ಬರೀ 44,990 ರೂ.ನಿಂದ ಶುರು.. ತುಂಬಾ ಚೆನ್ನಾಗಿವೆ.. ಒಂದು ಟಿವಿಎಸ್.. ಮತ್ತೊಂದು ಹೀರೋ.. ಯಾವುದು ಬೆಸ್ಟ್?

ಇತ್ತೀಚೆಗೆ ಟಿವಿಎಸ್ ಆರ್ಬಿಟರ್ ವಿ1 (Tvs Orbiter V1) ಇ-ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಯಿತು. ಇದಕ್ಕೆ ಹೀರೋ ವಿಡಾ ವಿಎಕ್ಸ್2 ಗೋ (Hero Vida VX2 Go) ಮಾಡೆಲ್ ಪ್ರಬಲವಾದ ಎದುರಾಳಿಯಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಒಂದಕ್ಕಿಂತ ಒಂದು ಚೆನ್ನಾಗಿವೆ. ಹಲವು ನವೀನತೆಗೂ ಸಾಕ್ಷಿಯಾಗಿವೆ. ನಾವಿಲ್ಲಿ.. ಇವೆರೆಡು ನೂತನ ಸ್ಕೂಟರ್‌ಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಬೆಲೆ (Price):

ಇವು ಅಗ್ಗದ ದರದಲ್ಲೂ ಲಭ್ಯವಿವೆ. 'ಟಿವಿಎಸ್ ಆರ್ಬಿಟರ್ ವಿ1' ಎಲೆಕ್ಟ್ರಿಕ್ ಸ್ಕೂಟರ್ ರೂ.84,500 ಬೆಲೆಯನ್ನು ಒಳಗೊಂಡಿದೆ. ಬಾಸ್ (ಬ್ಯಾಟರಿ-ಆಸ್-ಎ-ಸರ್ವಿಸ್) ಯೋಜನೆಯಲ್ಲಿಯೂ ಖರೀದಿಗೆ ಲಭ್ಯವಿದೆ. ಆ ಮಾಡೆಲ್ ದರವು ರೂ.49,999 ಇದ್ದು, ಗ್ರಾಹಕರು ತಿಂಗಳಿಗೆ ಇಂತಿಷ್ಟು ಚಂದಾದಾರಿಕೆಯ ಶುಲ್ಕವನ್ನು ಪಾವತಿಸಬೇಕು.

Tvs Orbiter V1 vs Hero Vida Vx2 Go Which Best Scooter Comparison

ನೂತನ 'ಹೀರೋ ವಿಡಾ ವಿಎಕ್ಸ್2 ಗೋ' ಇ-ಸ್ಕೂಟರ್ ಕನಿಷ್ಠ ರೂ.73,850 ಹಾಗೂ ಗರಿಷ್ಠ ರೂ.84,800 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 'ಬಾಸ್' ಯೋಜನೆಯಡಿ ಸಹ ಸಿಗುತ್ತದೆ. ಅದರ ದರವು ರೂ.44,990 ರಿಂದ ಶುರುವಾಗುತ್ತದೆ. 'ಆರ್ಬಿಟರ್'ಗೆ ಹೋಲಿಸಿದರೆ, 'ವಿಡಾ ವಿಎಕ್ಸ್2' ತುಸು ಅಗ್ಗವಾಗಿದೆ.

ವಿನ್ಯಾಸ (Design):

ಈ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸವನ್ನು ಒಳಗೊಂಡಿವೆ. 'ಆರ್ಬಿಟರ್ ವಿ1' ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ ಸ್ಟ್ರಿಪ್ ಮತ್ತು ಟೈಲ್‌ಲೈಟ್‌ನ್ನು ಹೊಂದಿದೆ. ಮಾರ್ಷಿಯನ್ ಕಾಪರ್ & ಸ್ಟೆಲ್ಲರ್ ಸಿಲ್ವರ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. ದೊಡ್ಡ ಗಾತ್ರದಲ್ಲೂ ಇದ್ದು, 155 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,301 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ.

Tvs Orbiter V1 vs Hero Vida Vx2 Go Which Best Scooter Comparison

'ಹೀರೋ ವಿಡಾ ವಿಎಕ್ಸ್2 ಗೋ' ಇ-ಸ್ಕೂಟರ್ ಕೂಡ ಉತ್ತಮವಾಗಿದೆ. ಎಲ್ಇಡಿ ಹೆಡ್‌ಲೈಟ್, ಡಿಆರ್‌ಎಲ್‌ಗಳು & ಟೈಲ್‌ಲೈಟ್‌ನ್ನು ಒಳಗೊಂಡಿದೆ. ಪರ್ಲ್ ರೆಡ್, ಪರ್ಲ್ ಬ್ಲ್ಯಾಕ್, ನೆಕ್ಸಸ್ ಬ್ಲೂ, ಮ್ಯಾಟ್ ವೈಟ್, ಮ್ಯಾಟ್ ಲೈಮ್ ಹಾಗೂ ಮೆಟಾಲಿಕ್ ಗ್ರೇ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 155 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,301 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

ಕಾರ್ಯಕ್ಷಮತೆ (Performance):

ಇವೆರೆಡು ಸ್ಕೂಟರ್‌ಗಳು ಬೆಲೆಗೆ ತಕ್ಕಂತೆ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿವೆ. 'ಟಿವಿಎಸ್ ಆರ್ಬಿಟರ್' 1.8 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 86 ಕಿ.ಮೀವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 68 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

'ಹೀರೋ ವಿಡಾ' ಇ-ಸ್ಕೂಟರ್, 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ಗಳನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 92 ರಿಂದ 142 ಕಿ.ಮೀವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 70 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 'ಆರ್ಬಿಟರ್'ಗಿಂತ 'ವಿಡಾ ವಿಎಕ್ಸ್2' ಸ್ವಲ್ಪ ಮಟ್ಟಿಗೆ ಬಲಿಷ್ಠವಾಗಿದೆ.

ವೈಶಿಷ್ಟ್ಯಗಳು (Features):

ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿವೆ. 'ಟಿವಿಎಸ್ ಆರ್ಬಿಟರ್ ವಿ1' ಎಲ್‌ಸಿಡಿ ಕಲರ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕನೆಕ್ಟ್ಡ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್, ಹಿಲ್-ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಆಂಟಿ ಥೆಫ್ಟ್ ಅಲರ್ಟ್‍ಗಳನ್ನು ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಡುಯಲ್-ಶಾಕ್ ಅಬ್ಸಾರ್ಬರ್ ಸಸ್ಪೆನ್ಸನ್ ಸೆಟಪ್‌ನ್ನು ಪಡೆದಿದೆ. ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

'ಹೀರೋ ವಿಡಾ ವಿಎಕ್ಸ್2 ಗೋ' ಸ್ಕೂಟರ್, ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಜಿಪಿಎಸ್ ಟ್ರ್ಯಾಕಿಂಗ್, ರಿಮೋಟ್ ಇಮೊಬಿಲೈಸೇಶನ್ ಮತ್ತು ರೇರ್ ಪಿಲಿಯನ್ ಬ್ಯಾಕ್‌ರೆಸ್ಟ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ & ಹಿಂಭಾಗ (ರೇರ್) ಮೊನೊಶಾಕ್ ಅಬ್ಸಾರ್ಬರ್ ಸಸ್ಪೆನ್ಸನ್ ಸೆಟಪ್‌ನ್ನು ಹೊಂದಿದೆ. ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

More from DriveSpark

Article Published On: Sunday, March 15, 2026, 8:34 [IST]
English summary
Tvs orbiter v1 vs hero vida vx2 go which best scooter comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+