ಹೊಸ ಯಮಹಾ ಇಸಿ-06 vs ಎಥರ್ ರಿಜ್ಟಾ.. ಬೆಲೆಯೂ ಕಮ್ಮಿ, ನಿನ್ನೆ ಮಾರಾಟಕ್ಕೆ.. ಯಾವುದು ಬೆಸ್ಟ್, ನೀವೇ ಹೇಳಿ?
ನಿನ್ನೆಯಷ್ಟೆ ಹೊಚ್ಚ ಹೊಸ ಯಮಹಾ ಇಸಿ-06 (Yamaha EC-06) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಂಡಿದೆ. ಇದಕ್ಕೆ ಎಥರ್ ರಿಜ್ಟಾ (Ather Rizta) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಈ ಸ್ಕೂಟರ್‌ಗಳು ಒಂದಕ್ಕಿಂತ ಒಂದು ಚೆನ್ನಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿವೆ. ಅದಕ್ಕೆ ತಕ್ಕಂತೆ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿವೆ. ನಾವಿಲ್ಲಿ ಇವೆರೆಡು ಸ್ಕೂಟರ್‌ಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಬೆಲೆ (Price):
ನೂತನ 'ಯಮಹಾ ಇಸಿ-06' ರೂ.1.67 ಲಕ್ಷ ದರವನ್ನು ಪಡೆದಿದೆ. ಅದೇ ರೀತಿಯಲ್ಲಿ 'ಎಥರ್ ರಿಜ್ಟಾ' ರೂ.1.05 ಲಕ್ಷದಿಂದ ರೂ.1.30 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ದರದ ವಿಚಾರದಲ್ಲಿ 'ಯಮಹಾ ಇಸಿ-06'ಗಿಂತ 'ಎಥರ್ ರಿಜ್ಟಾ' ಅಗ್ಗವಾಗಿದೆ ಎಂದು ಹೇಳಬಹುದು.

ವಿನ್ಯಾಸ (Design):
ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಅದ್ಭುತವಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಮನ ಸೆಳೆಯುವಂತಿವೆ. 'ಯಮಹಾ ಇಸಿ-06' ಎಲೆಕ್ಟ್ರಿಕ್ ಸ್ಕೂಟರ್ ರೆಕ್ಟ್ಯಾಂಗುಲರ್ ಹೆಡ್‌ಲ್ಯಾಂಪ್, ಫ್ಲಾಟ್ ಫುಟ್‌ಬೋರ್ಡ್ ಮತ್ತು ಸಿಂಗಲ್-ಪೀಸ್ ಸೀಟ್‌ನ್ನು ಒಳಗೊಂಡಿದೆ. ಕೇವಲ 'ಬ್ಲ್ಯೂಯಿಶ್ ವೈಟ್' ಎಂಬ ಬಣ್ಣದ ಆಯ್ಕೆಯಲ್ಲಿ ಮಾತ್ರ ಸಿಗುತ್ತದೆ.
'ಎಥರ್ ರಿಜ್ಟಾ' ಇ-ಸ್ಕೂಟರ್ ಬಾರ್-ಟೈಪ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟರ್ನ್ ಸಿಗ್ನಲ್ ಲೈಟ್‌ಗಳು ಹಾಗೂ ಎಲ್ಇಡಿ ಟೈಲ್‌ಲೈಟ್‌ನ್ನು ಹೊಂದಿದೆ. ಡೆಕ್ಕನ್ ಗ್ರೇ, ಸಿಯಾಚಿನ್ ವೈಟ್, ಪ್ಯಾಂಗಾಂಗ್ ಬ್ಲೂ ಮತ್ತು ಟೆರಾಕೋಟಾ ರೆಡ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ದೊರೆಯುತ್ತದೆ.

ಕಾರ್ಯಕ್ಷಮತೆ (Performance):
ಇವೆರೆಡು ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿವೆ. 'ಯಮಹಾ ಇಸಿ-06' ಸ್ಕೂಟರ್ 4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 169 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 79 ಕೆಎಂಪಿಹೆಚ್ ಸ್ಪೀಡ್‌ನ್ನು ಒಳಗೊಂಡಿದೆ. ಈ ಸ್ಕೂಟರ್‌ನಲ್ಲಿರುವ ಬ್ಯಾಟರಿಯು ಮನೆಯ ವಿದ್ಯುತ್ ಬಳಕೆಯಲ್ಲಿ 8 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ.
'ಎಥರ್ ರಿಜ್ಟಾ' ಇ-ಸ್ಕೂಟರ್ 2.9 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.7 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ಗಳನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 123 ರಿಂದ 160 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಇದರಲ್ಲಿರುವ ಬ್ಯಾಟರಿಯು 8 ಗಂಟೆ 30 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಿ ಬಿಡುತ್ತದೆ.
ವೈಶಿಷ್ಟ್ಯಗಳು (Features):
ಈ ಸ್ಕೂಟರ್‌ಗಳು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿವೆ. 'ಯಮಹಾ ಇಸಿ-06' ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ರಿವರ್ಸ್ ಅಸಿಸ್ಟ್ ಹಾಗೂ ಯಮಹಾ ಮೋಟಾರ್ ಕನೆಕ್ಟ್ ಆರ್ ಅಪ್ಲಿಕೇಶನ್‌ಗಳನ್ನು ಹೊಂದಿದೆ. 24.5-ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್ ಇದೆ. ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಮತ್ತು ಹಿಂಭಾಗ (ರೇರ್) ಹೈಡ್ರಾಲಿಕ್ ಡ್ಯಾಂಪರ್‌ಗಳೊಂದಿಗೆ ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಸಿಬಿಎಸ್ (ಕಾಂಬಿ ಬ್ರೇಕ್ ಸಿಸ್ಟಮ್) ಹಾಗೂ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.
'ಎಥರ್ ರಿಜ್ಟಾ' ಇ-ಸ್ಕೂಟರ್ 7-ಇಂಚಿನ ಎಲ್‌ಸಿಡಿ ಸ್ಕ್ರೀನ್, ಮಲ್ಟಿ ಪರ್ಪಸ್ ಚಾರ್ಜರ್ ಹಾಗೂ ಪಿಲಿಯನ್ ಬ್ಯಾಕ್‌ರೆಸ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. 34-ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್‌ನ್ನು ಒಳಗೊಂಡಿದೆ. ಸುರಕ್ಷತೆಗೂ ಹೆಸರುವಾಸಿಯಾಗಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.


Click it and Unblock the Notifications








