Yamaha: ದೇಶದ ಮೊದಲ ಯಮಹಾ ಇ-ಸ್ಕೂಟರ್ ಕುರಿತ ಪ್ರಮುಖಾಂಶಗಳಿವು.. 169 Km ರೇಂಜ್, ರೂ.1.67 ಲಕ್ಷ!

ಈಚೆಗೆ ಯಮಹಾ ಇಸಿ-06 (Yamaha EC-06) ಇ-ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಈ ಸ್ಕೂಟರ್ ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ನೀವು ದಿನಬಳಕೆಗಾಗಿ ನೂತನ ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ 'ಯಮಹಾ ಇಸಿ-06' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ.. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಾದ ಪ್ರಮುಖಾಂಶಗಳನ್ನು ತಿಳಿಯೋಣ.

ಬೆಲೆ (Price):

ಹೊಚ್ಚ ಹೊಸ 'ಯಮಹಾ ಇಸಿ-06' ಇ-ಸ್ಕೂಟರ್ ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದೆ. ಎಲ್ಲ ವರ್ಗದ ಜನರು ಸುಲಭವಾಗಿ ಮನೆಗೆ ತರಲು ಸಾಧ್ಯವಾಗಲಿದ್ದು, ರೂ.1.67 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅದೇ ರೀತಿಯಲ್ಲಿ ರೂ.1.76 ಆನ್-ರೋಡ್ ಬೆಲೆಯಾಗಿದೆ. ರೂ.50,000 ಡೌನ್-ಪೇಮೆಂಟ್ ಕಟ್ಟಿ ಕೊಂಡುಕೊಂಡರೆ, ರೂ.1.26 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 10% ಬಡ್ಡಿ ದರದಲ್ಲಿ 3 ವರ್ಷದ ಅವಧಿಗೆ ಮಾಸಿಕ ರೂ.4,500 ಇಎಂಐ ಕಟ್ಟಬೇಕು.

Yamaha EC-06 Electric Scooter Top Things You Should Must Know

ವಿನ್ಯಾಸ & ಬಣ್ಣಗಳು (Design & Colours):

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ ಹೊಂದಿದ್ದು, ಪ್ರತಿಯೊಬ್ಬರನ್ನು ತನ್ನತ್ತ ಸೆಳೆಯಬಲ್ಲದು. ರೆಕ್ಟ್ಯಾಂಗುಲರ್ ಹೆಡ್‌ಲ್ಯಾಂಪ್, ಫ್ಲಾಟ್ ಫುಟ್‌ಬೋರ್ಡ್ ಮತ್ತು ಸಿಂಗಲ್-ಪೀಸ್ ಸೀಟ್‌ನ್ನು ಒಳಗೊಂಡಿದೆ. ಬ್ಲ್ಯೂಯಿಶ್ ವೈಟ್ (Bluish White) ಎಂಬ ಒಂದೇ ಬಣ್ಣದ ಆಯ್ಕೆಯಲ್ಲಿಯೂ ದೊರೆಯುತ್ತದೆ.

ಸುತ್ತಳತೆ (Dimension):

ಈ ಸ್ಕೂಟರ್ ಸಾಕಷ್ಟು ವಿಶಾಲವಾಗಿದೆ. 1,995 ಮಿ.ಮೀ ಉದ್ದ, 765 ಮಿ.ಮೀ ಅಗಲ ಹಾಗೂ 1,153 ಮಿ.ಮೀ ಎತ್ತರವಿದೆ. 145 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,354 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 132 ಕೆಜಿ ತೂಕವಿದೆ. 24.5 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್‌ನ್ನು ಪಡೆದಿದೆ.

ಕಾರ್ಯಕ್ಷಮತೆ (Performance):

ನೂತನ 'ಯಮಹಾ ಇಸಿ-06' ಇ-ಸ್ಕೂಟರ್ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 169 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 79 ಕೆಎಂಪಿಹೆಚ್ ಸ್ಪೀಡ್‌ನ್ನು ಒಳಗೊಂಡಿದೆ. ಇದರಲ್ಲಿ ಬಳಸಿರುವ ಎಲೆಕ್ಟ್ರಿಕ್ ಮೋಟಾರ್, 6.7 ಕೆಡಬ್ಲ್ಯೂ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 26 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ವೈಶಿಷ್ಟ್ಯಗಳು (Features):

ಇದು ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್‌, ರಿವರ್ಸ್ ಅಸಿಸ್ಟ್ ಮತ್ತು ಯಮಹಾ ಮೋಟಾರ್ ಕನೆಕ್ಟ್ ಆರ್ ಅಪ್ಲಿಕೇಶನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಇಕೋ, ಸ್ಟ್ಯಾಂಡರ್ಡ್ ಮತ್ತು ಪವರ್ ಎಂಬ 3 ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಸೀಟ್ ಎತ್ತರವು 780 ಮಿ.ಮೀ ಇದೆ. ಈ ಸ್ಕೂಟರ್‌ನಲ್ಲಿರುವ ಬ್ಯಾಟರಿಯು 8 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗಿ ಬಿಡುತ್ತದೆ.

ಸಸ್ಪೆನ್ಷನ್ ಸೆಟಪ್ & ಬೇಕಿಂಗ್ ಸಿಸ್ಟಮ್ (Suspension Setup & Braking System):

ಹೊಸ 'ಯಮಹಾ ಇಸಿ-06' ಎಲೆಕ್ಟ್ರಿಕ್ ಸ್ಕೂಟರ್ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಸವಾರರ ರಕ್ಷಣೆಗಾಗಿ ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಮತ್ತು ಹಿಂದೆ (ರೇರ್) ಹೈಡ್ರಾಲಿಕ್ ಡ್ಯಾಂಪರ್‌ಗಳೊಂದಿಗೆ ಕಾಯಿಲ್-ಸ್ಪ್ರಿಂಗ್‌ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಸಿಬಿಎಸ್ (ಕಾಂಬಿ ಬ್ರೇಕ್ ಸಿಸ್ಟಮ್) & ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ಪ್ರತಿಸ್ಪರ್ಧಿ ಸ್ಕೂಟರ್‌ಗಳು (Rival Scooters):

ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಎಥರ್ 450ಎಕ್ಸ್, ಓಲಾ ಎಸ್1 ಪ್ರೊ, ಟಿವಿಎಸ್ ಐಕ್ಯೂಬ್ ಎಸ್‌ಟಿ, ಬಜಾಜ್ ಚೇತಕ್, ಹೀರೋ ವಿಡಾ ವಿ1 ಪ್ರೊ, ರಿವರ್ ಇಂಡೀ, ಟಿವಿಎಸ್ ಆರ್ಬಿಟರ್, ಹೋಂಡಾ ಆಕ್ಟಿವಾ ಇ, ಸುಜುಕಿ ಇ ಆಕ್ಸೆಸ್ ಹಾಗೂ ಎಥರ್ ರಿಜ್ಟಾ ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Wednesday, February 4, 2026, 8:32 [IST]
English summary
Yamaha ec 06 electric scooter top things you should must know
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+