Hero: 275 Km ಓಡುತ್ತೆ? ಸದ್ದಿಲ್ಲದೇ ಹೀರೋದಿಂದ ಹೊಸ ಎಲೆಕ್ಟ್ರಿಕ್ ಬೈಕ್‌ಗಾಗಿ ಪೇಟೆಂಟ್ ಸಲ್ಲಿಕೆ.. ಅತಿ ಶೀಘ್ರದಲ್ಲೇ ಬಿಡುಗಡೆ!

ಹೀರೋ ಮೋಟೋಕಾರ್ಪ್‌ನ ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್ ಆಗಿ 'ವಿಡಾ' ಮನೆ ಮಾತಾಗಿದೆ. ದೇಶೀಯವಾಗಿ ವಿಡಾ ವಿ2 ಹಾಗೂ ವಿಡಾ ವಿಎಕ್ಸ್2 ಹೆಸರಿನ ಎರಡು ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಇವು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ 'ಹೀರೋ' ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾರುಕಟ್ಟೆಯನ್ನು ಪ್ರವೇಶಿಸಲು ಸರ್ವ ಸನ್ನದವಾಗಿದೆ. ಭಾರತದಲ್ಲಿ ಮುಂಬರುವ 'ವಿಡಾ ವಿಎಕ್ಸ್‌ಝಡ್' ಇ-ಬೈಕ್ ವಿನ್ಯಾಸಕ್ಕಾಗಿ ಪೇಟೆಂಟ್‌ನ್ನು ಪಡೆದಿದೆ.

ನೂತನ ಹೀರೋ ವಿಡಾ ವಿಎಕ್ಸ್‌ಝಡ್ (Hero Vida VXZ) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ. ಅಮೆರಿಕದ 'ಝೀರೋ ಮೋಟಾರ್‌ಸೈಕಲ್‌' ಪಾಲುದಾರಿಕೆಯಲ್ಲಿ ಸಿದ್ಧಗೊಳ್ಳುತ್ತಿದೆ. ಇದು ಶಾರ್ಪ್ ಎಲ್ಇಡಿ ಹೆಡ್‌ಲ್ಯಾಂಪ್, ಮಸ್ಕ್ಯುಲರ್ ಬಾಡಿ ಪ್ಯಾನಲ್‌ಗಳು ಮತ್ತು ಸ್ಪ್ಲಿಟ್ ಸೀಟ್‌ಗಳನ್ನು ಹೊಂದಿದೆ.

New Hero Vida VXZ Electric Bike Design Patented In India Details

ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಯುಎಸ್‌ಡಿ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿದ ಒದಗಿಸಲು 17-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ.

ಹೊಸ 'ಹೀರೋ ವಿಡಾ ವಿಎಕ್ಸ್‌ಝಡ್' ದೊಡ್ಡ ಗಾತ್ರದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 160 ರಿಂದ 275 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುವ ನಿರೀಕ್ಷೆಯಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ಎಲೆಕ್ಟ್ರಿಕ್ ಬೈಕ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಕೈಗೆಟುಕುವ ಬೆಲೆಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

New Hero Vida VXZ Electric Bike Design Patented In India Details

ಪ್ರಸ್ತುತ 'ವಿಡಾ' ಮಾರಾಟ ಗೊಳಿಸುವ ಇ-ಸ್ಕೂಟರ್‌ಗಳಿವು:

ಹೀರೋ ವಿಡಾ ವಿ2: ಇದು ಪ್ರಖ್ಯಾತ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಸ್ಪರ್ಧಾತ್ಮಕ ದರದಲ್ಲೂ ಲಭ್ಯವಿದೆ. ರೂ.1.05 ಲಕ್ಷದಿಂದ ರೂ.1.20 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ವಿಡಾ ವಿ2 ಪ್ಲಸ್ & ವಿಡಾ ವಿ2 ಪ್ರೊ ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ. 3.44 ಮತ್ತು 3.94 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 143 ರಿಂದ 165 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 155 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,301 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

ಈ ಸ್ಕೂಟರ್ 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಪಡೆದಿದೆ. ಮ್ಯಾಟ್ ಅಬ್ರಾಕ್ಸ್ ಆರೆಂಜ್, ಮ್ಯಾಟ್ ವೈಟ್, ಗ್ಲಾಸಿ ಬ್ಲ್ಯಾಕ್, ಗ್ಲಾಸಿ ಸ್ಪೋರ್ಟ್ಸ್ ರೆಡ್ ಮತ್ತು ಮ್ಯಾಟ್ ನೆಕ್ಸಸ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಟಿಎಫ್‌ಟಿ ಟಚ್‌ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೀ-ಜೆನ್ ಬ್ರೇಕಿಂಗ್ ಮತ್ತು ಕೀಲೆಸ್ ಎಂಟ್ರಿನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೀರೋ ವಿಡಾ ವಿಎಕ್ಸ್2: ಇದನ್ನು ಗ್ರಾಹಕರು ಮೆಚ್ಚಿಕೊಂಡಿದ್ದು, ಜನಪ್ರಿಯ ಸ್ಕೂಟರ್ ಆಗಿಯೂ ಹೊರಹೊಮ್ಮಿದೆ. ಅಗ್ಗದ ಬೆಲೆಯಲ್ಲಿಯೂ ಸಿಗುತ್ತದೆ. ರೂ.74,000 ರಿಂದ ರೂ.94,800 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ವಿಡಾ ವಿಎಕ್ಸ್2 ಗೋ ಹಾಗೂ ವಿಡಾ ವಿಎಕ್ಸ್2 ಪ್ಲಸ್ ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ. 2.2 ಮತ್ತು 3.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 92 ರಿಂದ 142 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 155 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,301 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದೆ. ಗ್ರೇ, ಬ್ಲೂ, ರೆಡ್ ಯೆಲ್ಲೋ ಮತ್ತು ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಜಿಪಿಎಸ್ ಟ್ರ್ಯಾಕಿಂಗ್, ರಿಮೋಟ್ ಇಮೊಬಿಲೈಸೇಶನ್ ಹಾಗೂ ರೇರ್ ಪಿಲಿಯನ್ ಬ್ಯಾಕ್‌ರೆಸ್ಟ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

Image Source link: Bikewale

More from DriveSpark

Article Published On: Monday, January 19, 2026, 8:45 [IST]
English summary
New hero vida vxz electric bike design patented in india details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+