EV ವಿಭಾಗಕ್ಕೆ ದೈತ್ಯ ಬ್ರ್ಯಾಂಡ್‌ಗಳ ಎಂಟ್ರಿ... ಯಮಹಾ ಇವಿ VS ಸುಜುಕಿ ಇವಿ ಯಾವುದು ಬೆಸ್ಟ್?
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗವು ವೇಗವಾಗಿ ಬೆಳೆಯುತ್ತಿದೆ, ಹೊಸ ಸ್ಟಾರ್ಟ್‌ಅಪ್‌ಗಳ ಜೊತೆಗೆ ಪ್ರಮುಖ ಬ್ರ್ಯಾಂಡ್‌ಗಳು ಕೂಡ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಯಮಹಾ ಕಂಪನಿ ಕೂಡ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ, ಇದನ್ನು EC-06 ಎಂದು ಕರೆಯಲಾಗುತ್ತದೆ. ಹಾಗೆಯೇ ಸುಜುಕಿ ಕೂಡ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಇವಿ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ಹಾಗಾದ್ರೆ ಯಮಹಾ ಹಾಗೂ ಸುಜುಕಿ ಸ್ಕೂಟರ್‌ಗಳಲ್ಲಿ ಯಾವುದು ಹೇಗಿದೆ ಎಂಬುದನ್ನು ತಿಳಿಯಲು ಇಲ್ಲಿ ಹೋಲಿಕೆ ಮಾಡಿದ್ದೇವೆ.
ಬೆಲೆ: ಬೆಲೆಯ ವಿಷಯಕ್ಕೆ ಬಂದರೆ ಹೊಸ ಸುಜುಕಿ ಇ-ಆಕ್ಸೆಸ್ ರೂ. 1.88 ಲಕ್ಷ ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದರೆ, ಯಮಹಾ EC-06 ಅನ್ನು ಹೆಚ್ಚು ಆಕ್ರಮಣಕಾರಿಯಾಗಿ ಇರಿಸಿದ್ದು, ರೂ. 1.67 ಲಕ್ಷ ಎಕ್ಸ್ ಶೋ ರೂಂ ಬೆಲೆಗೆ ನಿಗದಿಪಡಿಸಲಾಗಿದೆ. ಬೆಲೆ ವಿಷಯದಲ್ಲಿ ಸುಜುಕಿ ಇ-ಆಕ್ಸೆಸ್‌ಗಿಂತ ಯಮಹಾ EC-06 ಕಡಿಮೆ ಬೆಲೆಯಲ್ಲಿ ಸಿಗಲಿದೆ.

ಬ್ಯಾಟರಿ & ರೇಂಜ್
ಸುಜುಕಿ ಆಕ್ಸಿಸ್ ಇವಿ 3.07kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹಾಗೂ 4.1 ಕಿಲೋವ್ಯಾಟ್ ಮೋಟಾರ್ ಹೊಂದಿದೆ. ಫುಲ್ ಚಾರ್ಜ್ ಮಾಡಿದರೆ 95 ಕಿ.ಮೀ ಓಡಿಸಬಹುದು. ಡಿಸಿ ಫಾಸ್ಟ್ ಚಾರ್ಜರ್ ಮೂಲಕ ಕೇವಲ 2 ಗಂಟೆ 12 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಮಾಡಬಹುದು. 71 ಕಿ.ಮೀ ಟಾಪ್ ಸ್ಪೀಡ್ ಸಾಮರ್ಥ್ಯವನ್ನು ಹೊಂದಿದೆ. ಪೋರ್ಟಬಲ್ ಚಾರ್ಜರ್ ಮೂಲಕ 6 ಗಂಟೆ 20 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತದೆ.
