TVS: ರೂ.1.08 ಲಕ್ಷ.. 212 Km ರೇಂಜ್.. ನಂ.1 ಟಿವಿಎಸ್ ಐಕ್ಯೂಬ್ ಇ-ಸ್ಕೂಟರ್ ಕುರಿತ ಪ್ರಮುಖಾಂಶಗಳು!

ಟಿವಿಎಸ್ ಐಕ್ಯೂಬ್ (TVS iQube) ನಂಬರ್ 1 ಎಲೆಕ್ಟ್ರಿಕ್ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಈ ಸ್ಕೂಟರ್‌ಗೆ ಫುಲ್ ಡಿಮ್ಯಾಂಡ್ ಇದ್ದು, ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ನೀವು ದಿನಬಳಕೆಗಾಗಿ ಹೊಚ್ಚ ಹೊಸ ಇ-ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಐಕ್ಯೂಬ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ನೂತನ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಬೆಲೆ & ರೂಪಾಂತರಗಳು (Price & Variants):

ಹೊಚ್ಚ ಹೊಸ 'ಟಿವಿಎಸ್ ಐಕ್ಯೂಬ್' ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಕನಿಷ್ಠ ರೂ.1.08 ಲಕ್ಷ ಹಾಗೂ ಗರಿಷ್ಠ ರೂ.1.62 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಸ್ಟ್ಯಾಂಡರ್ಡ್ ಐಕ್ಯೂಬ್ (Standard iQube), ಐಕ್ಯೂಬ್ ಎಸ್ (iQube S) ಹಾಗೂ ಐಕ್ಯೂಬ್ ಎಸ್‌ಟಿ (iQube ST) ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ.

TVS iQube Price Design Colours Range Features And All Details

ವಿನ್ಯಾಸ & ಬಣ್ಣಗಳು (Design & Colours)

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ತುಂಬಾ ಚೆನ್ನಾಗಿರುವ ಎಲ್ಇಡಿ ಹೈಡ್‌ಲೈಟ್ 'ಯು' ಆಕಾರಕ್ಕೆ ಹೋಲಿಕೆಯಾಗಬಲ್ಲ ಎಲ್ಇಡಿ ಡಿಆರ್‌ಎಲ್‌ ಮತ್ತು ಎಲ್ಇಡಿ ಟೈಲ್‌ಲೈಟ್‌ನ್ನು ಪಡೆದಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತವನ್ನು ಒದಗಿಸಲು 12-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು & ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಟೈಟಾನಿಯಂ ಗ್ರೇ, ವಾಲ್ನಟ್ ಬ್ರೌನ್, ಸ್ಟಾರ್ಲೈಟ್ ಬ್ಲೂ ಹಾಗೂ ಕಾಪರ್ ಬ್ರೌನ್ ಬೀಜ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.

ಸುತ್ತಳತೆ (Dimensions):

ಈ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ವಿಶಾಲವಾಗಿದೆ. 1,805 ಮಿ.ಮೀ ಉದ್ದ, 645 ಮಿ.ಮೀ ಅಗಲ ಮತ್ತು 1,140 ಮಿ.ಮೀ ಎತ್ತರವಿದೆ. 157 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,301 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 132 ಕೆಜಿವರೆಗೆ ತೂಕವಿದೆ.

TVS iQube Price Design Colours Range Features And All Details

ಕಾರ್ಯಕ್ಷಮತೆ (Performance):

ನೂತನ 'ಟಿವಿಎಸ್ ಐಕ್ಯೂಬ್' ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿದೆ. ಸ್ಟ್ಯಾಂಡರ್ಡ್ 'ಐಕ್ಯೂಬ್' ಮಾಡೆಲ್, 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್), 3,1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ ಕ್ರಮವಾಗಿ 94 ಕಿ.ಮೀ, 123 ಕಿ.ಮೀ ಹಾಗೂ 145 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ.

ಅದೇ ರೀತಿಯಲ್ಲಿ 'ಐಕ್ಯೂಬ್ ಎಸ್' ಮಾಡೆಲ್, 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 145 ಕಿ.ಮೀ ವರೆಗೆ ರೇಂಜ್ ನೀಡುತ್ತದೆ. 'ಐಕ್ಯೂಬ್ ಎಸ್‌ಟಿ' ಮಾಡೆಲ್, 5.3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 212 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ.

TVS iQube Price Design Colours Range Features And All Details

ವೈಶಿಷ್ಟ್ಯಗಳು (Features):

ಇದು ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಟಿಎಫ್‌ಟಿ ಸ್ಕ್ರೀನ್, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್, ಹಿಲ್ ಹೋಲ್ಡ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದೆ. ಹೆಚ್ಚಿನ ಲಗೇಜ್ ಕೊಂಡೊಯ್ಯಲು ಸಾಧ್ಯವಾಗುವಂತೆ ದೊಡ್ಡದಾದ 32-ಲೀಟರ್‌ನಷ್ಟು ಸ್ಟೋರೇಜ್‌ನ್ನು ಪಡೆದಿದೆ. ಸೀಟ್ ಎತ್ತರವು 770 ಮಿ.ಮೀ ಇದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):

ಹೊಸ 'ಟಿವಿಎಸ್ ಐಕ್ಯೂಬ್' ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಬಲ್ಲದು. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಟ್ವಿನ್ ಟ್ಯೂಬ್ ಶಾಕ್ಸ್ ಸಸ್ಪೆನ್ಸನ್ ಸೆಟಪ್‌ನ್ನು ಪಡೆದಿದೆ. ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಪ್ರತಿಸ್ಪರ್ಧಿ ಸ್ಕೂಟರ್‌ಗಳು (Rival Scooters):

ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಸಾಲು - ಸಾಲು ಎದುರಾಳಿಗಳಿವೆ. ಬಜಾಜ್ ಚೇತಕ್ (Bajaj Chetak), ಎಥರ್ ರಿಜ್ಟಾ (Ather Rizta), ಓಲಾ ಎಸ್1 ಪ್ರೊ (Ola S1 Pro), ಎಥರ್ 450ಎಕ್ಸ್ (Ather 450X) ಹಾಗೂ ಹೀರೋ ವಿಡಾ ವಿ2 (Hero Vida V2) ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Wednesday, March 11, 2026, 13:16 [IST]
English summary
Tvs iqube price design colours range features and all details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+