TVS: ಎಥರ್ & ಓಲಾ ಕಥೆ ಮುಗಿತಾ? ಕಡಿಮೆ ಬೆಲೆಯ ಹೊಸ ಟಿವಿಎಸ್ ಇ-ಸ್ಕೂಟರ್ ಕುರಿತ ಪ್ರಮುಖಾಂಶಗಳು!

ಟಿವಿಎಸ್ ಆರ್ಬಿಟರ್ (TVS Orbiter) ಪ್ರಮುಖ ಇ-ಸ್ಕೂಟರ್ ಆಗಿ ಹೊರಹೊಮ್ಮುತ್ತಿದೆ. ಸದ್ಯ, ಈ ಎಲೆಕ್ಟ್ರಿಕ್ ಸ್ಕೂಟರ್‌ನ ಲೈನ್‌ಅಪ್‌ನ್ನು ಕಂಪನಿಯು ವಿಸ್ತರಿಸಿದೆ. ನಿನ್ನೆಯಷ್ಟೇ ಹೊಚ್ಚ ಹೊಸ 'ಆರ್ಬಿಟರ್ ವಿ1' ಮಾಡೆಲ್‌ನ್ನು ಬಿಡುಗಡೆಗೊಳಿಸಿದೆ. ನೀವು ದಿನಬಳಕೆಗಾಗಿ ನೂತನ ಇ-ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಟಿವಿಎಸ್ ಆರ್ಬಿಟರ್ ವಿ1' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟಿದೆ.. ವಿಶೇಷತೆಗಳೇನು ಎಂಬುದರ ಕುರಿತಾದ ಪ್ರತಿಯೊಂದು ವಿವರಗಳನ್ನು ತಿಳಿಯೋಣ.

ಬೆಲೆ (Price):

ನೂತನ 'ಟಿವಿಎಸ್ ಆರ್ಬಿಟರ್ ವಿ1' ಅಗ್ಗದ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ರೂ.84,500 (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಬಾಸ್ (ಬ್ಯಾಟರಿ-ಆಸ್-ಎ-ಸರ್ವಿಸ್) ಯೋಜನೆಯಡಿ ಸಹ ಸಿಗುತ್ತದೆ. ಅದರ ಬೆಲೆಯು ರೂ.49,999 ದಿಂದ ಆರಂಭವಾಗುತ್ತದೆ. ಚಂದಾದಾರಿಕೆಯ ಮಾಸಿಕ ಶುಲ್ಕ ರೂ.862 ಆಗಿದ್ದು, ಅನಿಯಮಿತವಾಗಿ ಉಪಯೋಗಿಸಬಹುದು.

Tvs Orbiter V1 Price Design Colours Range Features And All Details

ವಿನ್ಯಾಸ & ಬಣ್ಣಗಳು (Design & Colours):

ಇದು ತುಂಬಾ ಸರಳವಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಮನ ಸೆಳೆಯುವಂತಿದೆ. ವೈಸರ್‌ನೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ ಸ್ಟ್ರಿಪ್ ಹಾಗೂ ಟೈಲ್‌ಲೈಟ್‌ನ್ನು ಪಡೆದಿದೆ. ಮಾರ್ಷಿಯನ್ ಕಾಪರ್ ಹಾಗೂ ಸ್ಟೆಲ್ಲರ್ ಸಿಲ್ವರ್ ಎಂಬ ಎರಡು ಆಕರ್ಷಕ ಬಣ್ಣ ಬಣ್ಣಗಳೊಂದಿಗೂ ಲಭ್ಯವಿದೆ.

ಸುತ್ತಳತೆ (Dimensions):

ಈ ಸ್ಕೂಟರ್ ಸಾಕಷ್ಟು ವಿಶಾಲವಾಗಿದೆ. 1,914 ಎಂಎಂ ಉದ್ದ, 725 ಎಂಎಂ ಅಗಲ ಹಾಗೂ 1,142 ಎಂಎಂ ಎತ್ತರವಿದೆ. ಜೊತೆಗೆ 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,301 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 101 ಕೆಜಿ ತೂಕವಿದೆ.

