೆಂಟಿ ನೀಡಲಾಗುತ್ತಿದೆ. ಜೊತೆಗೆ 6 ವರ್ಷಗಳವರೆಗೆ ವಿಸ್ತೃತ ವಾರೆಂಟಿ (Extended warranty) ಆಯ್ಕೆಗಳು ಸಹ ಇವೆ.

jawa-42-ivory-edition-price-features-engine-details

ಜಾವಾ 42 ಐವರಿ ಬೆಲೆ: ಇದರ ಪ್ರೀಮಿಯಂ ಲುಕ್, ಸಿಂಗಲ್ ಐವರಿ ಡಿಸೈನ್, ಪವರ್‌ - ಫುಲ್ ಪರ್ಫಾಮೆನ್ಸ್, ಉತ್ತಮ ರಸ್ತೆ ಉಪಸ್ಥಿತಿಯನ್ನು ಹೊಂದಿದ್ದು, ಕೊಡುವ ಕಾಸಿಗಿಂತ ಹೆಚ್ಚಿನದನ್ನು ಮೋಟಾರ್‌ಸೈಕಲ್ ಹೊಂದಿದೆ. ಜಾವಾ 42 ಐವರಿ ನಿಯೋ-ಕ್ಲಾಸಿಕ್ ಸ್ಟೈಲಿಂಗ್ ಮತ್ತು ಪರ್ಫಾರ್ಮೆನ್ಸ್ ಎಂಜಿನಿಯರಿಂಗ್ ಅನ್ನು ಆಕರ್ಷಕ ಪ್ಯಾಕೇಜ್‌ನಲ್ಲಿ ನೀಡಲಾಗುತ್ತಿದ್ದು, ಕೇವಲ ರೂ. 1,84,950 (ಎಕ್ಸ್-ಶೋರೂಂ) ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.

ಜೊತೆಗೆ ಹೊಸ ಐವರಿ ಎಡಿಷನ್ ಮೋಟಾರ್‌ಸೈಕಲ್ ಮೇಲೆ 8 ವರ್ಷಗಳವರೆಗೆ ರೋಡ್‌ಸೈಡ್ ಅಸಿಸ್ಟನ್ಸ್, ರಾಷ್ಟ್ರವ್ಯಾಪಿ ವ್ಯಾಪ್ತಿಯೊಂದಿಗೆ 5 ವರ್ಷಗಳವರೆಗೆ AMC, ದೇಶಾದ್ಯಂತ 450 ಕ್ಕೂ ಹೆಚ್ಚು ಮಾರಾಟ ಮತ್ತು ಸರ್ವಿಸ್ ಟಚ್‌ಪಾಯಿಂಟ್‌ಗಳಲ್ಲಿ ಸಮಗ್ರ ಮಾಲೀಕತ್ವ ಪ್ರಯೋಜನಗಳು ಲಭ್ಯವಿದೆ. ಬೈಕ್ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅಥವಾ ಶೋರೂಂಗೆ ಭೇಟಿ ನೀಡಬಹುದು.

jawa-42-ivory-edition-price-features-engine-details

ಡಿಸೈನ್ ಬಗ್ಗೆ ಹೇಳುವುದಾದರೆ ಈ ಹೊಸ ಬೈಕ್, ಮೊದಲಿನಿಂದಲೂ ದಿಟ್ಟ ವಿನ್ಯಾಸ, ಅತ್ಯುತ್ತಮ ಪರ್ಫಾಮೆನ್ಸ್, ಸುರಕ್ಷತೆ ಮತ್ತು ರೈಡರ್ - ಮೊದಲ ಫೀಚರ್‌ಗಳೊಂದಿಗೆ ಜಾವಾ 42 ಮುಂದುವರೆಯುತ್ತಿದ್ದು, ಇದೀಗ ಜಾವಾ 42 ಅನ್ನು ಐವರಿ ಎಡಿಷನ್‌ನೊಂದಿಗೆ ಯುವಕರಲ್ಲಿ ಕ್ರೇಜ್ ಹೆಚ್ಚಸಲಾಗಿದೆ. ಜಾವಾ 42 ರ ಆಧುನಿಕ ಎಂಜಿನಿಯರಿಂಗ್‌ನೊಂದಿಗೆ ವಿಂಟೇಜ್ ವೇಗದ ಸೌಂದರ್ಯವನ್ನು ಮಿಶ್ರಣ ಮಾಡುತ್ತದೆ.

