ಬಡವರಿಗೆ ಬೆಸ್ಟ್.. 200 Km ರೇಂಜ್.. 3.59 ಲಕ್ಷ.. ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಆಟೋ ಕುರಿತ ಪ್ರಮುಖಾಂಶಗಳು!

ಈಚೆಗೆ ಮಹೀಂದ್ರಾ ಉಡೋ (Mahindra Udo) ಇ-ಆಟೋವನ್ನು ಮಾರಾಟಕ್ಕೆ ತರಲಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ನೀವು ಬದುಕಿನ ಬಂಡಿ ಎಳೆಯಲು ಹೊಚ್ಚ ಹೊಸ ಆಟೋವನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಮಹೀಂದ್ರಾ ಉಡೋ' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ.. ಈ ನೂತನ ಎಲೆಕ್ಟ್ರಿಕ್ ಆಟೋದ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಬೆಲೆ (Price):

ಹೊಸ 'ಮಹೀಂದ್ರಾ ಉಡೋ' ಕೈಗೆಟುಕುವ ದರದಲ್ಲಿ ಲಭ್ಯವಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಬಹುದು. ರೂ.3.59 ಲಕ್ಷ ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ. ಈ ಕೊಡುಗೆಯು ಸೀಮಿತ ಅವಧಿಗೆ ಮಾತ್ರ ಅನ್ವಯವಾಗಲಿದೆ. ಆ ನಂತರದಲ್ಲಿ ರೂ.3.84 ಲಕ್ಷ (ಎಕ್ಸ್-ಶೋರೂಂ) ಆಗಲಿದೆ.

Mahindra Udo Price Design Performance Range Features And All Details

ವಿನ್ಯಾಸ (Design):

ಇದು ವಿಮಾನ ಪ್ರೇರಿತ ವಿನ್ಯಾಸವನ್ನು ಹೊಂದಿದೆ. ಅಗ್ರೆಸಿವ್ ಬಾಡಿ ಪ್ಯಾನೆಲ್‌ನ್ನು ಒಳಗೊಂಡಿದೆ. ಬೋಲ್ಡ್ ಹೆಡ್‌ಲ್ಯಾಂಪ್‌ಗಳು, ಇಂಡಿಕೇಟರ್‌ಗಳು, ಟೈಲ್ ಲೈಟ್‌ಗಳು, ಸ್ಟೈಲಿಶ್ ಮಿರರ್‌ಗಳು ಹಾಗೂ ಬೃಹದಾಕಾರದ ವಿಂಡ್‌ಶೀಲ್ಡ್‌ನ್ನು ಒಳಗೊಂಡಿದೆ. ವಿಶಾಲವಾದ ಹೆಡ್‌ರೂಮ್ ಮತ್ತು ಲೆಗ್‌ರೂಮ್‌ನ್ನು ಪಡೆದಿದೆ. 3 ಪ್ರಯಾಣಿಕ ಆಸನಗಳಿದ್ದು, ಸುಲಭವಾಗಿ ಓಡಾಟ ನಡೆದಬಹುದು.

ಸುತ್ತಳತೆ (Dimensions):

ಈ ಎಲೆಕ್ಟ್ರಿಕ್ ಆಟೋ ಸಾಕಷ್ಟು ವಿಶಾಲವಾಗಿದೆ. 2,800 ಮಿ.ಮೀ ಉದ್ದ, 1,370 ಮಿ.ಮೀ ಅಗಲ ಹಾಗೂ 1,808 ಮಿ.ಮೀ ಎತ್ತರವಿದೆ. 215 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,100 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 759 ತೂಕವಿದೆ.

Mahindra Udo Price Design Performance Range Features And All Details

ಕಾರ್ಯಕ್ಷಮತೆ (Performance):

ನೂತನ 'ಮಹೀಂದ್ರಾ ಉಡೋ' ಇ-ಆಟೋ ಬೆಲೆಗೆ ತಕ್ಕಂತೆ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಪಡೆದಿದೆ. 11.7 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಾಮಾನ್ಯ ಕಾರುಗಳಿಗೆ ಕಮ್ಮಿಯಿಲ್ಲವೆಂಬಂತೆ ಭರ್ತಿ ಚಾರ್ಜ್‌ನಲ್ಲಿ 200 ಕಿಲೋಮೀಟರ್‌ಗೆ ರೇಂಜ್ (ಮೈಲೇಜ್) ಕೊಡುತ್ತದೆ.

ಇದರಲ್ಲಿ ಉಪಯೋಗಿರುವ ಎಲೆಕ್ಟ್ರಿಕ್ ಮೋಟಾರ್, 13.41 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 52 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. 55 ಕೆಎಂಪಿಹೆಚ್ ಸ್ಪೀಡ್‌ನ್ನು ಹೊಂದಿದೆ. ಈ ಆಟೋದಲ್ಲಿರುವ ಬ್ಯಾಟರಿಯು ಕೇವಲ 3 ಗಂಟೆ 50 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುವ ನಿರೀಕ್ಷೆಯಿದೆ.

Mahindra Udo Price Design Performance Range Features And All Details

ವೈಶಿಷ್ಟ್ಯಗಳು (Features):

ಹೊಸ 'ಮಹೀಂದ್ರಾ ಉಡೋ' ಇ-ಆಟೋ ಇನ್ಫಾರ್ಮಶನ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ರೇಂಜ್, ರೈಡ್ ಮತ್ತು ರೇಸ್ ಎಂಬ 3 ಅತ್ಯಾಧುನಿಕವಾದ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ. ರಸ್ತೆಯ ಮೇಲೆ ಗಟ್ಟಿಯಾದ ಹಿಡಿತ ಸಾಧಿಸಲು 12-ಇಂಚಿನ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):

ಈ ಎಲೆಕ್ಟ್ರಿಕ್ ಆಟೋ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಡುಯಲ್ ಫೋರ್ಕ್ ಮತ್ತು ಹಿಂಭಾಗ (ರೇರ್) ಇಂಡಿಪೆಂಡೆಂಟ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಹಾಗೆಯೇ ರಿವರ್ಸ್ ಥ್ರೊಟಲ್, ರಿಜನರೇಟಿವ್ ಬ್ರೇಕಿಂಗ್ ಹಾಗೂ ಹಿಲ್ - ಹೋಲ್ಡ್ ಅಸಿಸ್ಟ್‌ನ್ನು ಪಡೆದಿದೆ.

ಪ್ರತಿಸ್ಪರ್ಧಿ ಆಟೋಗಳು (Rival Autos)

ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ ಬಜಾಜ್ ಗೋಗೋ ಪಿ7012 (Bajaj GoGo P7012), ಪಿಯಾಜಿಯೊ ಅಪೆ ಇ-ಸಿಟಿ (Piaggio Ape E-City) ಹಾಗೂ ಮೋಂಟ್ರಾ ಎಲೆಕ್ಟ್ರಿಕ್ ಸೂಪರ್ ಆಟೋ (Montra Electric Super Auto) ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Wednesday, February 18, 2026, 8:30 [IST]
English summary
Mahindra udo price design range features and all details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+