Ola: ಪ್ರತಿದಿನ ಬರೀ 141 ಟೂ-ವೀಲರ್ಗಳಷ್ಟೇ ಸೇಲ್ಸ್.. ಮಂಕಾದ ಓಲಾ.. ಕಾರಣವೇನು.. ಪುಟಿದೇಳುತ್ತಾ?
ಭಾರತದ ದ್ವಿಚಕ್ರ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ (Ola Electric) ಅಬ್ಬರಿಸಿತ್ತು. 2022 ರಿಂದ 2024ರವರೆಗೆ ಕಂಪನಿಯ ಇವಿಗಳು ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು. ಆದರೆ, 2025ರಲ್ಲಿ ನಾನಾ ಕಾರಣಗಳಿಗೆ ಮಾರಾಟದಲ್ಲಿ ಹಲವು ಏರುಪೇರುಗಳು ದಾಖಲಾಗಿತ್ತು. ಸದ್ಯ, ಇದೇ 2026ರ ಫೆಬ್ರವರಿಯಲ್ಲಿ 'ಓಲಾ' ಎಲೆಕ್ಟ್ರ್ರಿಕ್ ವಾಹನಗಳ ಮಾರಾಟ ಸಂಖ್ಯೆಯು ತೀವ್ರತರದಲ್ಲಿ ಕುಸಿತವಾಗಿದೆ. ಕೇವಲ 3,968 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಮಾತ್ರವೇ ಕಂಪನಿಯು ಯಶಸ್ವಿಯಾಗಿದೆ. ಅಂದರೆ ಪ್ರತಿದಿನ ಸರಿ ಸುಮಾರು 141 ವಾಹನಗಳನಷ್ಟೇ ಗ್ರಾಹಕರು ಖರೀದಿಸಿದ್ದಾರೆ. 2025ರ ಇದೇ ಅವಧಿಯಲ್ಲಿ 7,531 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -54.26 ಇಳಿಮುಖವಾಗಿದೆ.
2026ರ ಜನವರಿ & 2025ರಲ್ಲಿ ಹಾವು-ಏಣಿ ಆಟ:
2026ರ ಜನವರಿಯಲ್ಲಿ 7,516 ಯುನಿಟ್ ಇವಿಗಳನ್ನು ಮಾರಾಟ ಮಾಡಲಾಗಿತ್ತು. 2025ರ ಡಿಸೆಂಬರ್‌ನಲ್ಲಿ 9,021 ಯುನಿಟ್, ನವೆಂಬರ್‌ನಲ್ಲಿ 8402 ಯುನಿಟ್, ಅಕ್ಟೋಬರ್‌ನಲ್ಲಿ 16,036 ಯುನಿಟ್, ಸೆಪ್ಟೆಂಬರ್‌ನಲ್ಲಿ 13,383 ಯುನಿಟ್, ಆಗಸ್ಟ್‌ನಲ್ಲಿ 18,972 ಯುನಿಟ್, ಜುಲೈನಲ್ಲಿ 17,852 ಯುನಿಟ್, ಜೂನ್‌ನಲ್ಲಿ 20,190 ಯುನಿಟ್, ಮೇನಲ್ಲಿ 18,501 ಯುನಿಟ್, ಏಪ್ರಿಲ್‌ನಲ್ಲಿ 19,709 ಯುನಿಟ್, ಮಾರ್ಚ್‌ನಲ್ಲಿ 23,435 ಯುನಿಟ್, ಫೆಬ್ರವರಿಯಲ್ಲಿ 8,647 ಯುನಿಟ್ ಹಾಗೂ ಜನವರಿಯಲ್ಲಿ 24,413 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು.

