TVS: ಪವರ್ ತೋರಿಸಿದ ಟಿವಿಎಸ್.. ಅಬ್ಬರಿಸಿದ ಜುಪಿಟರ್.. ಆಕ್ಟಿವಾಗೆ ಶುರುವಾಯ್ತು ನಡುಕ.. ಮನಸೋತ ಜನ!
ಟಿವಿಎಸ್ ಜುಪಿಟರ್ (TVS Jupiter) ಪ್ರಖ್ಯಾತ ಸ್ಕೂಟರ್ ಎಂದೇ ಮನೆ ಮಾತಾಗಿದೆ. ಈ ಸ್ಕೂಟರ್‌ಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯೇ ಮಾರಾಟಗೊಂಡಿದೆ. ಒಟ್ಟು 1,29,744 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1,07,847 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 16.89% ಬೆಳವಣಿಗೆಯಾಗಿದೆ.
ನೂತನ 'ಜುಪಿಟರ್' ಮಾರಾಟ ಸಂಖ್ಯೆ ಅಧಿಕವಾಗಲು ಹಲವು ಕಾರಣಗಳಿವೆ. ಈ ಸ್ಕೂಟರ್ ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದ್ದು, ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಹೀಗಾಗಿ ಮಾರಾಟವು ಹೆಚ್ಚಳಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ. ಇದು ಜುಪಿಟರ್ 125 ಮತ್ತು ಜುಪಿಟರ್ 110 ಎಂಬ ಎರಡು ವಿಧದಲ್ಲಿ ಸಿಗುತ್ತದೆ.

ಟಿವಿಎಸ್ ಜುಪಿಟರ್ 125 (TVS Jupiter 125) ವಿಶೇಷತೆಗಳೇನು:
ಈ ಸ್ಕೂಟರ್ ರೂ.83,500 ರಿಂದ 92,460 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಟೈಟಾನಿಯಂ ಗ್ರೇ, ಇಂಡಿಬ್ಲೂ, ಪ್ರಿಸ್ಟೈನ್ ವೈಟ್, ಡಾನ್ ಆರೆಂಜ್, ಸ್ಪಾರ್ಕ್ಲಿಂಗ್ ಬ್ಲ್ಯಾಕ್, ಎಲೈಟ್ ಗ್ರೀನ್, ಮ್ಯಾಟ್ ಕಾಪರ್ ಮತ್ತು ಐವರಿ ಬ್ರೌನ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 163 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1275 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.
ಇದು 124.8 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 8.2 ಬಿಹೆಚ್‌ಪಿ ಅಶ್ವ ಶಕ್ತಿ ಹಾಗೂ 10.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 50 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 95 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 16.72 ಸೆಕೆಂಡುಗಳಲ್ಲಿ 0 ರಿಂದ 80 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಹೊಸ 'ಜುಪಿಟರ್ 125' ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಮತ್ತು ಎಲೆಕ್ಟ್ರಿಕ್ ಸೈಲಂಟ್ ಸ್ಟಾರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ & ಹಿಂಭಾಗ (ರೇರ್) 3-ಸ್ಟೆಪ್ ಅಡ್ಜಸ್ಟೇಬಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಟಿವಿಎಸ್ ಜುಪಿಟರ್ 110 (TVS Jupiter 110):
ಈ ಸ್ಕೂಟರ್ ರೂ.77,000 ರಿಂದ ರೂ.89,600 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಗ್ಯಾಲಕ್ಟಿಕ್ ಕಾಪರ್ ಮ್ಯಾಟ್, ಡಾನ್ ಬ್ಲೂ ಮ್ಯಾಟ್, ಮೆಟಿಯರ್ ರೆಡ್ ಗ್ಲಾಸ್, ಸ್ಟಾರ್‌ಡಸ್ಟ್ ಬ್ಲ್ಯಾಕ್ ಮತ್ತು ಟೈಟಾನಿಯಂ ಗ್ರೇ ಮ್ಯಾಟ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 163 ಎಂಎಂ ಗ್ರೌಂಡ್ ಕ್ಲಿಯರೆನ್ಸ್ & 1,275 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

ಇದು 113 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 8.02 ಬಿಹೆಚ್‌ಪಿ ಅಶ್ವ ಶಕ್ತಿ ಹಾಗೂ 9.8 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 50 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 82 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಬರೀ 8.29 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ನೂತನ 'ಜುಪಿಟರ್ 110' ಪುಲ್-ಡಿಜಿಟಲ್ ಕಲರ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಎಂಜಿನ್ ಕಿಲ್ ಸ್ವಿಚ್, ಐಗೋ ಅಸಿಸ್ಟ್ & ಬ್ಲೂಟೂತ್ ಕನೆಕ್ಟಿವಿಟಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಹೈಡ್ರಾಲಿಕ್ ಮತ್ತು ಹಿಂಭಾಗ (ರೇರ್) 3-ಸ್ಟೆಪ್ ಅಡ್ಜಸ್ಟೇಬಲ್ ಟ್ವಿನ್-ಟ್ಯೂಬ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.


Click it and Unblock the Notifications








