ಯಾಮಾಹಾ R2 ಬೈಕ್ ಬುಕಿಂಗ್ ಶುರು: ಬೆಲೆ ಎಷ್ಟು? ಫೀಚರ್ಸ್ ಹೇಗಿದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

ಯಾಮಾಹಾ ಪ್ರಿಯರು ಕಾತರದಿಂದ ಕಾಯುತ್ತಿದ್ದ ಹೊಸ 'ಆರ್2' (R2) ಬೈಕ್‌ನ ಪ್ರಿ-ಬುಕಿಂಗ್ ಭಾರತದಲ್ಲಿ ಅಧಿಕೃತವಾಗಿ ಶುರುವಾಗಿದೆ. ಯಾಮಾಹಾ ವೆಬ್‌ಸೈಟ್ ಅಥವಾ ಶೋರೂಮ್‌ಗಳಿಗೆ ಭೇಟಿ ನೀಡಿ 10,000 ರೂಪಾಯಿ ಟೋಕನ್ ಮೊತ್ತ ನೀಡಿ ಬೈಕ್ ಕಾಯ್ದಿರಿಸಿಕೊಳ್ಳಬಹುದು. ಈ ಶಕ್ತಿಶಾಲಿ ಬೈಕ್ 2026ರ ಆಗಸ್ಟ್ 27ರಂದು ಅಧಿಕೃತವಾಗಿ ರಸ್ತೆಗಿಳಿಯಲಿದೆ. ವಿಶೇಷ ಎಂದರೆ, ಈ ಬುಕಿಂಗ್ ಅಮೌಂಟ್ ಪೂರ್ತಿ ರಿಫಂಡಬಲ್ ಆಗಿದ್ದು, ಸೆಪ್ಟೆಂಬರ್ 5, 2026ರ ನಂತರ ರೀಫಂಡ್ ಪ್ರಕ್ರಿಯೆ ಆರಂಭವಾಗಲಿದೆ. ಆರಂಭದಲ್ಲೇ ಬುಕ್ ಮಾಡುವ ಗ್ರಾಹಕರಿಗೆ ವಿತರಣೆಯಲ್ಲಿ ಆದ್ಯತೆ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ. 'We R On Our Way' ಶೀರ್ಷಿಕೆ ಮತ್ತು R-ಸೀರೀಸ್ ಲೋಗೋ ಜೊತೆಗೆ ಯಾಮಾಹಾ ಬಿಡುಗಡೆ ಮಾಡಿರುವ ಟೀಸರ್ ಈಗಾಗಲೇ ಬೈಕ್ ಪ್ರಿಯರ ಗಮನ ಸೆಳೆದಿದೆ.

ಬೆಲೆಯ ವಿಷಯಕ್ಕೆ ಬಂದರೆ, ಯಾಮಾಹಾ ಆರ್2 ಎಕ್ಸ್-ಶೋರೂಮ್ ಬೆಲೆ ಸುಮಾರು ₹2.0 ಲಕ್ಷದಿಂದ ₹2.2 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಕೆಲ ವರದಿಗಳ ಪ್ರಕಾರ ಇದು ₹2.5 ಲಕ್ಷದವರೆಗೆ ತಲುಪುವ ಸಾಧ್ಯತೆಯಿದೆ. ಇದೇ ವಿಭಾಗದ ಇತರ ಬೈಕ್‌ಗಳ ಆನ್‌-ರೋಡ್ ಬೆಲೆಯನ್ನು ಗಮನಿಸಿದರೆ, ಮೆಟ್ರೋ ನಗರಗಳಲ್ಲಿ ಇದು ಸುಮಾರು ₹2.4 ಲಕ್ಷದಿಂದ ₹2.9 ಲಕ್ಷದ ಆಜುಬಾಜಿನಲ್ಲಿ ಸಿಗಬಹುದು. ಆಯಾ ನಗರಗಳ ತೆರಿಗೆ ಮತ್ತು ಇನ್ಶೂರೆನ್ಸ್ ಆಧಾರದ ಮೇಲೆ ಬೆಲೆಯಲ್ಲಿ ವ್ಯತ್ಯಾಸವಿರಲಿದ್ದು, ಇವು ಕೇವಲ ಅಂದಾಜು ದರಗಳಾಗಿವೆ. ಬೈಕ್ ಲಾಂಚ್ ದಿನದಂದೇ ಕಂಪನಿ ಅಧಿಕೃತ ಬೆಲೆಯನ್ನು ಘೋಷಿಸಲಿದೆ.

