TVS: ಭಾರತದ ಮೊದಲ ಹೈಪರ್ ಸ್ಪೋರ್ಟ್ ಸ್ಕೂಟರ್: ಸರ್ವಸಿದ್ಧ ಮಾಡಿಕೊಂಡ ಟಿವಿಎಸ್
ಭಾರತದ ಮೊದಲ 150 ಸಿಸಿ ಹೈಪರ್ ಸ್ಪೋರ್ಟ್ ಸ್ಕೂಟರ್ ಆಗಿರುವ ಟಿವಿಎಸ್ ಎನ್‌ಟಾರ್ಕ್ 150 (TVS NTORQ 150)ನ ಹೊಸ ಜಾಹೀರಾತನ್ನು ಟಿವಿಎಸ್ ಮೋಟಾರ್ ಕಂಪನಿ ಅನಾವರಣಗೊಳಿಸಿದೆ. ಇದರಲ್ಲಿ ಟಿವಿಎಸ್ ಎನ್‌ಟಾರ್ಕ್ 150, ಪ್ರತಿ ರೈಡ್‌ನಲ್ಲೂ ರೇಸ್‌ಟ್ರಾಕ್‌ನ ಅನುಭವ ನೀಡುತ್ತದೆ ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಟಿವಿಎಸ್ ಮೋಟಾರ್ ಪರಂಪರೆಯಿಂದ ಹೊರಬಂದ ಈ ಸ್ಕೂಟರ್ ತನ್ನ ವಿಭಾಗದಲ್ಲಿ ಹೊಸ ಅಲೆ ಎಬ್ಬಿಸಲಿದೆ. ಎಲ್ಲಾ ಸ್ಕೂಟರ್‌ಗಳಿಗಿಂತ ವಿಭಿನ್ನ ರೈಡಿಂಗ್ ಅನುಭವ ನೀಡಲಿದೆ ಎಂದು ಟಿವಿಎಸ್ ಹೇಳಿದೆ.
ಭಾರತದ ಮೊದಲ ಹೈಪರ್ ಸ್ಕೂಟರ್ ಮತ್ತು ಅತ್ಯಂತ ವೇಗದ 150 ಸಿಸಿ ಸ್ಕೂಟರ್ ಆಗಿರುವ ಇದು ಕೇವಲ 6.3 ಸೆಕೆಂಡುಗಳಲ್ಲಿ 60 ಕಿ.ಮೀ ವೇಗವನ್ನು ತಲುಪಬಲ್ಲದು. ರೇಸ್ ಮತ್ತು ಸ್ಟ್ರೀಟ್ ರೈಡಿಂಗ್ ಮೋಡ್‌ಗಳು, ಟ್ರಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಅನ್ನು ಒಳಗೊಂಡಿದೆ. ದೈನಂದಿನ ಸವಾರಿಗಾಗಿ ರೇಸ್‌ಟ್ರಾಕ್ - ಪ್ರೇರಿತ ಪರ್ಫಾಮೆನ್ಸ್ ನೀಡುತ್ತದೆ. ಯಾವಾಗಲೂ ಸ್ಪರ್ಧಾತ್ಮಕ ಮನಸ್ಥಿತಿಯಿರುವ ಯುವಕರನ್ನು ಇದು ಖಂಡಿತ ಆಕರ್ಷಿಸುತ್ತದೆ.

ದೈನಂದಿನ ಸವಾರಿಗಳಲ್ಲಿ ರೈಡರ್‌ಗಳಿಗೆ ಅಡ್ರಿನಾಲಿನ್, ಚುರುಕುತನ ಮತ್ತು ನಿಯಂತ್ರಣವನ್ನು ತುಂಬುವ 'ಹೈಪರ್ ಮೈಂಡ್‌ಸೆಟ್'ನ್ನು ಹೆಚ್ಚಿಸುತ್ತದೆ. ಸ್ಕೂಟರ್‌ನ ದಿಟ್ಟ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ಹೈ ಪರ್ಫಾಮೆನ್ಸ್‌ನ್ನು ಈ ವಿಡಿಯೋದಲ್ಲಿ ಪ್ರದರ್ಶಿಸಲಾಗಿದೆ, ಥ್ರಿಲ್ ಬಯಸುವ ಯುವಕರಿಗೆ ಭಾರತದಲ್ಲಿ TVS NTORQ 150 ಅಂತಿಮ ಆಯ್ಕೆಯಾಗಲಿದೆ ಎಂದು ಕಂಪನಿ ಭರವಸೆ ನೀಡಿದೆ.
ಈ ಹಿಂದೆ 2018 ರಲ್ಲಿ ಕಂಪನಿಯು ಮೋಟಾರ್‌ಸೈಕಲ್‌ನಂತಹ ಪರ್ಫಾಮೆನ್ಸ್ ಅನ್ನು ದೈನಂದಿನ ಬಳಕೆಯ ಸ್ಕೂಟರ್‌ನಲ್ಲಿ ಬೆರೆಸುವ ಮೂಲಕ ಎನ್‌ಟಾರ್ಕ್ 125 ಸ್ಕೂಟರ್‌ನ್ನು ಬಿಡುಗಡೆ ಮಾಡಿತ್ತು. ಆಗ ಈ ಸ್ಕೂಟರ್ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಯುವ ಸವಾರರಲ್ಲಿ ಆದ್ಯತೆಯ ಸ್ಕೂಟರ್ ಆಗಿ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಹೊರಹೊಮ್ಮಿತು. ಅಂದಿನಿಂದ ಎನ್‌ಟಾರ್ಕ್ ತನಗೆಂದೆ ವಿಶೇಷ ಯುವಕರ ಬಳಗವನ್ನು ಪಡೆದುಕೊಂಡಿತು.

