ಸಿಂಪಲ್ ವೇವ್ ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿ ಆರಂಭ: 243 ಕಿ.ಮೀ ಮೈಲೇಜ್ ನೀಡುವ ಈ ಸ್ಕೂಟರ್ ಬೆಲೆ ಎಷ್ಟು?

ಸಿಂಪಲ್ ಎನರ್ಜಿ ಕಂಪನಿಯ ಬಹುನಿರೀಕ್ಷಿತ 'ವೇವ್' (Wave) ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರ ಕೈಸೇರಲು ಸಜ್ಜಾಗಿದೆ. ಇಂದಿನಿಂದ, ಅಂದರೆ ಸೆಪ್ಟೆಂಬರ್ 25 ರಿಂದ ದೇಶಾದ್ಯಂತ ಇದರ ವಿತರಣೆ (ಡೆಲಿವರಿ) ಆರಂಭವಾಗುತ್ತಿದೆ. ಹಂತ-ಹಂತವಾಗಿ ಮೊದಲ ಬ್ಯಾಚ್ ಸ್ಕೂಟರ್‌ಗಳನ್ನು ಡೀಲರ್‌ಗಳು ಗ್ರಾಹಕರಿಗೆ ಹಸ್ತಾಂತರಿಸಲಿದ್ದು, ಆನ್‌ಲೈನ್ ಬುಕಿಂಗ್ ಕೂಡ ಇನ್ನೂ ಲಭ್ಯವಿದೆ. ಕೇವಲ ₹1,947 ಮುಂಗಡ ಹಣ ನೀಡಿ (ರಿಫಂಡಬಲ್) ಬುಕ್ ಮಾಡಿಕೊಳ್ಳಬಹುದು. ಸ್ಕೂಟರ್ ಖರೀದಿಸಲು ಕಾಯುತ್ತಿದ್ದವರು ಈಗ ತಮಗೆ ಬೇಕಾದ ವೇರಿಯೆಂಟ್, ಆನ್-ರೋಡ್ ಬೆಲೆ, ಡೆಲಿವರಿ ಸ್ಲಾಟ್ ಹಾಗೂ ರಿಯಲ್ ಮೈಲೇಜ್ ಆಧಾರದ ಮೇಲೆ ಸೂಕ್ತ ಮಾಡೆಲ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಸಿಂಪಲ್ ವೇವ್ ಸ್ಕೂಟರ್ 'S', 'Wave' ಮತ್ತು 'Wave Plus' ಎಂಬ ಮೂರು ಸರಣಿಗಳಲ್ಲಿ ಒಟ್ಟು 6 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 2.2 kWh ನಿಂದ 5 kWh ಬ್ಯಾಟರಿ ಆಯ್ಕೆಗಳಿದ್ದು, IDC ಸರ್ಟಿಫೈಡ್ ಪ್ರಕಾರ ಇವು ಒಂದೇ ಚಾರ್ಜ್‌ಗೆ ಕ್ರಮವಾಗಿ 110 ಕಿ.ಮೀ, 132 ಕಿ.ಮೀ, 171 ಕಿ.ಮೀ ಹಾಗೂ ಬರೋಬ್ಬರಿ 243 ಕಿ.ಮೀ ಮೈಲೇಜ್ ನೀಡಲಿವೆ. ಹೆಚ್ಚಿನ ವೇರಿಯೆಂಟ್‌ಗಳಲ್ಲಿ 6.4 kW ಮೋಟಾರ್ ನೀಡಲಾಗಿದ್ದು, ಗರಿಷ್ಠ 90 km/h ವೇಗ ತಲುಪಲಿವೆ. ಇವುಗಳಲ್ಲಿ ಬರೋಬ್ಬರಿ 70 ಲೀಟರ್ ಬೂಟ್ ಸ್ಪೇಸ್ (ಸ್ಟೋರೇಜ್) ಸಿಗಲಿದ್ದು, ಟಾಪ್ ಮಾಡೆಲ್‌ನಲ್ಲಿ ಟಿಎಫ್‌ಟಿ ಕನೆಕ್ಟಿವಿಟಿ ಹಾಗೂ ಟ್ರ್ಯಾಕ್ಷನ್ ಕಂಟ್ರೋಲ್‌ನಂತಹ ಪ್ರೀಮಿಯಂ ಫೀಚರ್‌ಗಳನ್ನು ನೀಡಲಾಗಿದೆ.

