ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ 2026ರ ಹೊಸ ಕವಾಸಕಿ ನಿಂಜಾ 300 ವಿಶೇಷತೆಗಳು

ಪ್ರಮುಖ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿರುವ ಕವಾಸಕಿ, ಇತ್ತೀಚೆಗೆ ತನ್ನ ಹೊಸ 2026ರ ನಿಂಜಾ 300 (MY26 KAWASAKI Ninja 300) ಬೈ ಕ್‌ನ್ನು ಬಿಡುಗಡೆ ಮಾಡಿದೆ. ಹೊಸ 2026ರ ನಿಂಜಾ 300 ಬೆಲೆ ರೂ. 3,17,000 (ಎಕ್ಸ್ - ಶೋರೂಂ) ದಿಂದ ಪ್ರಾರಂಭವಾಗುತ್ತದೆ, ಬುಕ್ ಮಾಡುವ ಗ್ರಾಹಕರಿಗೆ ಡೆಲಿವರಿಗಳು ಫೆಬ್ರವರಿ 2026 ರ ಮಧ್ಯದಿಂದ ಪ್ರಾರಂಭವಾಗುತ್ತವೆ. 2012 ರಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿದ್ದ ಈ ಮಾಡಲ್, ಈಗ ಹೊಸ ಅಪ್‌ಡೇಟ್‌ಗಳನ್ನು ಪಡೆದುಕೊಂಡು ಬಿಡುಗಡೆಯಾಗಿದೆ.

ಇದರ ಮುಖ್ಯಾಂಶಗಳೆಂದರೆ, ಕವಾಸಕಿ ZX-10R ಶೈಲಿಯ ಫ್ಲೋಟಿಂಗ್ ವಿಂಡ್‌ಸ್ಕ್ರೀನ್ ನೀಡಲಾಗಿದ್ದು, ಗಾಳಿ ರಕ್ಷಣೆಯನ್ನು ಸುಧಾರಿಸುತ್ತದೆ. ಹೆದ್ದಾರಿಗಳಲ್ಲಿ ಸವಾರರಿಗೆ ಸೌಕರ್ಯವನ್ನು ನೀಡುತ್ತದೆ. ನಿಂಜಾ ZX-6R ನಿಂದ ಪ್ರೇರಿತವಾದ ಹೊಸ ಪ್ರೊಜೆಕ್ಟರ್ ಹೆಡ್‌ಲೈಟ್ ಮತ್ತು ಸುಧಾರಿತ ಆನ್ - ರೋಡ್ ಸ್ಥಿರತೆಗಾಗಿ ಪರಿಷ್ಕೃತ ಟೈರ್ ಮಾದರಿಗಳೊಂದಿಗೆ ತನ್ನ ಸ್ಪೋರ್ಟ್ ‌ಬೈಕ್ ಲುಕ್ ಹೆಚ್ಚಿಸಿಕೊಂಡಿದೆ.

new-2026-kawasaki-ninja-300-price-features-engine-details

ನಿಂಜಾ 300 ತನ್ನ ಟ್ವಿನ್-ಸಿಲಿಂಡರ್ ಎಂಜಿನ್, ರೇಸ್-ಪ್ರೇರಿತ ಸ್ಟೈಲಿಂಗ್ ಮತ್ತು ಸಂಸ್ಕರಿಸಿದ ಸವಾರಿ ಗುಣಮಟ್ಟದೊಂದಿಗೆ 300 ಸಿಸಿ ವಿಭಾಗದಲ್ಲಿ ಹೊಸ ಅಲೆ ಎಬ್ಬಿಸಿದೆ. ಇದು ದೈನಂದಿನ ಬಳಕೆಯ ಸುಲಭತೆ ಮತ್ತು ಉಲ್ಲಾಸಕರ ಕಾರ್ಯಕ್ಷಮತೆಯ ಪರಿಪೂರ್ಣ ಸಮತೋಲನವನ್ನು ನೀಡುತ್ತದೆ, ಕವಾಸಕಿಯ ಮೋಟಾರ್‌ಸ್ಪೋರ್ಟ್ ಡಿಎನ್‌ಎಯೊಂದಿಗೆ ಸಂಯೋಜಿಸಲ್ಪಟ್ಟ ದೈನಂದಿನ ಬಳಕೆಯ ಸಾಮರ್ಥ್ಯವನ್ನು ನೀಡಿತ್ತದೆ.

ಬ್ರೇಕಿಂಗ್ ವಿಷಯಕ್ಕೆ ಬಂದರೆ 2-ಪಿಸ್ಟನ್ ಕ್ಯಾಲಿಪರ್ ಹೊಂದಿರುವ ದೊಡ್ಡ 290 ಎಂಎಂ ಮುಂಭಾಗದ ಪೆಟಲ್ ಡಿಸ್ಕ್, ಹಿಂಭಾಗದಲ್ಲಿ 2-ಪಿಸ್ಟನ್ ಕ್ಯಾಲಿಪರ್ ಹೊಂದಿರುವ 220 ಎಂಎಂ ಪೆಟಲ್ ಡಿಸ್ಕ್ ವಿಶ್ವಾಸಾರ್ಹ ಬ್ರೇಕಿಂಗ್ ಕಂಟ್ರೋಲ್ ನೀಡುತ್ತದೆ. ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್, ಮುಂಭಾಗದಲ್ಲಿ 37 mm ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದಲ್ಲಿ ಬಾಟಮ್-ಲಿಂಕ್ ಯುನಿ-ಟ್ರ್ಯಾಕ್ ಗ್ಯಾಸ್-ಚಾರ್ಜ್ಡ್ ಮೊನೊಶಾಕ್ ನೀಡಲಾಗಿದೆ.