Yamaha R2 Booking Open: Expected Price, Features, and Launch Date 2026

ಯಾಮಾಹಾ R2 ಬೆಲೆ, ವೈಶಿಷ್ಟ್ಯಗಳು ಮತ್ತು ಪ್ರತಿಸ್ಪರ್ಧಿಗಳು

ಕಂಪನಿ ಇನ್ನು ಸಹ ಅಧಿಕೃತವಾಗಿ ವೈಶಿಷ್ಟ್ಯಗಳನ್ನು ಬಿಟ್ಟುಕೊಟ್ಟಿಲ್ಲ. ಆದಾಗ್ಯೂ, ಇದರಲ್ಲಿ 200–220cc ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್, 6-ಸ್ಪೀಡ್ ಗೇರ್‌ಬಾಕ್ಸ್ ಹಾಗೂ ಸುಮಾರು 25 horsepower ಪವರ್ ನೀಡುವ ಸೌಲಭ್ಯವಿರಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಸಿದ್ಧ R15 ಮಾದರಿಯಲ್ಲಿರುವ ವೆರಿಯೇಬಲ್ ವಾಲ್ವ್ ಆಕ್ಚುಯೇಷನ್ (VVA) ತಂತ್ರಜ್ಞಾನ ಇಲ್ಲೂ ಮುಂದುವರಿಯುವ ಸಾಧ್ಯತೆಯಿದೆ. ಜೊತೆಗೆ ಬ್ಲೂಟೂತ್ ಬೆಂಬಲಿಸುವ TFT ಕನ್ಸೋಲ್, ಡ್ಯುಯಲ್-ಚಾನೆಲ್ ABS, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಕ್ವಿಕ್‌ಶಿಫ್ಟರ್‌ನಂತಹ ಪ್ರೀಮಿಯಂ ಫೀಚರ್‌ಗಳನ್ನು ನೀಡಬಹುದು. ಆಗಸ್ಟ್ 27 ರಂದು ಲಾಂಚ್ ಆಗುವವರೆಗೂ ಇವೆಲ್ಲವೂ ಸದ್ಯಕ್ಕೆ ನಿರೀಕ್ಷಿತ ವೈಶಿಷ್ಟ್ಯಗಳಷ್ಟೇ.

ಪ್ರತಿಸ್ಪರ್ಧಿ ಬೈಕ್ ಎಕ್ಸ್-ಶೋರೂಮ್ ಬೆಲೆ (ದೆಹಲಿ) ಪವರ್
KTM RC 200 ₹2,14,721 25 PS
Bajaj Pulsar RS200 ₹1,80,528 24.5 PS
Suzuki Gixxer SF 250 ₹1,92,768 26.1 bhp
Yamaha R15 V4 ₹1,73,050 18.4 PS

ಪ್ರತಿಸ್ಪರ್ಧಿ ಬೈಕ್‌ಗಳ ಬೆಲೆ ಮತ್ತು ಪವರ್ ವಿವರಗಳನ್ನು ಆಯಾ ಕಂಪನಿಗಳ ಅಧಿಕೃತ ವೆಬ್‌ಸೈಟ್‌ಗಳು ಹಾಗೂ ಪ್ರಮುಖ ಆಟೋಮೊಬೈಲ್ ಪೋರ್ಟಲ್‌ಗಳಿಂದ ಸಂಗ್ರಹಿಸಲಾಗಿದೆ.

