Ugadi Offer: ಯುಗಾದಿ ಆಫರ್: ಕನ್ನಡಿಗರಿಗೆ ಡಿಸ್ಕೌಂಟ್: ಕಮ್ಮಿ ಬೆಲೆಗೆ ಯಮಹಾ ವಾಹನಗಳು!

ಹಿಂದುಗಳಿಗೆ ಹೊಸ ವರ್ಷವೆಂದು ಪರಿಗಣಿಸುವ ಯುಗಾದಿ ಹಬ್ಬವು ಭಾರತದಲ್ಲಿ ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಜೋರಾಗಿ ಆಚರಿಸಲಾಗುತ್ತದೆ, ಕರ್ನಾಟಕವು ಇರುವುದರಲ್ಲೇ ತುಂಬಾ ಅದ್ದೂರಿಯಾಗಿ ಯುಗಾದಿ ಹಬ್ಬವನ್ನು ಆಚರಿಸುವ ರಾಜ್ಯವಾಗಿದೆ. ಹಾಗಾಗಿಯೇ ಜಾಗತಿಕ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿರುವ ಯಮಹಾ (Yamaha) ಯುಗಾದಿಯ ಶುಭ ಸಂದರ್ಭದಲ್ಲಿ, ಕೇವಲ ಕರ್ನಾಟಕದಲ್ಲಿ ಮಾತ್ರ ತನ್ನ ಜನಪ್ರಿಯ ಸ್ಕೂಟರ್ ಮತ್ತು ಮೋಟಾರ್‌ಸೈಕಲ್‌ಗಳ ಮೇಲೆ ವಿಶೇಷ ಹಬ್ಬದ ಆಫರ್‌ಗಳನ್ನು ಘೋಷಿಸಿದೆ. ಗ್ರಾಹಕರು ಈ ಹಬ್ಬದ ಋತುವಿನಲ್ಲಿ ತಮ್ಮ ನೆಚ್ಚಿನ ಯಮಹಾ ವಾಹನವನ್ನು ಕಮ್ಮಿ ಬೆಲೆಗೆ ಮನೆಗೆ ಕೊಂಡೊಯ್ಯುವ ಅವಕಾಶ ನೀಡಲಾಗಿದೆ.

ಸಾಮಾನ್ಯವಾಗಿ ಕರ್ನಾಟಕದ ಮಂದಿಗೆ ಸ್ವಾಭಿಮಾನ ಜಾಸ್ತಿ, ಕನ್ನಡ ಭಾಷೆಯೆಂದರೆ ಎಲ್ಲಿಲ್ಲದ ಗೌರವವಿದೆ. ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ನೆಲೆಸಿರುವವರು ಕೂಡ ಹೆಮ್ಮೆಯಿಂದ ನಾವು ಕನ್ನಡಿಗರು ಎಂದು ಹೇಳಿಕೊಳ್ಳುತ್ತಾರೆ. ಯಮಹಾ ಈಗ ಕರ್ನಾಟಕದಲ್ಲಿ ಮಾತ್ರ ಈ ಹಬ್ಬದ ಆಫರ್ ಘೋಷಿಸಿದ್ದು, ಕನ್ನಡಿಗರು ಹಬ್ಬಕ್ಕೆ ಹೊಸ ಯಮಹಾ ಸ್ಕೂಟರ್ ಅಥವಾ ಬೈಕ್ ಅನ್ನು ಅಗ್ಗವಾಗಿ ಖರೀದಿಸಬಹುದಾಗಿದೆ.

yamaha-ugadi-special-offers-on-r15-rayzr-and-fascino-across-karnataka

ಯುಗಾದಿ ವಿಶೇಷ ಆಫರ್‌ಗಳು

ಯಮಹಾ R15 ಮೇಲೆ ವಿಶೇಷ ಡಿಸ್ಕೌಂಟ್: 70ನೇ ವಾರ್ಷಿಕೋತ್ಸವದ ವಿಶೇಷ ಬೆಲೆಯೊಂದಿಗೆ ಹಬ್ಬದ ಸಂದರ್ಭವನ್ನು ಗುರುತಿಸಿ, ಯಮಹಾ R15 ಆನ್-ರೋಡ್ ಬೆಲೆಯಲ್ಲಿ ರೂ. 6,000 ಉಳಿತಾಯದೊಂದಿಗೆ ಐಕಾನಿಕ್ ಸೂಪರ್‌ಸ್ಪೋರ್ಟ್ ಬೈಕ್ ಖರೀದಿಸಬಹುದಾಗಿದೆ. ಡಿಸ್ಕೌಂಟ್‌ಗಾಗಿ ಕಾಯುತಿದ್ದ ಯಮಹಾ R15 ಅಭಿಮಾನಿಗಳು ಈ ಬೈಕ್‌ನ್ನು ಖರೀದಿಸಲು ಇದು ಸರಿಯಾದ ಸಮಯವಾಗಿದೆ.

