TVS: ಜನಪ್ರಿಯ ಟಿವಿಎಸ್ ಜುಪಿಟರ್ ಸ್ಕೂಟರ್ ಬೆಲೆ ಏರಿಕೆ.. ಹೊಸ ದರವೆಷ್ಟು?

ಟಿವಿಎಸ್ ಜುಪಿಟರ್ 110 (TVS Jupiter 110) ಜನಮೆಚ್ಚಿದ ಸ್ಕೂಟರ್ ಎಂದೇ ಮನೆ ಮಾತಾಗಿದೆ. ಇದು ದಿನಬಳಕೆಗೆ ಹೆಚ್ಚು ಸೂಕ್ತವಾಗಿದೆ. ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೇ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಇದೇ 'ಜುಪಿಟರ್ 110' ಎಕ್ಸ್-ಶೋರೂಂ ಬೆಲೆಯನ್ನು ಪರಿಷ್ಕರಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೊಚ್ಚ ಹೊಸ ಟಿವಿಎಸ್ ಜುಪಿಟರ್ 110 ಸ್ಕೂಟರ್ ಹಲವು ವಿಧದಲ್ಲಿ ಖರೀದಿಗೆ ದೊರೆಯುತ್ತದೆ. ಇದರ 'ಡ್ರಮ್' ರೂಪಾಂತರದ ದರವು ರೂ.750 ಏರಿಕೆಯಾಗಿದ್ದು, ರೂ.73,400 ಬೆಲೆಯನ್ನು ಹೊಂದಿದೆ. ಹಳೆಯ ದರವು 72,650 ಆಗಿತ್ತು. 'ಡ್ರಮ್ ಅಲಾಯ್' ರೂಪಾಂತರದ ಬೆಲೆ ರೂ.550 ಹೆಚ್ಚಳಗೊಂಡಿದ್ದು, ರೂ.78,000 ದರವನ್ನು ಪಡೆದಿದೆ. ಈ ಹಿಂದೆ ರೂ.77,450 ಇತ್ತು.

TVS Jupiter 110 Scooter Price Hike Up To Rs 1 250 Details

ಈ ಸ್ಕೂಟರ್‌ನ 'ಡ್ರಮ್ ಎಸ್ಎಕ್ಸ್‌ಸಿ' ರೂಪಾಂತರದ ಬೆಲೆ ರೂ.850 ಅಧಿಕಗೊಂಡಿದ್ದು, ರೂ.82,100 ದರವನ್ನು ಒಳಗೊಂಡಿದೆ. ಹಳೆಯ ಬೆಲೆ ರೂ.81,250 ಆಗಿತ್ತು. 'ಡಿಸ್ಕ್ ಎಸ್ಎಕ್ಸ್‌ಸಿ' ರೂಪಾಂತರದ ದರವು ಏರಿಕೆಯಾಗಿಲ್ಲ. ರೂ.87,750 ಬೆಲೆಯನ್ನು ಹೊಂದಿದೆ. 'ಡಿಸ್ಕ್ ಎಸ್ಎಕ್ಸ್‌ಸಿ ಬಿ.ಇ.' ರೂಪಾಂತರದ ದರ ರೂ.1,250 ಹೆಚ್ಚಳಗೊಂಡಿದ್ದು, ರೂ.86,900 ಬೆಲೆಯನ್ನು ಪಡೆದಿದೆ. ಹಳೆಯ ದರವು ರೂ.85,650 ಆಗಿತ್ತು.

'ಟಿವಿಎಸ್ ಜುಪಿಟರ್ 110' ವಿಶೇಷತೆಗಳೇನು:

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ನೋಡಲು ಚೆನ್ನಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್‌ನ್ನು ಪಡೆದಿದೆ. ಡಾನ್ ಬ್ಲೂ ಮ್ಯಾಟ್, ಲೂನಾರ್ ವೈಟ್ ಗ್ಲಾಸ್, ಮೆಟಿಯರ್ ರೆಡ್ ಗ್ಲಾಸ್, ಸ್ಟಾರ್‌ಲೈಟ್ ಬ್ಲೂ ಗ್ಲಾಸ್, ಸ್ಟಾರ್‌ಡಸ್ಟ್ ಬ್ಲ್ಯಾಕ್ ಮತ್ತು ಟೈಟಾನಿಯಂ ಗ್ರೇ ಮ್ಯಾಟ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.

TVS Jupiter 110 Scooter Price Hike Up To Rs 1 250 Details

ಈ ಸ್ಕೂಟರ್ ಸಾಕಷ್ಟು ವಿಶಾಲವಾಗಿದೆ. 1,848 ಎಂಎಂ ಉದ್ದ, 665 ಎಂಎಂ ಅಗಲ ಮತ್ತು 1,158 ಎಂಎಂ ಎತ್ತರವಿದೆ. ಜೊತೆಗಿದು 163 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,275 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ. ಸರಿ ಸುಮಾರು 105 ಕೆಜಿ ತೂಕವಿದೆ.

ನೂತನ 'ಜುಪಿಟರ್' ಸ್ಕೂಟರ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 113-ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 8.02 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 9.8 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 50 ಕಿಲೋಮೀಟರ್‌ವರೆಗೂ ಮೈಲೇಜ್‌ನ್ನು ಕೊಡುತ್ತದೆ. 5.1 ಲೀಟರ್‌ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಹೊಂದಿದೆ.

TVS Jupiter 110 Scooter Price Hike Up To Rs 1 250 Details

ಇದು ಪುಲ್ ಡಿಜಿಟಲ್ ಕಲರ್ ಇನ್ಸ್ಟ್ರುಮೆಂಟ್ ಕನ್ಸೋಲ್‌, ಬ್ಲೂಟೂತ್ ಕನೆಕ್ಟಿವಿಟಿ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಎಂಜಿನ್ ಕಿಲ್ ಸ್ವಿಚ್ ಮತ್ತು ಐಗೋ ಅಸಿಸ್ಟ್‌ನಂತಹ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸೀಟ್ ಎತ್ತರವು 770 ಎಂಎಂ ಇದೆ. 33 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್‍ನ್ನು ತನ್ನದಾಗಿಸಿಕೊಂಡಿದೆ. 82 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 8.29 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಈ ಸ್ಕೂಟರ್ ಸುರಕ್ಷತೆಯಿಂದಲೂ ಮನೆ ಮಾತಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಲಿದೆ. ಅದಕ್ಕಾಗಿ ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಹೈಡ್ರಾಲಿಕ್ ಮತ್ತು ಹಿಂದೆ (ರೇರ್) 3-ಸ್ಟೆಪ್ ಅಡ್ಜಸ್ಟೇಬಲ್ ಟ್ವಿನ್ ಟ್ಯೂಬ್ ಎಮಲ್ಷನ್ ಟೈಪ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡಿಸ್ಕ್/ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ. 12-ಇಂಚಿನ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ.

More from DriveSpark

Article Published On: Thursday, February 5, 2026, 11:02 [IST]
English summary
Tvs jupiter 110 scooter price hike up to rs 3250 details
Read more on tvs motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+