Simple Wave Electric Scooter Delivery Starts 2026: Check On-Road Price, Range, and Top Features

ಸಿಂಪಲ್ ವೇವ್ ಸ್ಕೂಟರ್‌ನ ಇಂದಿನ ಆನ್-ರೋಡ್ ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಈ ಸ್ಕೂಟರ್‌ನ ಆರಂಭಿಕ ಎಕ್ಸ್-ಶೋರೂಮ್ ಬೆಲೆ ₹1,09,999 ಆಗಿದೆ. ಶೋರೂಮ್ ದರಕ್ಕೆ ಹೋಲಿಸಿದರೆ ಬೇಸ್ ವೇರಿಯೆಂಟ್‌ ಆನ್-ರೋಡ್ ಬೆಲೆಯೂ ಸಖತ್ ಕಾಂಪಿಟೇಟಿವ್ ಆಗಿದೆ. ದೆಹಲಿಯಲ್ಲಿ ರೋಡ್ ಟ್ಯಾಕ್ಸ್ ಶೂನ್ಯವಾಗಿದ್ದು, ಇನ್ಶೂರೆನ್ಸ್ ವೆಚ್ಚ ಕೂಡ ಬಹುತೇಕ ನಗರಗಳಲ್ಲಿ ಒಂದೇ ರೀತಿಯಿದೆ. ಬೈಕ್‌ವೇಲ್ (BikeWale) ಮಾಹಿತಿ ಪ್ರಕಾರ, ದೆಹಲಿಯಲ್ಲಿ 36 ತಿಂಗಳ ಅವಧಿಗೆ %9.45 ಬಡ್ಡಿದರದಲ್ಲಿ ಮಾಸಿಕ ₹2,973 ರಂತೆ ಇಎಮ್‌ಐ (EMI) ಆಯ್ಕೆಯೂ ಲಭ್ಯವಿದೆ. ಪ್ರಮುಖ ನಗರಗಳಲ್ಲಿನ ಇಂದಿನ ಆನ್-ರೋಡ್ ಬೆಲೆ ವಿವರ ಇಲ್ಲಿದೆ:

ನಗರ ಆನ್-ರೋಡ್ ಬೆಲೆ (ಬೇಸ್ ಮಾಡೆಲ್)
ಬೆಂಗಳೂರು ₹1,18,293
ದೆಹಲಿ ₹1,17,281
ಮುಂಬೈ ₹1,12,739

ಡೆಲಿವರಿ ಟೈಮ್‌ಲೈನ್ ಮತ್ತು ಬುಕಿಂಗ್ ವಿವರಗಳು

ದೇಶದ 60ಕ್ಕೂ ಹೆಚ್ಚು ನಗರಗಳಲ್ಲಿರುವ ಸಿಂಪಲ್ ಎನರ್ಜಿಯ 75ಕ್ಕೂ ಹೆಚ್ಚು ಶೋರೂಮ್‌ಗಳ ಮೂಲಕ ಇಂದಿನಿಂದಲೇ (ಸೆಪ್ಟೆಂಬರ್ 25) ಡೆಲಿವರಿ ಪ್ರಕ್ರಿಯೆ ಆರಂಭವಾಗಿದೆ. ಪ್ರಸ್ತುತ ತಿಂಗಳಿಗೆ 3,000 ಸ್ಕೂಟರ್ ಉತ್ಪಾದಿಸುತ್ತಿರುವ ಸಂಸ್ಥೆಯು, ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ 'ತಿಂಗಳಿಗೆ ಸುಮಾರು 12,000 ವಾಹನಗಳನ್ನು' ಪೂರೈಸುವ ಗುರಿ ಹೊಂದಲಾಗಿದೆ ಎಂದು ಕಂಪನಿಯ ಸಹ-ಸಂಸ್ಥಾಪಕ ಶ್ರೇಷ್ಠ್ ಮಿಶ್ರಾ ತಿಳಿಸಿದ್ದಾರೆ. ನಗರವಾರು ಹಂತ-ಹಂತವಾಗಿ ವಾಹನ ವಿತರಣೆ ನಡೆಯಲಿದ್ದು, ಬುಕಿಂಗ್ ಮೊತ್ತ ಪಾವತಿಸುವ ಮುನ್ನ ನಿಮ್ಮ ಹತ್ತಿರದ ಶೋರೂಮ್‌ಗೆ ಕರೆ ಮಾಡಿ ಸ್ಲಾಟ್, ಬಣ್ಣ ಹಾಗೂ ಆಕ್ಸೆಸರೀಸ್ ಲಭ್ಯತೆ ಖಚಿತಪಡಿಸಿಕೊಳ್ಳಿ.

