TVS: ಸ್ವದೇಶಿ ಬ್ರಾಂಡ್ ಬಿಟ್ಟುಕೊಡದ ಜನ: ವಿದೇಶಿ ಕಂಪನಿಗಳಿಗೆ ಶಾಕ್! ಜನವರಿಯಲ್ಲಿ 3 ಲಕ್ಷ...
ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ವಿಭಾಗಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ ಕಂಪನಿ (TVS Motor Company), ಭಾರತದಲ್ಲಿ ಜನವರಿ ತಿಂಗಳ ಮಾರಾಟ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಕಂಪನಿಯು ದೇಶದ ಪ್ರಮುಖ ವಾಹನ ತಯಾರಕರು ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದೆ. ಗ್ರಾಹಕರಿಗೆ ನಮ್ಮ ವಾಹನಗಳ ಮೇಲಿನ ನಂಬಿಕೆಯು ದುಪ್ಪಟ್ಟಾಗಿದೆ, 2026 ಜನವರಿ ತಿಂಗಳಿನಲ್ಲಿ ಬರೋಬ್ಬರಿ 5,11,766 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದೇವೆ. 2025 ಜನವರಿ ತಿಂಗಳಿನಲ್ಲಿ (ಕಳೆದ ವರ್ಷ) 3,97,623 ಯುನಿಟ್ ವಾಹನಗಳು ಮಾರಾಟವಾಗಿದ್ದವು, ಅಂದರೆ ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ 29% ರಷ್ಟು ಬೆಳವಣಿಗೆಯಾಗಿದೆ ಎಂದು ಟಿವಿಎಸ್ ತಿಳಿಸಿದೆ.
ದ್ವಿಚಕ್ರ ವಾಹನ
ಟಿವಿಎಸ್ ದ್ವಿಚಕ್ರ ವಾಹನಗಳಿಗೆ ವಿದೇಶಿ ಮಾರುಕಟ್ಟೆಗಳಲ್ಲೂ ಉತ್ತಮ ಬೇಡಿಕೆ ಇದೆ. ಒಟ್ಟು ದ್ವಿಚಕ್ರ ವಾಹನ ಮಾರಾಟದಲ್ಲಿ 28% ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, 2025 ಜನವರಿ ತಿಂಗಳಿನಲ್ಲಿ ಇತರ ದೇಶಗಳಿಗೆ ರಫ್ತು ಸೇರಿದಂತೆ 3,87,671 ಯುನಿಟ್ ವಾಹನಗಳು ಮಾರಾಟವಾಗಿದ್ದವು, ಈ ಬಾರಿ 2026 ಜನವರಿ ತಿಂಗಳಿನಲ್ಲಿ 4,94,195 ಯುನಿಟ್ ವಾಹನಗಳಿಗೆ (ರಫ್ತು ಸೇರಿದಂತೆ) ಮಾರಾಟ ಹೆಚ್ಚಾಗಿದೆ.

ಕೇವಲ ಭಾರತದಲ್ಲಿ ಮಾತ್ರ ದ್ವಿಚಕ್ರ ವಾಹನಗಳು 30% ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, 2025 ಜನವರಿ ತಿಂಗಳಲ್ಲಿ 2,93,860 ಯುನಿಟ್ ವಾಹನಗಳು ದೇಶದಲ್ಲಿ ಮಾರಾಟವಾಗಿದ್ದರೇ, ಈ ಬಾರಿ 2026 ಜನವರಿ ತಿಂಗಳಲ್ಲಿ 3,83,262 ಯುನಿಟ್ ವಾಹನಗಳು ಮಾರಾಟವಾಗಿವೆ. ಈ ಮಾರಾಟ ಬೆಳವಣಿಗೆಯು ದೇಶದಲ್ಲಿ ಗ್ರಾಹಕರಿಗೆ ಬ್ರಾಂಡ್ ಮೇಲೆ ಇರುವ ನಂಬಿಕೆ ಹಾಗೂ ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ.
ಸ್ಕೂಟರ್ ಹಾಗೂ ಬೈಕ್‌ಗಳದ್ದೇ ಹವಾ
ಟಿವಿಎಸ್ ಮೋಟಾರ್ ಸೈಕಲ್‌ಗಳು 26% ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, 2025 ಜನವರಿ ತಿಂಗಳಲ್ಲಿ ಕೇವಲ 1,74,388 ಯುನಿಟ್ ವಾಹನಗಳು ಮಾರಾಟವಾಗಿದ್ದರೆ, ಜನವರಿ 2026 ರಲ್ಲಿ 2,19,188 ಯುನಿಟ್ ವಾಹನಗಳಿಗೆ ಮಾರಾಟ ಹೆಚ್ಚಾಗಿದೆ. ಬೈಕ್‌ಗಳಿಗೆ ಸಮಾನವಾಗಿ ಸ್ಕೂಟರ್‌ಗಳು ಕೂಡ ಮಾರಾಟವಾಗಿದ್ದು, 30% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಜನವರಿ 2025 ರಲ್ಲಿ 1,71,111 ಯುನಿಟ್ ವಾಹನಗಳಿಂದ ಜನವರಿ 2026 ರಲ್ಲಿ 222,926 ಯುನಿಟ್‌ಗಳಿಗೆ ಮಾರಾಟ ಹೆಚ್ಚಾಗಿದೆ.