ಯಮಹಾ EC-06 ಸ್ಕೂಟರ್, 4kWh ಸ್ಥಿರ ಬ್ಯಾಟರಿಯೊಂದಿಗೆ ಜೋಡಿಸಲಾದ ದೃಢವಾದ IPMSM (ಇಂಟೀರಿಯರ್ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್) ಹೊಂದಿದೆ. ಇದನ್ನು ಒಮ್ಮೆ ಚಾರ್ಜ್ ಮಾಡಿ ಬರೋಬ್ಬರಿ 169-ಕಿ.ಮೀ ಓಡಿಸಬಹುದು. ಇದರ ಪವರ್‌ಫುಲ್ ಮೋಟಾರ್ 79 ಕಿ.ಮೀ ಟಾಪ್ ಸ್ಪೀಡ್ ತಲುಪಲು ಸಹಕರಿಸುತ್ತದೆ, ಪ್ರಮಾಣಿತ ಹೋಮ್ ಪ್ಲಗ್-ಇನ್ ಚಾರ್ಜಿಂಗ್ ಮೂಲಕ ಪೂರ್ಣ ಚಾರ್ಜ್ ಮಾಡಲು ಸುಮಾರು ಎಂಟು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಯಾಂತ್ರಿಕ ವಿಶೇಷತೆಗಳು
ಸುಜುಕಿ ಇ-ಅಕ್ಸೆಸ್ ಸ್ಕೂಟರ್ LED ಲೈಟಿಂಗ್, ಡ್ಯುಯಲ್-ಟೋನ್ ಅಲಾಯ್ ವ್ಹೀಲ್ಸ್ ಮತ್ತು ನಿರ್ವಹಣೆ ಮುಕ್ತ ಡ್ರೈವ್ ಬೆಲ್ಟ್ ಹೊಂದಿದೆ. ಇದು 7 ವರ್ಷಗಳವರೆಗೆ ಅಥವಾ 70,000 ಕಿ.ಮೀ. ವರೆಗೆ ಬಾಳಿಕೆ ಬರುತ್ತದೆ. ಈ ಸ್ಕೂಟರ್ ಅನ್ನು ಮೂರು ರೈಡ್ ಮೋಡ್‌ಗಳು (ಇಕೊ, ರೈಡ್ ಎ ಮತ್ತು ರೈಡ್ ಬಿ) ಹಾಗೂ ರಿವರ್ಸ್ ಮೋಡ್ ಜೊತೆಗೆ ರೀಜನರೇಟಿವ್ ಬ್ರೇಕಿಂಗ್ ಸಿಸ್ಟಮ್ ಅನ್ನು ಸಹ ಹೊಂದಿದೆ.
ಯಮಹಾ EC-06 ಸ್ಕೂಟರ್ ವಿಷಯಕ್ಕೆ ಬಂದರೆ LED ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳ ಸೆಟಪ್ ನೀಡಲಾಗಿದೆ. ಈ ಸ್ಕೂಟರ್ ಕೂಡ ಮೂರು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ, ಹಾಗೆಯೇ ರಿವರ್ಸ್ ಮೋಡ್ ಬಿಗಿಯಾದ ಜಾಮ್ ಇರುವ ಸ್ಥಳಗಳಲ್ಲಿ ಅನುಕೂಲವನ್ನು ಹೆಚ್ಚಿಸುತ್ತದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ಕಾಂಬಿ ಬ್ರೇಕ್ ಸಿಸ್ಟಮ್ (CBS) ಹೊಂದಿದೆ.

ವಾರೆಂಟಿ: ಸುಜುಕಿಯ ಇ-ಅಕ್ಸೆಸ್ ಖರೀದಿ ಮೇಲೆ 7 ವರ್ಷಗಳವರೆಗೆ ಅಥವಾ ಯಾವುದೇ ವೆಚ್ಚವಿಲ್ಲದೆ 80,000 ಕಿ.ಮೀ.ಗಳವರೆಗೆ ವಿಸ್ತೃತ ವಾರೆಂಟಿ, 3 ವರ್ಷಗಳ ನಂತರ ಶೇ60 ವರೆಗೆ ಉಚಿತ ಬೈ-ಬ್ಯಾಕ್ ಭರವಸೆ ನೀಡಲಾಗುತ್ತಿದೆ. ಇನ್ನು ಯಮಹಾ EC-06 ಸ್ಕೂಟರ್ ಬ್ಯಾಟರಿ ಮೇಲೆ 3 ವರ್ಷ ಅಥವಾ 30,000 ಕಿ.ಮೀ ವಾರೆಂಟಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








