Yamaha: ಈಗಷ್ಟೇ ಯಮಹಾ EV ಬಿಡುಗಡೆ: ಭಿನ್ನವಾಗಿದೆ... ಖರ್ಚಿಲ್ಲದೆ ನಿತ್ಯ 169-ಕಿ.ಮೀ ಓಡಬಲ್ಲದು!

ಜಾಗತಿಕವಾಗಿ ಹೆಸರು ಮಾಡಿರುವ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಯಮಹಾ (Yamaha), ಇಂದು ತನ್ನ 'EC-06' ಎಂಬ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಆಧುನಿಕ, ಸ್ಪೋರ್ಟಿ ಮತ್ತು ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಬಯಸುವ ಸವಾರರನ್ನು ಗಮನದಲ್ಲಿಟ್ಟುಕೊಂಡು ಹೊಸ ಯಮಹಾ EC-06 (Yamaha EC-06) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಿರ್ಮಿಸಲಾಗಿದೆ. ನೀಲಿ ಬಿಳಿ ಬಣ್ಣದಲ್ಲಿ ಲಭ್ಯವಿರುವ ಈ ಮಾಡಲ್‌ನ್ನು ಯಮಹಾದ ಪ್ರೀಮಿಯಂ ಬ್ಲೂ ಸ್ಕ್ವೇರ್ ಶೋರೂಂಗಳ ಮೂಲಕ ಆಯ್ದ ನಗರಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಯಮಹಾ ತಿಳಿಸಿದೆ.

ಬೆಲೆ ವಿಷಯಕ್ಕೆ ಬಂದರೆ ರೂ. 1,67,600 (ಎಕ್ಸ್-ಶೋರೂಂ)ಗೆ ಖರೀದಿಗೆ ಸಿಗಲಿದೆ. ಯಮಹಾ ಕಂಪನಿಯು ಈ ಸ್ಕೂಟರ್ ಅನ್ನು ಮಾರುಕಟ್ಟೆಯಲ್ಲಿರುವ ಇತರ ಇವಿ ಸ್ಕೂಟರ್‌ಗಳಿಗಿಂತ ಭಿನ್ನವಾಗಿ ಸ್ಪೋರ್ಟಿ ಬಾಕ್ಸಿ ಡಿಸೈನ್‌ನಲ್ಲಿ ನಿರ್ಮಿಸಿದೆ. ಅಂದಹಾಗೆ ಯಮಹಾ ಅಡಿಯಲ್ಲಿ ಬರುವ ಪ್ರಮುಖ ಬ್ರಾಂಡ್‌ ಆಗಿರುವ ರಿವರ್‌ ಇಂಡೀ ಮೂಲಕ ಈ ಸ್ಕೂಟರ್ ಹೊರಬಂದಿದೆ. ಹಾಗಾಗಿಯೇ ಡಿಸೈನ್ ವಿಷಯದಲ್ಲಿ ಇದು ಭಾರತೀಯ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಭಿನ್ನವಾಗಿ ಕಾಣುತ್ತದೆ.

yamaha-ec-06-electric-scooter-price-features-battery-range

ಜಾಗತಿಕ ದೃಷ್ಟಿಕೋನದೊಂದಿಗೆ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಯಮಹಾ EC-06 ಸ್ಕೂಟರ್, 4kWh ಸ್ಥಿರ ಬ್ಯಾಟರಿಯೊಂದಿಗೆ ಜೋಡಿಸಲಾದ ದೃಢವಾದ IPMSM (ಇಂಟೀರಿಯರ್ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್) ಹೊಂದಿದೆ. ಈ ಪವರ್‌ಫುಲ್ ಮೋಟಾರ್ 79 ಕಿ.ಮೀ ಟಾಪ್ ಸ್ಪೀಡ್ ತಲುಪಲು ಸಹಕರಿಸುತ್ತದೆ, ಹಾಗೆಯೇ ಈ ಮೋಟಾರ್‌ 26 Nm ಗರಿಷ್ಠ ಟಾರ್ಕ್ ಮತ್ತು 6.7 kW ಪವರ್ ಹೊರಹಾಕುತ್ತದೆ.

ಇನ್ನು ರೇಂಜ್ ವಿಷಯಕ್ಕೆ ಬಂದರೆ, ಹೊಸ ಯಮಹಾ EC-06 ಎಲೆಕ್ಟ್ರಿಕ್ ಸ್ಕೂಟರ್ ತನ್ನ ದೊಡ್ಡ 4kWh ಬ್ಯಾಟರಿಯನ್ನು ಹೊಂದಿದ್ದು, ಇದನ್ನು ಒಮ್ಮೆ ಚಾರ್ಜ್ ಮಾಡಿ ಬರೋಬ್ಬರಿ 169-ಕಿ.ಮೀ ಓಡಿಸಬಹುದು. ಕಂಪನಿಯು ಗ್ರಾಹಕರ ವಿಶ್ವಾಸಾರ್ಹತೆಗಾಗಿ ಬ್ಯಾಟರಿ ಮೇಲೆ 3-ವರ್ಷ ಅಥವಾ 30,000 ಕಿಮೀ ವಾರೆಂಟಿ ಕೂಡ ನೀಡುತ್ತಿದೆ. ಪ್ರಮಾಣಿತ ಹೋಮ್ ಪ್ಲಗ್-ಇನ್ ಚಾರ್ಜಿಂಗ್ ಆಯ್ಕೆಯನ್ನು ನೀಡಲಾಗಿದೆ. ಪೂರ್ಣ ಚಾರ್ಜ್ ಸರಿಸುಮಾರು ಎಂಟು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

