ಮಾರುಕಟ್ಟೆಗೆ ಹೊಸ ಸ್ಕೂಟರ್ ಲಗ್ಗೆ: ಕಮ್ಮಿ ಬೆಲೆ, ರಿವರ್ಸ್ ಗೇರ್ ಕೂಡ ಇದೆ: 110 ಕಿ.ಮೀ ರೇಂಜ್!

ಕೈಗೆಟುಕುವ ಬೆಲೆ ಮತ್ತು ಆಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು, ಪ್ರಮುಖ ಎಲೆಕ್ಟ್ರಿಕ್ ವಾಹನ ಕಂಪನಿಗಳಲ್ಲಿ ಒಂದಾದ ಒಮೆಗಾ ಸೀಕಿ ಮೊಬಿಲಿಟಿ (OSM), ಹೊಸ ವೆಕ್ಸ್ಟ್ರಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊನ್ನೆಯಷ್ಟೆ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ವೆಕ್ಸ್ಟ್ರಾ ಸ್ಕೂಟರ್ ಗಂಟೆಗೆ 70 ಕಿಮೀ ಟಾಪ್ ಸ್ಪೀಡ್ ಹೋಗಬಲ್ಲ ಸಾಮರ್ಥ್ಯವನ್ನು ಹೊಂದಿದೆ, ಒಮ್ಮೆ ಚಾರ್ಜ್‌ ಮಾಡಿ 110 ಕಿ.ಮೀ.ಕಿಂತ ಹೆಚ್ಚಿನ ದೂರ ಓಡಿಸಬಹುದು ಎಂದು ಕಂಪನಿ ಭರವಸೆ ನೀಡಿದೆ.

OSM ಕಂಪನಿಯ 200 ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳ ಪ್ಯಾನ್-ಇಂಡಿಯಾ ಡೀಲರ್ ನೆಟ್‌ವರ್ಕ್ ಅನ್ನು ಟೈಯರ್ I, II ಮತ್ತು III ನಗರಗಳಿಗೆ ತರಲು ಯೋಜಿಸಿದೆ. ಸ್ಮಾರ್ಟ್ ಕನೆಕ್ಟೆಡ್ ಫೀಚರ್ಸ್‌ಗಳೊಂದಿಗೆ, ಭಾರತೀಯ ಸವಾರರಿಗೆ ಚಾಲನಾ ವೆಚ್ಚ ಮತ್ತು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಸ್ಕೂಟರ್‌ಗಳನ್ನು ಹೆಚ್ಚು ಖರೀದಿಸುವಂತೆ ಮಾಡುವ ಗುರಿಯನ್ನು ವೆಕ್ಸ್ಟ್ರಾ ಹೊಂದಿದೆ ಎಂದು ಕಂಪನಿ ಹೇಳಿದೆ.

omega-seiki-vextra-electric-scooter-top-things

ಹೊಸ 'ವೆಕ್ಸ್ಟ್ರಾ' (OSM Vextra) ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯ ಮೊದಲ ಹೈ-ಸ್ಪೀಡ್ ವಾಹನವಾಗಿದ್ದು, ಸ್ಕೂಟರ್‌ನ್ನು ರೂ.99,900 ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಕೂಟರ್ 3.45 kWh IP67-ರೇಟೆಡ್ LMFP ಬ್ಯಾಟರಿ ಮತ್ತು 3 kW BLDC ಹಬ್ ಮೋಟಾರ್‌ ಹೊಂದಿದೆ. ಈ ಸ್ಕೂಟರ್, ನಗರದ ರಸ್ತೆಗಳು ಮತ್ತು ಎತ್ತರದ ಪ್ರದೇಶಗಳಲ್ಲಿ 12 ಡಿಗ್ರಿಗಳ ಗ್ರೇಡೆಬಿಲಿಟಿಯೊಂದಿಗೆ ಸ್ಥಿರವಾದ ಪರ್ಫಾಮೆನ್ಸ್ ನೀಡುತ್ತದೆ.

ಹೊಸ ವೆಕ್ಸ್ಟ್ರಾ ಸ್ಕೂಟರ್ ಗಂಟೆಗೆ 70 ಕಿಮೀ ಟಾಪ್ ಸ್ಪೀಡ್ ಹೋಗಬಲ್ಲ ಸಾಮರ್ಥ್ಯವನ್ನು ಹೊಂದಿದೆ, ಒಮ್ಮೆ ಚಾರ್ಜ್‌ ಮಾಡಿ 110 ಕಿ.ಮೀ.ಕಿಂತ ಹೆಚ್ಚಿನ ದೂರ ಓಡಿಸಬಹುದು. ಈ ಸ್ಕೂಟರ್ ಅನ್ನು ಭಾರತದಲ್ಲಿ ಮಾರಾಟ ಮಾಡುವುದರ ಜೊತೆಗೆ, ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡುವ ಮೂಲಕ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಗುರಿ ಹೊಂದಿದೆ.