ಜಾವಾ 42 ಐವರಿಯ ಸೈಡ್ ಪ್ಯಾನಲ್ ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಹೊಂದಿದ್ದು, ಅದೇ ಸಿಗ್ನೇಚರ್ ಟಿಯರ್ - ಡ್ರಾಪ್ ಇಂಧನ ಟ್ಯಾಂಕ್ ಚೆಕ್ಕರ್ಡ್ ಫ್ಲ್ಯಾಗ್ ಗ್ರಾಫಿಕ್ ಅನ್ನು ಹೊಂದಿದೆ. ವಿಂಟೇಜ್ ಫಾಂಟ್‌ನಲ್ಲಿ 2026 ಜಾವಾ 42 ಎಂದು ಹಿಂಭಾಗದ ಫೆಂಡರ್ ಮತ್ತು ಇಂಧನ ಟ್ಯಾಂಕ್‌ ಮೇಲೆ ಬರೆಯಲಾಗಿದ್ದು, ನೋಡಲು ಪ್ರೀಮಿಯಂ ಲುಕ್ ನೀಡುತ್ತದೆ.

jawa-42-ivory-edition-price-features-engine-details

ಎಂಜಿನ್ & ಪರ್ಫಾಮೆನ್ಸ್

ಜಾವಾ 42 ಐವರಿ ಎಡಿಷನ್ 294 - ಸಿಸಿ ಲಿಕ್ವಿಡ್ - ಕೂಲ್ಡ್ ಜೆ-ಪ್ಯಾಂಥರ್ ಎಂಜಿನ್‌ನೊಂದಿಗೆ 27.32 ಪಿಎಸ್ ಪವರ್ ಮತ್ತು 26.84 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇತರ 350 ಸಿಸಿ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಶೇಕಡಾ 40 ರಷ್ಟು ಹೆಚ್ಚಿನ ಪವರ್ ನೀಡುತ್ತದೆ, ಇದು ಮೊದಲ ದರ್ಜೆಯ, ನಯವಾದ 6 - ಸ್ಪೀಡ್ ಗೇರ್‌ಬಾಕ್ಸ್‌ ಜೊತೆಗೆ ಬರುತ್ತದೆ.

ಸವಾರಿ ಅನುಭವವನ್ನು ಸಂಸ್ಕರಿಸಿದ NVH ಮಟ್ಟಗಳು, ಆಪ್ಟಿಮೈಸ್ಡ್ ಗೇರಿಂಗ್ ಮತ್ತು ಥ್ರೊಟಲ್ ಮ್ಯಾಪ್‌ಗಳು, ವರ್ಗ - ಮೊದಲ ಅಸಿಸ್ಟ್ ಮತ್ತು ಸ್ಲಿಪ್ಪರ್ (A&S) ಕ್ಲಚ್, ಅತ್ಯುತ್ತಮ - ದರ್ಜೆಯ ಬ್ರೇಕಿಂಗ್ ಮತ್ತು ಭಾರತದ ವೈವಿಧ್ಯಮಯ ರಸ್ತೆಗಳಿಗೆ ಟ್ಯೂನ್ ಮಾಡಲಾದ ಸಸ್ಪೆನ್ಷನ್ ಸೆಟಪ್ ಅನ್ನು ಬೈಕ್‌ನಲ್ಲಿ ಒದಗಿಸಲಾಗಿದೆ ಎಂದು ಜಾವಾ ತಿಳಿಸಿದೆ.

More from DriveSpark

Article Published On: Wednesday, February 18, 2026, 10:20 [IST]
English summary
Jawa 42 ivory edition price features engine details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+