ಕಾರ್ಯಕ್ಷಮತೆ (Performance):

ಹೊಸ 'ಟಿವಿಎಸ್ ಆರ್ಬಿಟರ್ ವಿ1' ಬೆಲೆಗೆ ತಕ್ಕಂತೆ ಉತ್ತಮವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 1.8 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 86 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. ಗ್ರಾಮೀಣ ಭಾಗಕ್ಕೆ ಹೋಲಿಕೆ ಮಾಡಿದರೆ, ನಗರ ಪ್ರದೇಶಕ್ಕೆ ಹೆಚ್ಚು ಸರಿ ಹೊಂದುತ್ತದೆ.

ವೈಶಿಷ್ಟ್ಯಗಳು (Features):

ಇದು ನಾನಾ ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್‌ಸಿಡಿ ಕಲರ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕನೆಕ್ಟ್ಡ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಜಿಯೋ-ಫೆನ್ಸಿಂಗ್, ಟೈಮ್-ಫೆನ್ಸಿಂಗ್, ಒಟಿಎ (ಓವರ್-ದಿ-ಏರ್) ಅಪ್‌ಡೇಟ್‌ಗಳು, ಕ್ರ್ಯಾಶ್ & ಫಾಲ್ ಅಲರ್ಟ್‍ಗಳು, ಆಂಟಿ ಥೆಫ್ಟ್ ಅಲರ್ಟ್‍ಗಳು, ಹಿಲ್-ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್ ಮತ್ತು ಪಾರ್ಕಿಂಗ್ ಅಸಿಸ್ಟ್‌ನ್ನು ಪಡೆದಿದೆ. ಇಕೋ ಮತ್ತು ಪವರ್ ಎಂಬ 2 ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 34-ಲೀಟರ್‌ನಷ್ಟು ಅಂಡರ್-ಸೀಟ್ ಸ್ಟೋರೇಜ್‌ನ್ನು ಪಡೆದಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):

ಈ ಸ್ಕೂಟರ್ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಗಾಗಿ ಟೆಲಿಸ್ಕೋಪಿಕ್ ಫೋರ್ಕ್ & ಹಿಂಭಾಗ (ರೇರ್) ಡುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಸನ್ ಸೆಟಪ್‌ನ್ನು ಹೊಂದಿದೆ. ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತ ಸಾಧಿಸಲು 14/ 12-ಇಂಚಿನ ಅಲಾಯ್ ವೀಲ್‌ಗಳು & ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ.

ಟಿವಿಎಸ್ ಆರ್ಬಿಟರ್ ವಿ2 (TVS Orbiter V2) ಕೂಡ ಖರೀದಿ ಲಭ್ಯ:

ಇನ್ಮುಂದೆ ಸ್ಟ್ಯಾಂಡರ್ಡ್ 'ಟಿವಿಎಸ್ ಆರ್ಬಿಟರ್' ಇ-ಸ್ಕೂಟರ್‌ನ್ನು 'ಆರ್ಬಿಟರ್ ವಿ2' ಎಂದು ಕರೆಯಲಾಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ರೂ.92,250 (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. ದೊಡ್ಡದಾದ 3.1 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 158 ಕಿ.ಮೀ ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ.

ಒಟ್ಟಾರೆಯಾಗಿ, ನೂತನ 'ಟಿವಿಎಸ್ ಆರ್ಬಿಟರ್ ವಿ1' ಮಾಡೆಲ್‌ನ್ನು ಪರಿಚಯಿಸಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಎಥರ್ ಹಾಗೂ ಓಲಾ ಕಂಪನಿಯ ಸ್ಕೂಟರ್‌ಗಳೊಂದಿಗೂ ಸ್ಪರ್ಧಿಸಬೇಕಾಗಿದೆ. ಹಾಗೆಯೇ ಬಜಾಜ್ & ಹೀರೋಗೆ ಸೇರಿದ ಇ-ಸ್ಕೂಟರ್‌ಗಳು ಕೂಡ ಪ್ರಬಲವಾದ ಎದುರಾಳಿಯಾಗಿವೆ. ಹೊಸ 'ಆರ್ಬಿಟರ್ ವಿ1'ನ ವಿತರಣೆಗಳು ಶುರುವಾದ ಮೇಲೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Friday, March 13, 2026, 13:50 [IST]
English summary
Tvs orbiter v1 price design colours range features and all details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+