TVS: ಟಿವಿಎಸ್ ಟೂ-ವೀಲರ್ಗಳಿಗೆ ಕ್ಯೂ ನಿಂತ ಗ್ರಾಹಕರು.. ಐಕ್ಯೂಬ್ ಇ-ಸ್ಕೂಟರ್‌ಗೆ ಫುಲ್ ಡಿಮ್ಯಾಂಡ್!
ಟಿವಿಎಸ್ ಮೋಟಾರ್ (TVS Motor), ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಈ 2026ರ ಫೆಬ್ರವರಿಯಲ್ಲಿ ಒಟ್ಟು 5,29,308 ಯುನಿಟ್ ದ್ವಿಚಕ್ರ ಹಾಗೂ ತ್ರಿಚಕ್ರ (ದೇಶೀಯ - ರಫ್ತು) ವಾಹನಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸಿದೆ. 2025ರ ಇದೇ ಅವಧಿಯಲ್ಲಿ 4,03,976 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 31% ಪ್ರಗತಿಯಾಗಿದೆ. ಇದರಲ್ಲಿ 5,07,862 ಯುನಿಟ್ ದ್ವಿಚಕ್ರ ವಾಹನ ಹಾಗೂ 21,446 ಯುನಿಟ್ ತ್ರಿಚಕ್ರ ವಾಹನಗಳು ಸೇರಿವೆ.
ಮೋಟಾರ್‌ಸೈಕಲ್ (Motorcycle) ವಿಭಾಗದಲ್ಲೂ ಉತ್ತಮವಾದ ಬೆಳವಣಿಯನ್ನು ಕಾಣಲಾಗಿದೆ. ಇದೇ ಫೆಬ್ರವರಿವಲ್ಲಿ ಬರೋಬ್ಬರಿ 2,41,282 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2025ರ ಫೆಬ್ರವರಿ ತಿಂಗಳಲ್ಲಿ 1,92,960 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಮೂಲಕ ಶೇಕಡ 25.04% ಅಭಿವೃದ್ಧಿಯಾಗಿದೆ.

ಸ್ಕೂಟರ್ (Scooter) ವಿಭಾಗದಲ್ಲೂ ಭರ್ಜರಿಯಾದ ಪ್ರಗತಿಯನ್ನು ಸಾಧಿಸಿದೆ. ಕಳೆದ ತಿಂಗಳು (ಫೆಬ್ರವರಿ - 2026) 2,19,895 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2025ರ ಇದೇ ಅವಧಿಯಲ್ಲಿ 1,64,415 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಈ ಅಂಕಿಸಂಖ್ಯೆಯನ್ನು ವಿಶೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 33.74% ಬೆಳವಣಿಗೆಯಾಗಿದೆ.
ಟಿವಿಎಸ್ ಮೊಪೆಡ್ (Moded) ಮಾರಾಟವು ಚೆನ್ನಾಗಿದೆ. ಈ 2026ರ ಫೆಬ್ರವರಿಯಲ್ಲಿ ಸರಿ ಸುಮಾರು 46,685 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2025ರ ಫೆಬ್ರವರಿ ತಿಂಗಳು 34,514 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಮೂಲಕ ಶೇಕಡ 35.26% ಪ್ರಗತಿಯಾಗಿದೆ.

ತ್ರಿಚಕ್ರ ವಾಹನ (3 - Wheeler) ಮಾರಾಟವು ಉತ್ತಮವಾಗಿದೆ. ದೇಶೀಯವಾಗಿ ಇದೇ ಫೆಬ್ರವರಿವಲ್ಲಿ 5,569 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2025ರ ಫೆಬ್ರವರಿಯಲ್ಲಿ 2,911 ಯುನಿಟ್‌ಗಳನ್ನು ಮಾರಲಾಗಿತ್ತು. ಇದರೊಂದಿಗೆ 91.31% ಅಧಿವೃದ್ದಿಯಾಗಿದೆ. ವಿದೇಶಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡಲಾಗಿದೆ. ಒಟ್ಟು 15,877 ಯುನಿಟ್‌ಗಳನ್ನು ರವಾನಿಸಲಾಗಿದೆ. ಶೇಕಡ 73.03% ಬೆಳವಣಿಗೆಯಾಗಿದೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ಮಾರಾಟದಲ್ಲಿ ಭಾರೀ ಪ್ರಗತಿಯನ್ನು ಕಂಡಿದೆ. ಈ ಫೆಬ್ರವರಿಯಲ್ಲಿ ಬರೋಬ್ಬರಿ 38,386 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2025ರ ಇದೇ ಅವಧಿಯಲ್ಲಿ 24,017 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡ 59.83% ಅಧಿವೃದ್ದಿಯಾಗಿದೆ. ಟಿವಿಎಸ್ ಈ ಪರಿಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಲು 'ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ಬಹುಮುಖ್ಯ ಕಾರಣವಾಗಿದೆ.
ಟಿವಿಎಸ್ ಐಕ್ಯೂಬ್ (TVS iQube) ವಿಶೇಷತೆಗಳೇನು:
ಈ ಎಲೆಕ್ಟ್ರಿಕ್ ಸ್ಕೂಟರ್ ಸ್ಟ್ಯಾಂಡರ್ಡ್ ಐಕ್ಯೂಬ್, ಐಕ್ಯೂಬ್ ಎಸ್ & ಐಕ್ಯೂಬ್ ಎಸ್‌ಟಿ ಎಂಬ 3 ವಿಧದಲ್ಲಿ ಖರೀದಿಗೆ ದೊರೆಯುತ್ತದೆ. 'ಸ್ಟ್ಯಾಂಡರ್ಡ್ ಐಕ್ಯೂಬ್' ರೂ.1.10 ಲಕ್ಷದಿಂದ ರೂ.1.30 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್), 3,1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ ಕ್ರಮವಾಗಿ 94 ಕಿಲೋಮೀಟರ್, 123 ಕಿಲೋಮೀಟರ್ ಹಾಗೂ 145 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ.
'ಐಕ್ಯೂಬ್ ಎಸ್' ಇ-ಸ್ಕೂಟರ್ ರೂ.1.40 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 145 ಕಿಲೋಮೀಟರ್‌ವರೆಗೆ ರೇಂಜ್ ನೀಡುತ್ತದೆ. ಅದೇ ರೀತಿಯಲ್ಲಿ 'ಐಕ್ಯೂಬ್ ಎಸ್‌ಟಿ' ರೂ.1.61 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 5.3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 212 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ.


Click it and Unblock the Notifications