ಹೆಚ್ಚಾಯ್ತು ಎಲೆಕ್ಟ್ರಿಕ್ ವಾಹನ ಮಾರಾಟ
ಟಿವಿಎಸ್ ತನ್ನ ಎಲೆಕ್ಟ್ರಿಕ್ ವಾಹನ ವಿಭಾಗವನ್ನು ವೇಗವಾಗಿ ವಿಸ್ತರಿಸುತ್ತಿದ್ದು, ಗ್ರಾಹಕರಿಂದ ಉತ್ತಮ ಬೆಂಬಲ ಸಿಗುತ್ತಿದೆ. ತನ್ನ ಹೊಸ ಆರ್ಬಿಟರ್ ಹಾಗೂ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಂಪನಿಗೆ ಭರ್ಜರಿ ಲಾಭ ತಂದುಕೊಟ್ಟಿವೆ. 50% ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಜನವರಿ 2025 ರಲ್ಲಿ ಮಾರಾಟವಾಗಿದ್ದ 25,195 ಯುನಿಟ್ ವಾಹನಗಳಿಂದ ಜನವರಿ 2026 ರಲ್ಲಿ 37,756 ಯುನಿಟ್ ವಾಹನಗಳಿಗೆ ಮಾರಾಟ ಹೆಚ್ಚಾಗಿದೆ.
ಅಂತರರಾಷ್ಟ್ರೀಯ ವ್ಯವಹಾರ: ಕಂಪನಿಯ ಒಟ್ಟು ರಫ್ತು 21% ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಜನವರಿ 2025 ರಲ್ಲಿ 1,01,055 ಯುನಿಟ್ ವಾಹನಗಳಿಂದ ಜನವರಿ 2026 ರಲ್ಲಿ 1,22,343 ಯುನಿಟ್ ವಾಹನಗಳಿಗೆ ಮಾರಾಟ ಹೆಚ್ಚಾಗಿದೆ. ದ್ವಿಚಕ್ರ ವಾಹನ ರಫ್ತು 18% ರಷ್ಟು ಹೆಚ್ಚಾಗಿದ್ದು, ಜನವರಿ 2025 ರಲ್ಲಿ 93,811 ಯುನಿಟ್‌ಗಳಿಂದ ಜನವರಿ 2026 ರಲ್ಲಿ 1,10,933 ಯುನಿಟ್ ವಾಹನಗಳಿಗೆ ಮಾರಾಟ ಹೆಚ್ಚಾಗಿದೆ.

ತ್ರಿಚಕ್ರ ವಾಹನ: ಟಿವಿಎಸ್ ಕಂಪನಿಯು ತ್ರಿಚಕ್ರ ವಾಹನ ವಿಭಾಗದಲ್ಲೂ ಉತ್ತಮ ಬ್ರಾಂಡ್ ಆಗಿರುವ ಕಾರಣ, ದೇಶದ ಆಟೋ ವಿಭಾಗವು ಕಂಪನಿಗೆ ಉತ್ತಮ ಲಾಭವನ್ನು ತಂದುಕೊಡುತ್ತಿದೆ. ತ್ರಿಚಕ್ರ ವಾಹನಗಳು ದೇಶದಲ್ಲಿ 77% ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಜನವರಿ 2025 ರಲ್ಲಿ 9,952 ಯುನಿಟ್ ವಾಹನಗಳು ಮಾತ್ರ ಮಾರಾಟವಾಗಿದ್ದವು, ಆದರೆ ಈ ಬಾರಿ ಜನವರಿ 2026 ರಲ್ಲಿ 17,571 ಯೂನಿಟ್‌ಗಳು ಮಾರಾಟವಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