ಚಾರ್ಜಿಂಗ್ ಸಮಯ ಮತ್ತು ಬಳಕೆದಾರರ ಗಮನಕ್ಕೆ...

ಬ್ಯಾಟರಿ ಸಾಮರ್ಥ್ಯ ಮತ್ತು ಚಾರ್ಜರ್ ಆಧಾರದ ಮೇಲೆ ಚಾರ್ಜಿಂಗ್ ಸಮಯ ವ್ಯತ್ಯಾಸವಾಗುತ್ತದೆ. 2.2 kWh ವೇರಿಯೆಂಟ್ ಕೇವಲ 1 ಗಂಟೆ 10 ನಿಮಿಷದಲ್ಲಿ ಶೇ. 0 ರಿಂದ 80 ರಷ್ಟು ಚಾರ್ಜ್ ಆಗುತ್ತದೆ. ಅದೇ ರೀತಿ, 5 kWh ಸಾಮರ್ಥ್ಯದ 'ವೇವ್ ಪ್ಲಸ್' ಫಾಸ್ಟ್ ಚಾರ್ಜಿಂಗ್ ಮೂಲಕ 2 ಗಂಟೆ 15 ನಿಮಿಷಗಳಲ್ಲಿ ಶೇ. 80 ರಷ್ಟು ಚಾರ್ಜ್ ಆಗುತ್ತದೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ರಾತ್ರಿ ವೇಳೆ ಪೂರ್ಣ ಚಾರ್ಜ್ ಮಾಡಿಕೊಳ್ಳುವುದು ಹಾಗೂ ಬ್ಯಾಟರಿ ಹೆಲ್ತ್ ಕಾಪಾಡಿಕೊಳ್ಳಲು ಆಗಾಗ್ಗೆ ಪಬ್ಲಿಕ್ ಫಾಸ್ಟ್ ಚಾರ್ಜರ್ ಬಳಸುವುದು ಉತ್ತಮ.

ಸ್ಪರ್ಧಿಗಳಿಗೆ ಕಾಂಪೇರ್ ಮಾಡಿದ್ರೆ ಹೇಗಿದೆ?: ಅಥರ್ ರಿಜ್ಟಾ, ಬಜಾಜ್ ಚೇತಕ್, ಓಲಾ S1 Z

ಮಾರುಕಟ್ಟೆಯಲ್ಲಿರುವ ಅಥರ್ ರಿಜ್ಟಾ, ಬಜಾಜ್ ಚೇತಕ್ ಮತ್ತು ಓಲಾ S1 Z ಗೆ ಹೋಲಿಸಿದರೆ, ಸಿಂಪಲ್ ವೇವ್ ಸ್ಕೂಟರ್ ವಿಶಾಲವಾದ ಸ್ಟೋರೇಜ್ ಮತ್ತು ಬ್ಯಾಟರಿ ಆಯ್ಕೆಗಳಿಂದ ಗಮನಸೆಳೆಯುತ್ತಿದೆ. ದೆಹಲಿಯಲ್ಲಿ ಅಥರ್ ರಿಜ್ಟಾ ಆನ್-ರೋಡ್ ಬೆಲೆ ₹1.29 ಲಕ್ಷದಿಂದ ₹1.31 ಲಕ್ಷದಷ್ಟಿದ್ದರೆ, ಬಜಾಜ್ ಚೇತಕ್ ಎಕ್ಸ್-ಶೋರೂಮ್ ಬೆಲೆ ₹1.19 ಲಕ್ಷದಿಂದ ಆರಂಭವಾಗುತ್ತದೆ. ಇನ್ನು ಓಲಾ S1 Z ಬೆಲೆ ₹79,999 ರಿಂದ ಶುರುವಾಗುತ್ತದೆ. ಸಣ್ಣಪುಟ್ಟ ಸಿಟಿ ರೈಡಿಂಗ್‌ಗೆ 2.2 kWh ಮಾಡೆಲ್ ಸಾಕು, ಆದರೆ ವೀಕೆಂಡ್ ರೈಡ್ ಜೊತೆಗೆ ಹೆಚ್ಚಿನ ಮೈಲೇಜ್ ಬಯಸುವವರು 3.7 kWh ಮಾಡೆಲ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

Article Published On: Friday, September 25, 2026, 16:54 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+