ಕಮ್ಮಿ ಬೆಲೆಯ ಬೆಸ್ಟ್ ಸ್ಕೂಟರ್‌ಗಳು: ಖರೀದಿಗೆ ಮುಗಿಬಿದ್ದ ಜನ: ಸಿಂಗಲ್ ಚಾರ್ಜ್‌ನಲ್ಲಿ ಅಧಿಕ ರೇಂಜ್
ಟಿವಿಎಸ್ ಎಲೆಕ್ಟ್ರಿಕ್ (TVS Electric) ವಾಹನಗಳು ಡಿಸೆಂಬರ್ 2025 ರ ಮಾರಾಟದಲ್ಲಿ ಶೇಕಡಾ 77 ರಷ್ಟು ಬೆಳವಣಿಗೆಯನ್ನು ಕಂಡಿವೆ. ಡಿಸೆಂಬರ್ 2024 ರಲ್ಲಿ ಮಾರಾಟವಾಗಿದ್ದ 20,171 ಯುನಿಟ್ ವಾಹನಗಳಿಗೆ ಹೋಲಿಸಿದರೆ ಕಳೆದ ಡಿಸೆಂಬರ್‌ನಲ್ಲಿ ಟಿವಿಎಸ್ 35,605 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಬ್ರ್ಯಾಂಡ್ ನ ಅಸ್ತಿತ್ವದಲ್ಲಿರುವ ಇವಿ ಪೋರ್ಟ್ಫೋಲಿಯೊದಲ್ಲಿ ಟಿವಿಎಸ್ ಎಕ್ಸ್ ಹೈ-ಎಂಡ್ ಸ್ಕೂಟರ್, ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಹೊಸದಾಗಿ ಬಿಡುಗಡೆಯಾದ ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ನಂತಹ ಮಾಡಲ್‌ಗಳು ಇವಿ ವಿಭಾಗದಲ್ಲಿ ಮುನ್ನುಗ್ಗುತ್ತಿವೆ.
ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿನ ಬೆಳವಣಿಗೆಯು ಮುಖ್ಯವಾಗಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಹೊಸ ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್‌ಗಳಿಂದ ಸಾಧ್ಯವಾಗಿದೆ. ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸದ್ಯ ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಹಲವು ಫೀಚರ್ಸ್ ಹೊಂದಿರುವ ಕಾರಣ ಜನ ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಈ ಎರಡೂ ಸ್ಕೂಟರ್‌ಗಳ ಬೆಲೆ ಹಾಗೂ ವೈಶಿಷ್ಟ್ಯಗಳನ್ನು ಇಲ್ಲಿ ನೋಡೋಣ.

ಟಿವಿಎಸ್ ಐಕ್ಯೂಬ್:
ಹೊಸ ಟಿವಿಎಸ್ ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಎಸ್‌ಟಿ ಎಂಬ ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರ ಸ್ಟ್ಯಾಂಡರ್ಡ್ ಐಕ್ಯೂಬ್ ಮಾಡೆಲ್, ರೂ.1.09 ಲಕ್ಷದಿಂದ ರೂ.1.4 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಟಿವಿಎಸ್ ಐಕ್ಯೂಬ್ ಎಸ್‌ಟಿ ಮಾಡೆಲ್, ರೂ.1.52 ಲಕ್ಷದಿಂದ ರೂ.1.62 ಲಕ್ಷ (ಎಕ್ಸ್-ಶೋರೂಂ) ಬೆಲೆಯಿದೆ.
ಸ್ಟ್ಯಾಂಡರ್ಡ್ ಐಕ್ಯೂಬ್ ಮಾಡೆಲ್ 2.2 ಕೆಡಬ್ಲ್ಯೂಹೆಚ್ ಹಾಗೂ 3.4 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದು ಸಂಪೂರ್ಣ ಚಾರ್ಜ್‌ನಲ್ಲಿ 75 ರಿಂದ 100 ಕಿಲೋಮೀಟರ್‌ವರೆಗೆ ರೇಂಜ್ ನೀಡುತ್ತದೆ. ಹಾಗೆಯೇ ಎಸ್‌ಟಿ ವೇರಿಯೆಂಟ್ 3.4 ಕೆಡಬ್ಲ್ಯೂಹೆಚ್ ಹಾಗೂ 5.1 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, 100 ರಿಂದ 150 ಕಿ.ಮೀ ರೇಂಜ್ ನೀಡುತ್ತದೆ.

