Triumph: ಕೇವಲ 1.95 ಲಕ್ಷಕ್ಕೆ ಅಂತರಾಷ್ಟ್ರೀಯ ಬ್ರಾಂಡ್‌ನ ಬೈಕ್: 11,500ರೂ. ಮೌಲ್ಯದ ಅಕ್ಸೆಸೊರಿಗಳು ಫ್ರೀ
120 ವರ್ಷಗಳಿಗೂ ಹೆಚ್ಚು ಮೋಟಾರ್‌ಸೈಕ್ಲಿಂಗ್ ಪರಂಪರೆಯನ್ನು ಹೊಂದಿರುವ ಜಾಗತಿಕ ಬ್ರಾಂಡ್ ಟ್ರಯಂಫ್ ಮೋಟಾರ್‌ಸೈಕಲ್ಸ್ (Triumph Motorcycles), ಭಾರತದಲ್ಲಿ ತನ್ನ 400 ಸಿಸಿ ಮೋಟಾರ್‌ಸೈಕಲ್ ವಿಭಾಗದಲ್ಲಿ ಉತ್ತಮ ಲಾಭ ಕಾಣುತ್ತಿದೆ. ಹೆಸರಿಗೆ ಅಂತರಾಷ್ಟ್ರೀಯ ಬ್ರಾಂಡ್ ಆಗಿದ್ದರೂ ಭಾರತೀಯರ ಆದ್ಯತೆಗಳಿಗೆ ಅನುಗುಣವಾಗಿ 400 ಸಿಸಿ ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ಗಳನ್ನು ನೀಡುವ ಮೂಲಕ ಇಲ್ಲಿನ ಪ್ರಮುಖ ಬ್ರಾಂಡ್‌ಗಳಿಗೆ ಪೈಪೋಟಿ ನೀಡುತ್ತಿದೆ. ಸದ್ಯ ಗ್ರಾಹಕರನ್ನು ಇನ್ನಷ್ಟು ಸೆಳೆಯಲು ತನ್ನ ಬೈಕ್‌ಗಳ ಮೇಲೆ ಹೊಸ ಆಫರ್‌ಗಳನ್ನು ಘೋಷಿಸಿದೆ.
ಟ್ರಯಂಫ್ ಮೋಟಾರ್‌ಸೈಕಲ್ಸ್ ಇಂದು ತನ್ನ 400 ಸಿಸಿ ಮೋಟಾರ್‌ಸೈಕಲ್‌ಗಳಾದ ಟ್ರಯಂಫ್ ಸ್ಪೀಡ್ 400 (Triumph Speed 400) ಮತ್ತು ಟ್ರಯಂಫ್ ಸ್ಪೀಡ್ T4 (Triumph Speed T4) ಗಳ ಮೇಲೆ ಸೀಮಿತ ಅವಧಿಯ ಹೊಸ ವರ್ಷದ ಆಫರ್ ಘೋಷಿಸಿದೆ. ಈ ಆಫರ್ ಅಡಿಯಲ್ಲಿ, ಭಾರತದಾದ್ಯಂತ ಎರಡೂ ಮಾಡಲ್‌ಗಳನ್ನು ಖರೀದಿಸುವ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ರೂ. 11,500 ಮೌಲ್ಯದ ನಿಜವಾದ ಟ್ರಯಂಫ್ ಅಕ್ಸೆಸೊರಿಗಳನ್ನು ಪಡೆಯಬಹುದು.