ಯಮಹಾ ರೇಝಡ್ಆರ್ 125 ಫೈ ಹೈಬ್ರಿಡ್‌ ಮೇಲೆ ವಿಶೇಷ ಆಫರ್: 70ನೇ ವಾರ್ಷಿಕೋತ್ಸವದ ವಿಶೇಷ ಬೆಲೆಯೊಂದಿಗೆ ಹಬ್ಬವನ್ನು ಆಚರಿಸುತ್ತಾ, ಯಮಹಾ ರೇಝಡ್ಆರ್ 125 ಫೈ ಹೈಬ್ರಿಡ್‌ ಸ್ಕೂಟರ್ ಮೇಲೆ ರೂ. 7,000 ವರೆಗಿನ ಡಿಸ್ಕೌಂಟ್ ನೀಡಲಾಗುತ್ತಿದೆ. ಸ್ಪೋರ್ಟಿ ವಿನ್ಯಾಸ ಮತ್ತು ಅಸಾಧಾರಣ ಮೌಲ್ಯವನ್ನು ಭಯಸುವ ಗ್ರಾಹಕರಿಗೆ ಇದು ಹೇಳಿಮಾಡಿಸಿದ ಸ್ಕೂಟರ್ ಆಗಿದೆ.

yamaha-ugadi-special-offers-on-r15-rayzr-and-fascino-across-karnataka

ಯಮಹಾ ಫ್ಯಾಸಿನೊ 125 Fi ಹೈಬ್ರಿಡ್‌ ಮೇಲೆ ಯುಗಾದಿ ಆಫರ್: ಕೇವಲ ರೂ. 4,999 ರಿಂದ ಪ್ರಾರಂಭವಾಗುವ ಡೌನ್‌ಪೇಮೆಂಟ್‌ನೊಂದಿಗೆ ಆಕರ್ಷಕ ಹಬ್ಬದ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಯಮಹಾದ ಸ್ಟೈಲಿಶ್ ಮತ್ತು ಇಂಧನ - ಸಮರ್ಥ ಸ್ಕೂಟರ್ ಅನ್ನು ಈ ಹಬ್ಬಕ್ಕೆ ಕಡಿಮೆ ಡೌನ್‌ಪೇಮೆಂಟ್ ಮೂಲಕ ಸುಲಭವಾಗಿ ಖರೀದಿಸಬಹುದಾಗಿದೆ ಎಂದು ಯಮಹಾ ತಿಳಿಸಿದೆ.

ಯಮಹಾ FZ-S Fi ಹೈಬ್ರಿಡ್ ಬೈಕ್ ಮೇಲೆ ವಿಶೇಷ ಆಫರ್: ಯಮಹಾದ ಸುಧಾರಿತ ಹೈಬ್ರಿಡ್ ಮೋಟಾರ್‌ಸೈಕಲ್ ಅನ್ನು ರೂ. 7,999 ರಿಂದ ಪ್ರಾರಂಭವಾಗುವ ಡೌನ್ ಪೇಮೆಂಟ್‌ನೊಂದಿಗೆ ಮನೆಗೆ ಕೊಂಡೊಯ್ಯಬಹುದಾಗಿದೆ. ಪರ್ಫಾಮೆನ್ಸ, ದಕ್ಷತೆ ಮತ್ತು ಹಬ್ಬಕ್ಕೆ ಕೈಗೆಟುಕುವಿಕೆವಂತೆ ನೀಡಲಾಗುತ್ತಿದೆ. ಈ ವಿಶೇಷ ಯುಗಾದಿ ಆಫರ್‌ಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತವೆ. ಗ್ರಾಹಕರು ಹಬ್ಬಕ್ಕೆ ಯಮಹಾ ವಾಹನಗಳನ್ನು ಖರೀದಿಸಲು ಇದು ಸೂಕ್ತ ಸಮಯವಾಗಿದೆ.

yamaha-ugadi-special-offers-on-r15-rayzr-and-fascino-across-karnataka

ಯಮಹಾದಲ್ಲಿ ಯಾವೆಲ್ಲಾ ವಾಹನಗಳಿವೆ?

ಯಮಹಾದ ವೈವಿಧ್ಯಮಯ ಉತ್ಪನ್ನ ಪೋರ್ಟ್‌ಫೋಲಿಯೊದಲ್ಲಿ YZF-R15M (155cc), YZF-R15 V4 (155cc), YZF-R15S V3 (155cc), MT-15 V2 (155cc), ಯಮಹಾ XSR155 (155cc) ಮತ್ತು FZ-S Fi ಹೈಬ್ರಿಡ್ (149cc), FZ-S Fi (149cc), ಮತ್ತು FZ-X (149cc) ನಂತಹ ಪ್ರೀಮಿಯಂ ಮೋಟಾರ್‌ಸೈಕಲ್‌ಗಳು ಸೇರಿವೆ.

ಹೆಚ್ಚುವರಿಯಾಗಿ, ಯಮಹಾ ಏರೋಕ್ಸ್ 155 ಆವೃತ್ತಿ S (155cc), ಏರೋಕ್ಸ್ 155 (155cc), ಫ್ಯಾಸಿನೊ S 125 Fi ಹೈಬ್ರಿಡ್ (125cc), ಫ್ಯಾಸಿನೊ 125 Fi ಹೈಬ್ರಿಡ್ (125cc), ರೇಝಡ್ಆರ್ 125 Fi ಹೈಬ್ರಿಡ್ (125cc) ಮತ್ತು ರೇಝಡ್ಆರ್ ಸ್ಟ್ರೀಟ್ ರ್ಯಾಲಿ 125 Fi ಹೈಬ್ರಿಡ್ (125cc) ಸೇರಿದಂತೆ ಹಲವಾರು ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.

More from DriveSpark

Article Published On: Wednesday, March 11, 2026, 12:12 [IST]
English summary
Yamaha ugadi special offers on r15 rayzr and fascino across karnataka
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+