ಸ್ಟಾರ್‌ಲೈಟ್ ಬ್ಲೂ ಗ್ಲೋಸ್ಸಿ ಹಾಗೂ ಟೈಟಾನಿಯಂ ಗ್ರೇ ಮ್ಯಾಟ್ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಸಿಗುತ್ತದೆ. ಟಿಎಫ್‌ಟಿ ಸ್ಕ್ರೀನ್, ಟರ್ನ್- ಬೈ -ಟರ್ನ್ ನ್ಯಾವಿಗೇಷನ್, ವೆಹಿಕಲ್ ಕ್ರ್ಯಾಶ್-ಟೌ ಅಲರ್ಟ್ ಮತ್ತು 30 ಲೀ. ಸೀಟ್ ಬೂಟ್ ಸ್ಪೇಸ್, ಸೇರಿದಂತೆ ಹಲವಾರು ಫೀಚರ್ಸ್ ಒಳಗೊಂಡಿದೆ.
ಟಿವಿಎಸ್ ಆರ್ಬಿಟರ್:
ಆರ್ಬಿಟರ್ ಬೆಲೆ 1.4 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು ಟಿವಿಎಸ್‌ನಿಂದ ಲಭ್ಯವಿರುವ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಟಿವಿಎಸ್ ಆರ್ಬಿಟರ್ ಇವಿಯ 3.1 ಕಿಲೋವ್ಯಾಟ್ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 158 ಕಿ.ಮೀ ಓಡಬಲ್ಲದು. ಕ್ರೂಸ್ ಕಂಟ್ರೋಲ್, 34-ಲೀಟರ್ ಅಂಡರ್ ಸೀಟ್ ಸ್ಟೋರೇಜ್,ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಸುಧಾರಿತ ಸಂಪರ್ಕಿತ ವೈಶಿಷ್ಟ್ಯಗಳನ್ನು ಹೊಂದಿದೆ.

ಹಿಲ್ ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್ ಮತ್ತು ಪಾರ್ಕಿಂಗ್ ಅಸಿಸ್ಟ್ ಅನ್ನು ನೀಡಲಾಗಿದೆ. ಇಕೊ ಮತ್ತು ಪವರ್ ಎಂಬ ಡ್ಯುಯಲ್ ಮೋಡ್‌ಗಳು ಹಾಗೂ ರೇಂಜ್ ಹೆಚ್ಚಿಸುವ ರೀಜೆನ್ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಜೊತೆಗೆ ಇದು ಕಸ್ಟಮೈಸ್ ಮಾಡಬಹುದಾದ ಸೆಟ್ಟಿಂಗ್‌ಗಳೊಂದಿಗೆ ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, LCD ಡಿಜಿಟಲ್ ಕ್ಲಸ್ಟರ್‌ನಲ್ಲಿ ಕರೆಗಳು, SMS ಮತ್ತು ಕಸ್ಟಮೈಸ್ ಅಲರ್ಟ್‌ಗಳನ್ನು ಪಡೆಯಬಹುದು.
ಟಿವಿಎಸ್ ಎಕ್ಸ್ ಇ-ಸ್ಕೂಟರ್:
ಇದರ ಬೆಲೆಯು ರೂ.2.50 ಲಕ್ಷ (ಎಕ್ಸ್-ಶೋರೂಂ) ಇದೆ. 4.44 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಪೂರ್ತಿ ಚಾರ್ಜ್ ಮಾಡಿದರೆ 140 ಕಿ.ಮೀ ಕ್ರಮಿಸುತ್ತದೆ. 105 ಕಿ.ಮೀ ಟಾಪ್ ಸ್ಪೀಡ್ ಹೋಗಬಲ್ಲದು. ಟಿಎಫ್‌ಟಿ ಕನ್ಸೋಲ್ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.


Click it and Unblock the Notifications