ಇದಾದ ಕೆಲ ವರ್ಷಗಳಲ್ಲಿ, ಬ್ರ್ಯಾಂಡ್ ಭಾರತದ ಮೊದಲ ಬ್ಲೂಟೂತ್ - ಸಂಪರ್ಕಿತ ಸ್ಕೂಟರ್, 10 PS ಪವರ್‌ಗಿಂತ ಹೆಚ್ಚಿನ ಪವರ್ ಹೊಂದಿರುವ ಮೊದಲ ಸ್ಕೂಟರ್ ಮತ್ತು ಮಾರ್ವೆಲ್ ಜೊತೆಗಿನ ವಿಶ್ವದ ಮೊದಲ ಸ್ಕೂಟರ್ ಸಹಯೋಗ ಸೇರಿದಂತೆ ಹಲವಾರು ವಿಶೇಷತೆಗಳೊಂದಿಗೆ ಈ ಸ್ಕೂಟರ್ ಅನ್ನು ಅಪ್‌ಡೇಟ್ ಮಾಡುತ್ತಲೇ ಬಂದಿದೆ. ಈಗ ಟಿವಿಎಸ್ ಎನ್‌ಟಾರ್ಕ್ 150 ಸಿಸಿ ಹೈಪರ್ ಸ್ಪೋರ್ಟ್ ಸ್ಕೂಟರ್‌ನೊಂದಿಗೆ ಮುಂದಿನ ಅಧ್ಯಾಯಕ್ಕೆ ಕಾಲಿಡುತ್ತಿದೆ.
ಈ ಕುರಿತು ಮಾತನಾಡಿದ ಟಿವಿಎಸ್ ಮೋಟಾರ್ ಕಂಪನಿಯ ಹಿರಿಯ ಉಪಾಧ್ಯಕ್ಷ ಅನಿರುದ್ಧ ಹಲ್ದಾರ್, "ಟಿವಿಎಸ್ ಎನ್‌ಟಾರ್ಕ್ 150 ಯುವಕರಿಗೆ ಒಂದು ಐಕಾನಿಕ್ ಸ್ಕೂಟರ್ ಆಗಿ ಬೆಳೆಯಲಿದೆ, ಇದು ಹೊಸ ಪೀಳಿಗೆಯ ಸವಾರರೊಂದಿಗೆ ಆಳವಾದ ಭಾವನಾತ್ಮಕ ಸಂಪರ್ಕದ ಮೇಲೆ ನಿರ್ಮಿಸಲ್ಪಟ್ಟಿದೆ. ನಮ್ಮ ಸ್ಕೂಟರ್‌ಗಳು ವರ್ಷಗಳಿಂದ ರೇಸ್‌ಟ್ರಾಕ್‌ಗಳಲ್ಲಿ ಪ್ರಾಬಲ್ಯ ಸಾಧಿಸಿವೆ, ಇದು ಟಿವಿಎಸ್ ಎನ್‌ಟಾರ್ಕ್ 125 ಗೆ ಜನ್ಮ ನೀಡಿದ ರೇಸಿಂಗ್ ಪರಂಪರೆಯಾಗಿದೆ.

ಹೊಸ ಟಿವಿಎಸ್ ಎನ್‌ಟಾರ್ಕ್ 150 ನೊಂದಿಗೆ, ಈ ವಂಶಾವಳಿಯನ್ನು ಹಲವಾರು ಹಂತಗಳಲ್ಲಿ ಎತ್ತರಕ್ಕೆ ಕೊಂಡೊಯ್ಯಲಾಗಿದೆ. ಹೊಸ ಜಾಹಿರಾತು ಈ 'ಹೈಪರ್' ಪರ್ಫಾಮೆನ್ಸ್ ಸ್ಕೂಟರ್‌ನ ಸಾಹಸವನ್ನು ಸೆರೆಹಿಡಿದಿದೆ, ಇದರಲ್ಲಿ ಅತ್ಯಾಧುನಿಕ ಎಂಜಿನಿಯರಿಂಗ್, ರೇಸಿಂಗ್ ಡಿಎನ್‌ಎ ಮತ್ತು ಸ್ಪರ್ಧಾತ್ಮಕ ಮನೋಭಾವ ಹೊಂದಿರುವ ಸವಾರಿಯನ್ನು ವೈಯಕ್ತಿಕ ಓಟದಂತೆ ಭಾಸವಾಗುವಂತೆ ಮಾಡುತ್ತದೆ ಎಂದರು.
ಹೈ - ಪರ್ಫಾಮೆನ್ಸ್, ಸ್ಪೋರ್ಟಿ ಡಿಸೈನ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಿಂಫನಿಯಾಗಿ ವಿನ್ಯಾಸಗೊಳಿಸಲಾದ TVS NTORQ 150, ಅದರ ನೋಟ, ಥ್ರೊಟಲ್ ಪ್ರತಿಕ್ರಿಯೆ ಹಾಗೂ ಡಿಜಿಟಲ್ ಬುದ್ಧಿವಂತಿಕೆಯ ಮೂಲಕ ವಿಸ್ಮಯವನ್ನು ಉಂಟುಮಾಡುವ ಬ್ರ್ಯಾಂಡ್‌ನ ಸಂಪ್ರದಾಯವನ್ನು ಮುಂದುವರಸಲಿದೆ ಎಂದು ಟಿವಿಎಸ್ ಮೋಟಾರ್ ವಿಶ್ವಾಸ ವ್ಯಕ್ತಪಡಿಸಿದೆ.


Click it and Unblock the Notifications