2024ರಲ್ಲಿ ಉತ್ತುಂಗದಲ್ಲಿದ್ದ ಓಲಾ:
ಆ ವರ್ಷ ದೊಡ್ಡ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿತ್ತು. ಡಿಸೆಂಬರ್‌ನಲ್ಲಿ 13,807 ಯುನಿಟ್, ನವೆಂಬರ್‌ನಲ್ಲಿ 29,322 ಯುನಿಟ್, ಅಕ್ಟೋಬರ್‌ನಲ್ಲಿ 41,843 ಯುನಿಟ್, ಸೆಪ್ಟೆಂಬರ್‌ನಲ್ಲಿ 24,754 ಯುನಿಟ್, ಆಗಸ್ಟ್‌ನಲ್ಲಿ 27,623 ಯುನಿಟ್, ಜುಲೈನಲ್ಲಿ 41,802 ಯುನಿಟ್, ಜೂನ್‌ನಲ್ಲಿ 36,859, ಯುನಿಟ್, ಮೇನಲ್ಲಿ 37,389 ಯುನಿಟ್, ಏಪ್ರಿಲ್‌ನಲ್ಲಿ 34,163 ಯುನಿಟ್, ಮಾರ್ಚ್‌ನಲ್ಲಿ 53,646 ಯುನಿಟ್, ಫೆಬ್ರವರಿಯಲ್ಲಿ 34,063 ಯುನಿಟ್ ಮತ್ತು ಜನವರಿಯಲ್ಲಿ 32,252 ಯುನಿಟ್‌ಗಳನ್ನು ಮಾರಲಾಗಿತ್ತು.
2023ರಲ್ಲಿ ಮಾರಾಟವು ಏರಿಕೆಯ ಹಾದಿ:
ಇದೇ ವರ್ಷ ಓಲಾ ಇವಿಗಳ ಮಾರಾಟವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿತ್ತು. ಡಿಸೆಂಬರ್‌ನಲ್ಲಿ 30,263 ಯುನಿಟ್, ನವೆಂಬರ್‌ನಲ್ಲಿ 29,808 ಯುನಿಟ್, ಅಕ್ಟೋಬರ್‌ನಲ್ಲಿ 23,783 ಯುನಿಟ್, ಸೆಪ್ಟೆಂಬರ್‌ನಲ್ಲಿ 18,647 ಯುನಿಟ್, ಆಗಸ್ಟ್‌ನಲ್ಲಿ 18,628 ಯುನಿಟ್, ಜುಲೈನಲ್ಲಿ 19,263 ಯುನಿಟ್, ಜೂನ್‌ನಲ್ಲಿ 17,579, ಯುನಿಟ್, ಮೇನಲ್ಲಿ 28,469 ಯುನಿಟ್, ಏಪ್ರಿಲ್‌ನಲ್ಲಿ 21,882 ಯುನಿಟ್, ಮಾರ್ಚ್‌ನಲ್ಲಿ 21,274 ಯುನಿಟ್, ಫೆಬ್ರವರಿಯಲ್ಲಿ 17,647 ಯುನಿಟ್ ಹಾಗೂ ಜನವರಿಯಲ್ಲಿ 18,353 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

ಓಲಾ ದ್ವಿಚಕ್ರ ವಾಹನಗಳ ಮಾರಾಟ ಕುಸಿತಕ್ಕೆ ಕಾರಣಗಳಿವು:
ದೇಶೀಯ ಮಾರುಕಟ್ಟೆಯಲ್ಲಿ ಓಲಾ ಕಂಪನಿಯು ಅತಿಹೆಚ್ಚಿನ ಸಂಖ್ಯೆಯಲ್ಲಿ ಇವಿಗಳನ್ನು ಮಾರಾಟ ಮಾಡಿದೆ. ಅದಕ್ಕೆ ತಕ್ಕಂತೆ ಸರ್ವಿಸ್ ಸೆಂಟರ್‌ಗಳಿಲ್ಲ. ಜೊತೆಗೆ ಸಾಂಪ್ರದಾಯಿಕ ದ್ವಿಚಕ್ರ ವಾಹನ ತಯಾಕರ ಕಂಪನಿಗಳಾದ ಟಿವಿಎಸ್ ಮೋಟಾರ್ ಹಾಗೂ ಬಜಾಜ್ ಆಟೋಗಳು ಇವಿ ಉದ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸುತ್ತಿವೆ. ಹೀಗಾಗಿ, ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ಸಂಖ್ಯೆಯು ಕುಸಿತವಾಗುತ್ತಿದೆ ಎಂದು ಹೇಳಲಾಗಿದೆ.
ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು:
ಇದು ಎಸ್1 ಎಕ್ಸ್ ಪ್ಲಸ್, ಎಸ್1 ಪ್ರೊ ಹಾಗೂ ಎಸ್1 ಪ್ರೊ ಪ್ಲಸ್ ಎಂಬ 3 ವಿಧದಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ರೂ.1,19,999 ರಿಂದ ರೂ.1,54,999 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್), 3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್), 4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 5.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 108 ರಿಂದ 320 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ.

ಓಲಾ ರೋಡ್‌ಸ್ಟರ್ ಇ-ಬೈಕ್ ಹೇಗಿದೆ:
ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ರೋಡ್‌ಸ್ಟರ್ ಎಕ್ಸ್, ರೋಡ್‌ಸ್ಟರ್ ಹಾಗೂ ರೋಡ್‌ಸ್ಟರ್ ಪ್ರೊ ಎಂಬ ರೂಪದಲ್ಲಿ ಸಿಗುತ್ತದೆ. ರೂ.79,999 ರಿಂದ ರೂ.1,09,999 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 2.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್), 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್), 4.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 9.1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 252 ರಿಂದ 500 ಕಿ.ಮೀ ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ.
ಒಟ್ಟಾರೆಯಾಗಿ, ಈಗಲೂ 'ಓಲಾ ಎಲೆಕ್ಟ್ರಿಕ್' ಮಾರಾಟ ಸಂಖ್ಯೆಯನ್ನು ಹೆಚ್ಚಿಸಬಹುದು. ಬಹುಮುಖ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ವಿಸ್ ಸೆಂಟರ್‌ಗಳನ್ನು ತೆರೆಯಬೇಕು. ಇದರೊಂದಿಗೆ ತ್ವರಿತವಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಈ ಮೂಲಕ ಪ್ರತಿಸ್ಪರ್ಧಿ ಕಂಪನಿಗಳಿಗೆ ಪೈಪೋಟಿ ನೀಡುವಂತೆ ಮತ್ತೆ ಬೆಳೆಯಲು ಸಾಧ್ಯವಾಗಲಿದೆ.


Click it and Unblock the Notifications