ಯಾಮಾಹಾ R2 ಬುಕಿಂಗ್ ಮತ್ತು ಡೆಲಿವರಿ ವಿವರಗಳು

ನೀವೇನಾದರೂ ಈ ಬೈಕ್ ಅನ್ನು ಆದಷ್ಟು ಬೇಗ ಮನೆಗೆ ತರಬೇಕು ಅಂದುಕೊಂಡಿದ್ದರೆ, ತಕ್ಷಣವೇ ಬುಕ್ ಮಾಡಿಕೊಳ್ಳುವುದು ಒಳ್ಳೆಯದು. ಲಾಂಚ್‌ಗೂ ಮುನ್ನ ಬುಕ್ ಮಾಡುವವರಿಗೆ ಡೆಲಿವರಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಯಾಮಾಹಾ ಸ್ಪಷ್ಟಪಡಿಸಿದೆ. ಒಂದು ವೇಳೆ ಬುಕಿಂಗ್ ರದ್ದುಗೊಳಿಸಿದರೆ, ಸೆಪ್ಟೆಂಬರ್ 5ರ ನಂತರ ನೀವು ಬುಕ್ ಮಾಡಿದ ಶೋರೂಮ್ ಮೂಲಕವೇ ಹಣ ರಿಫಂಡ್ ಆಗಲಿದೆ. ಬೈಕ್ ಡೆಲಿವರಿ ಸಮಯವು ಸ್ಟಾಕ್ ಲಭ್ಯತೆಯ ಮೇಲೆ ಆಧಾರಪಟ್ಟಿರುತ್ತದೆ. ಆದರೆ, ಆರಂಭಿಕ ಹಂತದಲ್ಲಿ ಬುಕ್ ಮಾಡುವವರಿಗೆ ಬೈಕ್ ಕೈಸೇರಲು ಕನಿಷ್ಠ 45 ದಿನಗಳಿಗಿಂತ ಹೆಚ್ಚು ಸಮಯ ಬೇಕಾಗಬಹುದು ಎಂದು ಆಟೋಮೊಬೈಲ್ ರಂಗದ ತಜ್ಞರು ಹಾಗೂ ಡೀಲರ್‌ಗಳು ಹೇಳುತ್ತಿದ್ದಾರೆ.

ಪ್ರಸ್ತುತ R15 V4 ಬೈಕ್ ಹೊಂದಿರುವವರಿಗೆ, ಈ ಹೊಸ ಆರ್2 ಗಾಗಿ ಹೆಚ್ಚುವರಿಯಾಗಿ ಸುಮಾರು ₹20,000 ದಿಂದ ₹40,000 ಎಕ್ಸ್-ಶೋರೂಮ್ ಬೆಲೆ ನೀಡುವುದು ಸೂಕ್ತ ಎನಿಸಲಿದೆ. ಏಕೆಂದರೆ ಇದು ಹೈವೇಯಲ್ಲಿ ಹೆಚ್ಚಿನ ವೇಗ ಮತ್ತು ಕಂಫರ್ಟಬಲ್ ಆದ ರೈಡಿಂಗ್ ಅನುಭವ ನೀಡಲಿದೆ. ಬೈಕ್‌ನ ಸಂಪೂರ್ಣ ವಿವರಗಳು ಬೇಕು ಎನ್ನುವುದಾದರೆ ಆಗಸ್ಟ್ 27 ರವರೆಗೂ ಕಾಯುವುದು ಉತ್ತಮ. ಇಲ್ಲ, ನನಗೆ ಕ್ಯೂನಲ್ಲಿ ಮೊದಲ ಆದ್ಯತೆಯಲ್ಲಿ ಬೈಕ್ ಡೆಲಿವರಿ ಬೇಕು ಎನ್ನುವವರಾದರೆ, 10,000 ರೂಪಾಯಿ ಮುಂಗಡ ಹಣ ನೀಡಿ ಈಗಲೇ ಬುಕಿಂಗ್ ಖಚಿತಪಡಿಸಿಕೊಳ್ಳಬಹುದು.

Article Published On: Saturday, August 22, 2026, 16:47 [IST]
Read more on upcoming bikes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+