yamaha-ec-06-electric-scooter-price-features-battery-range

ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಭಿನ್ನವಾಗಿ ಹೊಸ EV ಸ್ಕೂಟರ್ "ಯಮಹಾ ಮೋಟಾರ್ ಕನೆಕ್ಟ್ R" ಅಪ್ಲಿಕೇಶನ್ ಪಡೆದುಕೊಂಡಿದೆ, ಇದರ ಮೂಲಕ ಚಾಲಕರು ರಿಯಲ್-ಟೈಮ್ ಡೇಟಾ ಮತ್ತು ಸ್ಮಾರ್ಟ್ ಫೀಚರ್‌ಗಳನ್ನು ಬಳಸಬಹುದು. ಜೊತೆಗೆ ಇದರ ಕಲರ್ LCD ಡಿಸ್ಪ್ಲೇನಲ್ಲಿ ಸ್ಪೀಡ್, ಬ್ಯಾಟರಿ ಸ್ಥಿತಿ, ರೈಡ್ ಮೋಡ್‌ಗಳು ಮತ್ತು ಕನೆಕ್ಟೆಡ್ ಫೀಚರ್‌ಗಳ ಕುರಿತು ರಿಯಲ್-ಟೈಮ್ ಮಾಹಿತಿ ಪಡೆಯಬಹುದು.

ಸ್ಕೂಟರ್‌ನಲ್ಲಿ ಯಾವುದೇ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗೆ ಕಮ್ಮಿಯಿಲ್ಲದಂತೆ 24.5 ಲೀಟರ್‌ಗಳ ಸೀಟಿನ ಕೆಳಗೆ ಶೇಖರಣಾ ಜಾಗವನ್ನು (ಅಂಡರ್‌ ಸೀಟ್ ಸ್ಟೋರೇಜ್) ನೀಡಲಾಗಿದೆ. ಇದರಲ್ಲಿ ಬೈಕ್ ಸವಾರರು ಹೆಲ್ಮೆಟ್‌ಗಳು, ಬ್ಯಾಗ್‌ಗಳು ಅಥವಾ ದೈನಂದಿನ ಅಗತ್ಯ ವಸ್ತುಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದ್ದಾರೆ. ಹಾಗೆಯೇ ವೈವಿಧ್ಯಮಯ ಸವಾರಿ ಆದ್ಯತೆಗಳಿಗೆ ಸರಿಹೊಂದುವಂತೆ, ಇಕೋ, ಸ್ಟ್ಯಾಂಡರ್ಡ್ ಮತ್ತು ಪವರ್ ಎಂಬ ರೈಡ್‌ ಮೋಡ್‌ಗಳನ್ನು ನೀಡಲಾಗಿದೆ.

yamaha-ec-06-electric-scooter-price-features-battery-range

ಜೊತೆಗೆ ಅನುಕೂಲಕರವಾದ ರಿವರ್ಸ್ ಮೋಡ್ ಕೂಡ ನೀಡಲಾಗಿದ್ದು, ಬಿಗಿಯಾದ ಸ್ಥಳಗಳಲ್ಲಿ ಸುಲಭವಾಗಿ ಹಿಂತೆಗೆಯಬಹುದಾಗಿದೆ. ಇದರ ಹೈಡ್ರಾಲಿಕ್ ಡ್ಯಾಂಪರ್‌ಗಳು ಮತ್ತು ಹಿಂಭಾಗದ ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಷನ್ ಹಾಗೂ ಟೆಲಿಸ್ಕೋಪಿಕ್ ಮುಂಭಾಗದ ಸಸ್ಪೆನ್ಷನ್ ನಗರ ರಸ್ತೆಗಳಲ್ಲಿ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಅತ್ಯುತ್ತಮ ಸುಗಮ ಸವಾರಿಯನ್ನು ನೀಡುತ್ತವೆ.

ಮುಂಭಾಗದಲ್ಲಿ ತನ್ನದೇ ಆದ ವಿಶಿಷ್ಟ ವಿನ್ಯಾಸದ LED ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳ ಸೆಟಪ್ ನೀಡಲಾಗಿದೆ. ಇದು ರಾತ್ರಿ ಸವಾರಿ ಮತ್ತು ಕಡಿಮೆ - ಬೆಳಕಿನ ಪರಿಸ್ಥಿತಿಗಳಲ್ಲಿ ಗೋಚರತೆಯನ್ನು ಸುಧಾರಿಸುವುದಲ್ಲದೆ ಸ್ಕೂಟರ್‌ನ ವಿನ್ಯಾಸಕ್ಕೆ ಸ್ಪೋರ್ಟಿ ಲುಕ್ ನೀಡುತ್ತದೆ. 200mm ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು ಮತ್ತು ಕಾಂಬಿ ಬ್ರೇಕ್ ಸಿಸ್ಟಮ್ (CBS) ಹೊಂದಿರುವ EC-06 ನಿಖರವಾದ ಬ್ರೇಕಿಂಗ್ ಮತ್ತು ವರ್ಧಿತ ಸ್ಥಿರತೆಯನ್ನು ನೀಡುತ್ತದೆ.

More from DriveSpark

Article Published On: Monday, February 2, 2026, 14:51 [IST]
English summary
Yamaha ec 06 electric scooter price features battery range
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+