omega-seiki-vextra-electric-scooter-top-things

ಹೊಸ ವೆಕ್ಸ್ಟ್ರಾ ಸ್ಕೂಟರ್ ರಿಯಲ್-ಟೈಮ್ SOC, ಡಿಸ್ಟೆನ್ಸ್- ಟು -ಎಂಪ್ಟಿ, USB ಚಾರ್ಜಿಂಗ್, 3.5 - ಇಂಚಿನ ಕಲರ್ LCD ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಮತ್ತು ಐಚ್ಛಿಕ GSM ಸಂಪರ್ಕದಂತಹ ಸ್ಮಾರ್ಟ್ ಫೀಚರ್‌ಗಳ ಜೊತೆಗೆ ವೇಗದ ಹೋಮ್ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ ಬರುತ್ತದೆ. ಒಟ್ಟಾರೆ ಇದು ಸ್ಮಾರ್ಟ್ ಫೀಚರ್ಸ್ ಹೊಂದಿದ್ದು, ಪ್ರತಿ ಕಿಲೋಮೀಟರ್‌ಗೆ ಕಡಿಮೆ ವೆಚ್ಚ ಮತ್ತು ಕನಿಷ್ಠ ಮೇಂಟೆನನ್ಸ್ ಖರ್ಚನ್ನು ನೀಡುತ್ತದೆ.

ಹಾಗೆಯೇ ಸ್ಕೂಟರ್‌ನಲ್ಲಿ ಇಕೋ, ಸಿಟಿ ಮತ್ತು ಸ್ಪೋರ್ಟ್ಸ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ. OSM ವೆಕ್ಸ್ಟ್ರಾವನ್ನು ಫರಿದಾಬಾದ್‌ನಲ್ಲಿರುವ ಒಮೆಗಾ ಸೀಕಿ ಮೊಬಿಲಿಟಿಯ ಉತ್ಪಾದನಾ ಸೌಲಭ್ಯದಲ್ಲಿ ತಯಾರಿಸಲಾಗುವುದು, ಇಲ್ಲಿ ವಾರ್ಷಿಕ 25,000 ಯುನಿಟ್‌ ವಾಹನಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಮುಂಬರುವ ವರ್ಷಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುವ ಮೂಲಕ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಇದೆ.

omega-seiki-vextra-electric-scooter-top-things

ಹೆಚ್ಚುತ್ತಿರುವ ಇಂಧನ ಬೆಲೆಗಳು, ನಗರ ದಟ್ಟಣೆ ಮತ್ತು ಸರ್ಕಾರದ ಬೆಂಬಲದಿಂದಾಗಿ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉದ್ಯಮವು ಬಲವಾದ ವೇಗವನ್ನು ಕಾಣುತ್ತಿದೆ. ವೈಯಕ್ತಿಕ ಪ್ರಯಾಣಿಕರು ಮತ್ತು ಕೊನೆಯ ಮೈಲಿ ವೃತ್ತಿಪರರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಆದ್ಯತೆಯ ಆಯ್ಕೆಯಾಗಿ ಹೊರಹೊಮ್ಮಿವೆ. ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಡಿಮೆ ವೇಗದಿಂದ ಹೆಚ್ಚಿನ ವೇಗದ ಲಾಂಗ್ - ರೇಂಜ್ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುತ್ತಿದೆ.

ಗ್ರಾಹಕರು ಉತ್ತಮ ಪರ್ಫಾಮೆನ್ಸ್, ವಿಶ್ವಾಸಾರ್ಹ ಮತ್ತು ಸ್ಮಾರ್ಟ್ ತಂತ್ರಜ್ಞಾನವನ್ನು ಬಯಸುತ್ತಿದ್ದಾರೆ. ಭಾರತದ ವಿಸ್ತರಿಸುತ್ತಿರುವ ನಗರ ಮತ್ತು ಅರೆ-ನಗರ ಜನರಿಗೆ ಪ್ರೀಮಿಯಂ, ಪ್ರಾಯೋಗಿಕ ಎಲೆಕ್ಟ್ರಿಕ್ ವಾಹನಗಳನ್ನು ನೀಡುವ ಉದ್ದೇಶದಿಂದ OSM Vextra ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದೇವೆ ಎಂದು ಕಂಪನಿ ಹೇಳಿದೆ.

More from DriveSpark

Article Published On: Sunday, February 8, 2026, 12:30 [IST]
English summary
Omega seiki vextra electric scooter top things
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+