ಪ್ರಸ್ತುತ ಟ್ರಯಂಫ್ ಸ್ಪೀಡ್ 400 ಬೆಲೆ ರೂ. 2.39 ಲಕ್ಷ (ಎಕ್ಸ್ - ಶೋರೂಂ) ಮತ್ತು ಟ್ರಯಂಫ್ ಸ್ಪೀಡ್ T4 ಬೆಲೆ 1.95 ಲಕ್ಷ (ಎಕ್ಸ್ - ಶೋರೂಂ) ಇದೆ. 400 ಸಿಸಿ ಪರ್ಫಾಮೆನ್ಸ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಇಷ್ಟು ಕಡಿಮೆ ಬೆಲೆಗೆ ಅಂತರಾಷ್ಟ್ರೀಯ ಬ್ರಾಂಡ್‌ನ ಬೈಕ್‌ಗಳು ಸಿಗುತ್ತಿರುವುದು ವಿಶೇಷ. ಅದರಲ್ಲೂ ಈಗ ಹೆಚ್ಚುವರಿ ವೆಚ್ಚವಿಲ್ಲದೆ ರೂ. 11,500 ಮೌಲ್ಯದ ಟ್ರಯಂಫ್ ಅಕ್ಸೆಸೊರಿಗಳನ್ನು ನೀಡುತ್ತಿರುವುದು ಗ್ರಾಹಕರಿಗೆ ಭರ್ಜರಿ ಕೊಡುಗೆಯಾಗಿದೆ.
ಟ್ರಯಂಫ್‌ನ ಹೊಸ ವರ್ಷದ ಈ ಆಫರ್, ಸವಾರರು ಮಾಲೀಕತ್ವದ ಒಟ್ಟಾರೆ ವೆಚ್ಚವನ್ನು ಹೆಚ್ಚಿಸದೆ, ಹೆಚ್ಚುವರಿ ಮೌಲ್ಯದೊಂದಿಗೆ ಪ್ರೀಮಿಯಂ 400 ಸಿಸಿ ಮೋಟಾರ್‌ಸೈಕಲ್ ಖರೀದಿಸಲು ಇದು ಸರಿಯಾದ ಅವಕಾಶವಾಗಿದೆ. ಸ್ಪೋರ್ಟಿ ಸವಾರಿ ಇಷ್ಟಪಡುವವರಿಗಾಗಿ ವಿನ್ಯಾಸಗೊಳಿಸಲಾದ ಸ್ಪೀಡ್ 400 ಮತ್ತು ಸ್ಪೀಡ್ T4 ಮೋಟಾರ್‌ಸೈಕಲ್‌ಗಳು ಸವಾರರಿಗೆ ಪರ್ಫಾಮೆನ್ಸ್ ವಿಷಯದಲ್ಲಿ ಬೆಲೆಗೆ ತಕ್ಕ ಮೌಲ್ಯ ನೀಡುತ್ತವೆ ಎಂದು ಟ್ರಯಂಫ್ ಭರವಸೆ ನೀಡಿದೆ.

ಹೊಸ ಸ್ಪೀಡ್ 400 ಮತ್ತು ಸ್ಪೀಡ್ T4 ಮೋಟಾರ್‌ಸೈಕಲ್‌ಗಳು ಟ್ರಯಂಫ್‌ನ ವಿಶಿಷ್ಟ ಸ್ಪೋರ್ಟಿ ವಿನ್ಯಾಸ, ಹೈ - ಪರ್ಫಾಮೆನ್ಸ್ ಮತ್ತು ದೈನಂದಿನ ಬಳಕೆಯ ಸಾಮರ್ಥ್ಯವನ್ನು ಒಟ್ಟುಗೂಡಿಸುತ್ತವೆ. ಪೂರಕ ಅಕ್ಸೆಸೊರಿಗಳು ಪ್ರಾಯೋಗಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ, ಸವಾರರಿಗೆ ಒಟ್ಟಾರೆ ಮಾಲೀಕತ್ವದ ಅನುಭವವನ್ನು ಹೆಚ್ಚಿಸುವ ಜೊತೆಗೆ ಸವಾರರು ತಮ್ಮ ಮೋಟಾರ್‌ಸೈಕಲ್‌ಗಳನ್ನು ಕಸ್ಟಮೈಸ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ತಿಳಿಸಿದೆ.
ಟ್ರಯಂಫ್ ಭಾರತದಲ್ಲಿ ಬಜಾಜ್ ಆಟೋ ಜೊತೆ ಪಾಲುದಾರಿಕೆ ಹೊಂದಿದ್ದು, ಪ್ರಸ್ತುತ ಬಜಾಜ್ ಟ್ರಯಂಫ್‌ನ ಮಾರಾಟ ಮತ್ತು ಮಾರುಕಟ್ಟೆ ಕಾರ್ಯಾಚರಣೆಗಳನ್ನು ವಹಿಸಿಕೊಂಡಿದೆ. ಈ ಪಾಲುದಾರಿಕೆ 2020 ರಲ್ಲಿ ಪ್ರಾರಂಭವಾಯಿತು, ಏಪ್ರಿಲ್ 1, 2023 ರಿಂದ ಭಾರತದ ಎಲ್ಲಾ ಟ್ರಯಂಫ್ ಮೋಟಾರ್‌ಸೈಕಲ್ ಡೀಲರ್‌ಶಿಪ್‌ಗಳನ್ನು ಬಜಾಜ್ ಆಟೋ ನಿರ್ವಹಿಸುತ್ತಿದೆ.

ಹೊಸ ವರ್ಷದ ಆಫರ್ ಭಾರತದಲ್ಲಿ ಟ್ರಯಂಫ್ ಬ್ರ್ಯಾಂಡ್‌ನ ಮೋಟಾರ್ ಸೈಕಲ್ ಗಳನ್ನು ಖರೀದಿಸುವ ಸವಾರರಿಗೆ ವಿನ್ಯಾಸ, ಕಾರ್ಯಕ್ಷಮತೆ ಮತ್ತು ದೈನಂದಿನ ಬಳಕೆಯ ಸುಲಭತೆಯನ್ನು ಒಟ್ಟುಗೂಡಿಸಿ, ಲಾಭದಾಯಕ - ಮಾಲೀಕತ್ವದ ಅನುಭವವನ್ನು ನೀಡುವಲ್ಲಿ ಟ್ರಯಂಫ್‌ನ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