new-2026-kawasaki-ninja-300-price-features-engine-details

ಮುಂಭಾಗ ಮತ್ತು ಹಿಂಭಾಗದಲ್ಲಿ ಎಬಿಎಸ್ ಮಾಡಲ್‌ಗಳು ಅತ್ಯುತ್ತಮ ಬ್ರೇಕಿಂಗ್ ಕಾರ್ಯಕ್ಷಮತೆಗಾಗಿ ರೆಸಿನ್ ಹಿಂಭಾಗದ ಪ್ಯಾಡ್ ಮತ್ತು ಸಿಂಟರ್ಡ್ ಫ್ರಂಟ್ ಪ್ಯಾಡ್ ಒಳಗೊಂಡಿವೆ. ಹೊಸ ಟೈರ್ ಪ್ಯಾಟರ್ನ್ ವರ್ಧಿತ ಗ್ರಿಪ್ ಮತ್ತು ಉತ್ತಮ ರಸ್ತೆ ಪ್ರತಿಕ್ರಿಯೆಯನ್ನು ನೀಡುತ್ತದೆ, ವಿಭಿನ್ನ ಸವಾರಿ ಪರಿಸ್ಥಿತಿಗಳಲ್ಲಿ ಹೆಚ್ಚು ಆತ್ಮವಿಶ್ವಾಸದ ಸವಾರಿಗೆ ಅನುವು ಮಾಡಿಕೊಡುತ್ತದೆ.

ಕವಾಸಕಿ ನಿಂಜಾ ZX-6R ನಿಂದ ಪ್ರೇರಿತವಾದ ಡ್ಯುಯಲ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ನೀಡಲಾಗಿದ್ದು, ರಾತ್ರಿ ಗೋಚರತೆಯನ್ನು ಸುಧಾರಿಸಿ, ಪ್ರೀಮಿಯಂ ನೋಟವನ್ನು ನೀಡುತ್ತದೆ. 2026ರ ನಿಂಜಾ 300 ಎಂಜಿನ್ ವಿಷಯಕ್ಕೆ ಬಂದರೆ 296cc ಲಿಕ್ವಿಡ್ ಕೂಲ್ಡ್, ಪ್ಯಾರಲಲ್ ಟ್ವಿನ್-ಸಿಲಿಂಡರ್ ಎಂಜಿನ್ 11,000rpm ನಲ್ಲಿ 39PS ಪವರ್ ಹಾಗೂ 10,000rpm ನಲ್ಲಿ 26 Nm ಟಾರ್ಕ್ ಹೊರಹಾಕುತ್ತದೆ.

new-2026-kawasaki-ninja-300-price-features-engine-details

ಫಿಚರ್ಸ್ ವಿಷಯಕ್ಕೆ ಬಂದರೆ ಇದರ ಮಲ್ಟಿ-ಫಂಕ್ಷನ್ LCD ಸ್ಕ್ರೀನ್ ಸ್ಪೀಡ್, ಟೈಮ್, ಫ್ಯೂಲ್ ಗೇಜ್, ಡ್ಯುಯಲ್ ಟ್ರಿಪ್ ಮೀಟರ್‌ಗಳು, ಓಡೋಮೀಟರ್ ಮತ್ತು ಎಕಾನಮಿಕಲ್ ರೈಡ್ ಇಂಡಿಕೇಟರ್ ಪ್ರದರ್ಶಿಸುತ್ತದೆ. ದೊಡ್ಡ ಅನಲಾಗ್-ಶೈಲಿಯ ಟ್ಯಾಕೋಮೀಟರ್, ಪರ್ಫಾಮೆನ್ಸ್-ಕೇಂದ್ರಿತ ವಿನ್ಯಾಸದೊಂದಿಗೆ ಅತ್ಯುತ್ತಮ ಗೋಚರತೆ ನೀಡುತ್ತದೆ. ವೈಟ್ LED ಬ್ಯಾಕ್‌ಲೈಟಿಂಗ್ ಎಲ್ಲಾ ಬೆಳಕಿನ ಪರಿಸ್ಥಿತಿಗಳಲ್ಲಿ ಸ್ಪಷ್ಟ, ಓದಲು ಸುಲಭವಾದ ಗೋಚರತೆಯನ್ನು ನೀಡುತ್ತದೆ.

2026ರ ನಿಂಜಾ 300 ನವೀಕರಣವು ಈ ವಿಕಾಸವನ್ನು ಮುಂದುವರೆಸುತ್ತದೆ, ಮುಂದಿನ ಪೀಳಿಗೆಯ ನಿಂಜಾ ಉತ್ಸಾಹಿಗಳಿಗೆ ಅನುಗುಣವಾಗಿ ಪ್ರೀಮಿಯಂ ಸವಾರಿ ಅನುಭವವನ್ನು ನೀಡುತ್ತದೆ ಎಂದು ಕವಾಸಕಿ ಭರವಸೆ ನೀಡಿದೆ. ಸವಾರರು ನಗರದ ಬೀದಿಗಳು, ಹೆದ್ದಾರಿಗಳು ಅಥವಾ ಉತ್ಸಾಹಭರಿತ ವಾರಾಂತ್ಯದ ಸವಾರಿಗಳನ್ನು ಆತ್ಮವಿಶ್ವಾಸ ಮತ್ತು ಸೌಕರ್ಯದೊಂದಿಗೆ ಆನಂದಿಸಲು ಅನುವು ಮಾಡಿಕೊಡುತ್ತದೆ.

More from DriveSpark

Article Published On: Sunday, February 8, 2026, 21:45 [IST]
English summary
New 2026 kawasaki ninja 300 price features engine details
Read more on kawasaki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+