TVS: ಸದ್ದಿಲ್ಲದೇ ಬಡವರ ಬಂಡಿಗಳ ಬೆಲೆ ಏರಿಕೆ.. ಯಾವುದಕ್ಕೆ ಎಷ್ಟು?

ಟಿವಿಎಸ್ ಮೋಟಾರ್ (TVS Motor) ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿ ಎಂದೇ ಹೆಸರುವಾಸಿಯಾಗಿದೆ. ದೇಶಾದ್ಯಂತ ಕಂಪನಿಯ ಬೈಕ್ ಹಾಗೂ ಸ್ಕೂಟರ್‌ಗಳಿಗೆ ವ್ಯಾಪಕವಾದ ಬೇಡಿಕೆಯಿದ್ದು, ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ ಎಕ್ಸ್ಎಲ್ 100, ರೇಡಿಯನ್ ಹಾಗೂ ಸ್ಟಾರ್ ಸಿಟಿ ಪ್ಲಸ್ ಮಾಡೆಲ್‌ಗಳ ಬೆಲೆಯನ್ನು ಪರಿಷ್ಕರಿಸಿದ್ದು, ಸ್ವಲ್ಪ ಮಟ್ಟಿಗೆ ಹೆಚ್ಚಿಸಿದೆ.

ಟಿವಿಎಸ್ ಎಕ್ಸ್ಎಲ್ 100 (TVS XL 100):

ಇದೊಂದು ಜಗಮೆಚ್ಚಿದ ಮೊಪೆಡ್ ಆಗಿದೆ. ನಗರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ, ಗ್ರಾಮೀಣ ಪ್ರದೇಶದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ವೇರಿಯೆಂಟ್‌ಗಳಿಗೆ ಅನುಗುಣವಾಗಿ ರೂ.350 ರಿಂದ ರೂ.400 ವರೆಗೆ ಬೆಲೆ ಏರಿಕೆಗೆ ಸಾಕ್ಷಿಯಾಗಿದೆ. ಕನಿಷ್ಠ ರೂ.44,550 ಹಾಗೂ ಗರಿಷ್ಠ ರೂ.60,450 (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Tvs Xl 100 Radeon And Star City Plus Price Hike Details

ಈ ಮೊಪೆಡ್ ಹೆವಿ ಡ್ಯೂಟಿ, ಹೆವಿಡ್ಯೂಟಿ ಐ-ಟಚ್‌ಸ್ಟಾರ್ಟ್, ಹೆವಿಡ್ಯೂಟಿ ಐ-ಟಚ್‌ಸ್ಟಾರ್ಟ್ ವಿನ್ ಎಡಿಷನ್, ಕಂಫರ್ಟ್ ಐ-ಟಚ್‌ಸ್ಟಾರ್ಟ್ ಮತ್ತು ಹೆಚ್‌ಡಿ ಅಲಾಯ್ ಎಂಬ ವೇರಿಯೆಂಟ್‌ ಆಯ್ಕೆಯಲ್ಲಿಯೂ ಸಿಗುತ್ತದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಮಿನರಲ್ ಪರ್ಪಲ್, ಡಿಲೈಟ್ ಬ್ಲೂ, ಬೀವರ್ ಬ್ರೌನ್ ಮತ್ತು ಲಸ್ಟರ್ ಗೋಲ್ಡ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 145 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ & 1228 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

ನೂತನ 'ಎಕ್ಸ್ಎಲ್ 100' ಉತ್ತಮವಾದ ಪವರ್‌ಟ್ರೇನ್‌ನ್ನು ಹೊಂದಿದೆ. 99.7-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 60 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಲೆಂಟ್ ಸ್ಟಾರ್ಟರ್ ಹಾಗೂ ಮೊಬೈಲ್ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. 65 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

Tvs Xl 100 Radeon And Star City Plus Price Hike Details

ಟಿವಿಎಸ್ ರೇಡಿಯನ್ (Tvs Radeon):

ಇದು ಕಚೇರಿಗೆ ತೆರಳುವವರಿಗೆ ಅತ್ಯುತ್ತಮವಾದ ಬೈಕ್ ಆಗಿ ಹೊರಹೊಮ್ಮಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ಈ ಬೈಕ್‌ನ ಎಲ್ಲ ವೇರಿಯೆಂಟ್‌ಗಳ ದರವನ್ನು ರೂ.300 ಏರಿಕೆ ಮಾಡಲಾಗಿದ್ದು, ರೂ.55,400 ರಿಂದ ರೂ.78,200 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ಹೊಚ್ಚ ಹೊಸ 'ರೇಡಿಯನ್' ಬ್ಲ್ಯಾಕ್ ಎಡಿಷನ್, ಬೇಸ್ ಎಡಿಷನ್, ಡಿಜಿಟಲ್ ಕ್ಲಸ್ಟರ್ ಡ್ರಮ್ ಹಾಗೂ ಡಿಜಿಟಲ್ ಕ್ಲಸ್ಟರ್ ಡಿಸ್ಕ್ ಎಂಬ ವೇರಿಯೆಂಟ್‌ಗಳೊಂದಿಗೂ ಲಭ್ಯವಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಸ್ಟಾರ್‌ಲೈಟ್ ಬ್ಲ್ಯೂ, ಮೆಟಲ್ ಬ್ಲ್ಯಾಕ್, ರಾಯಲ್ ಪರ್ಪಲ್ ಮತ್ತು ಟೈಟಾನಿಯಂ ಗ್ರೇ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 180 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1265 ಮಿ.ಮೀ ವೀಲ್‌ಬೇಸ್‌ನ್ನು ತನ್ನದಾಗಿಸಿಕೊಂಡಿದೆ.

Tvs Xl 100 Radeon And Star City Plus Price Hike Details

ಈ ಮೋಟಾರ್‌ಸೈಕಲ್‌ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 109.7-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 60 ರಿಂದ 70 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್/ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ (TVS Star City Plus):

ಇದನ್ನು ಗ್ರಾಹಕರು ಮೆಚ್ಚಿಕೊಂಡಿದ್ದು, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಉತ್ತಮ ಇಂಧನ ದಕ್ಷತೆಯಿಂದಲೂ ಮನೆ ಮಾತಾಗಿದೆ. ಪಟ್ಟಣ ಹಾಗೂ ಹಳ್ಳಿಗಾಡಿನ ಪ್ರದೇಶಗಳಲ್ಲಿಯೂ ಸುಲಭವಾಗಿ ಬಳಕೆ ಮಾಡಬಹುದು. ಈ ಬೈಕ್‌ನ ವೇರಿಯೆಂಟ್‌ಗಳ ಬೆಲೆಯೂ ರೂ.300 ಅಧಿಕಗೊಂಡಿದೆ. ಕನಿಷ್ಠ ರೂ.72,500 ಮತ್ತು ಗರಿಷ್ಠ ರೂ.75,200 (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ನೂತನ 'ಸ್ಟಾರ್ ಸಿಟಿ ಪ್ಲಸ್' ಡ್ರಮ್ ಮತ್ತು ಡಿಸ್ಕ್ ಎಂಬ 2 ವೇರಿಯೆಂಟ್‌ಗಳೊಂದಿಗೂ ಸಿಗುತ್ತದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಬ್ಲ್ಯಾಕ್ ರೆಡ್, ಬ್ಲ್ಯಾಕ್ ಬ್ಲ್ಯೂ, ಬ್ಲ್ಯೂ ಸಿಲ್ವರ್, ಗ್ರೇ ಬ್ಲ್ಯಾಕ್ ಮತ್ತು ಬ್ಲ್ಯಾಕ್ ಗ್ರೀನ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. 172 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,260 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

ಈ ಮೋಟಾರ್‌ಸೈಕಲ್‌ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 109.7-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 83 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಸವಾರರ ರಕ್ಷಣೆಗಾಗಿ ಡ್ರಮ್/ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

More from DriveSpark

Article Published On: Tuesday, February 3, 2026, 16:32 [IST]
English summary
Tvs xl 100 radeon and star city plus price hike details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+