Yamaha: ಮೊನ್ನೆಯಷ್ಟೆ ಬಿಡುಗಡೆಯಾದ ಕಮ್ಮಿ ಬೆಲೆಯ ಯಮಹಾ ಬೈಕ್ ವಿಶೇಷತೆಗಳು!

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಯಮಹಾ (Yamaha), ಇತ್ತೀಚೆಗೆ ತನ್ನ XSR155 ಮೋಟಾರ್‌ಸೈಕಲ್‌ನ ಮೆಟಾಲಿಕ್ ಬ್ಲ್ಯಾಕ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಹೊಸ ಯಮಹಾ XSR155 ಮೆಟಾಲಿಕ್ ಬ್ಲ್ಯಾಕ್ ಎಡಿಷನ್ ಬೆಲೆಯು ರೂ. 1,58,990 (ಎಕ್ಸ್ - ಶೋರೂಂ) ಇದೆ. ಈ ಮೋಟಾರ್‌ಸೈಕಲ್ ಪ್ರತಿ ಲೀಟರ್ ಪೆಟ್ರೋಲ್‌ಗೆ 48 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಹೊಸ ಯಮಹಾ XSR155 ಮೆಟಾಲಿಕ್ ಬ್ಲ್ಯಾಕ್ ಎಡಿಷನ್ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.

ಯಮಹಾ ಮೋಟಾರ್ ಕಂಪನಿ, ಕಳೆದ ವರ್ಷ ನವೆಂಬರ್‌ನಲ್ಲಿ XSR155 ಬೈಕ್ ಬಿಡುಗಡೆ ಮಾಡಿತ್ತು. ಈ ಆಧುನಿಕ ರೆಟ್ರೋ ಬೈಕ್ ಭಾರತದಾದ್ಯಂತ ಗ್ರಾಹಕರಿಂದ ಅಗಾಧ ಪ್ರತಿಕ್ರಿಯೆ ಪಡೆದಿತ್ತು. ಗ್ರಾಹಕರಿಗೆ ಇದರ ಆಕರ್ಷಣೆ ಹೆಚ್ಚಿಸಲು ಹಾಗೂ ಯಮಹಾದ ರೆಟ್ರೊ-ಪ್ರೇರಿತ ಸ್ಟೈಲಿಂಗ್ ಮತ್ತು ಸ್ಪೋರ್ಟಿ ಪರ್ಫಾಮೆನ್ಸ್ ಬಯಸುವ ಮೋಟಾರ್‌ಸೈಕಲ್ ಉತ್ಸಾಹಿಗಳಿಗಾಗಿ ಈಗ XSR155 ಮೆಟಾಲಿಕ್ ಬ್ಲ್ಯಾಕ್ ಎಡಿಷನ್ ಬಿಡುಗಡೆ ಮಾಡಲಾಗಿದೆ.

yamaha-xsr155-metallic-black-edition-top-things

ಮೆಟಾಲಿಕ್ ಬ್ಲ್ಯಾಕ್' ಎಡಿಷನ್ ವಿಶೇಷತೆಗಳು

ಹೊಸ ಯಮಹಾ XSR155 ಮೆಟಾಲಿಕ್ ಬ್ಲ್ಯಾಕ್ ಎಡಿಷನ್ ಡಿಸೈನ್ ವಿಷಯಕ್ಕೆ ಬಂದರೆ, ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್, ಟಿಯರ್‌ಡ್ರಾಪ್ ಶೇಪ್ಡ್ ಫ್ಯುಯೆಲ್ ಟ್ಯಾಂಕ್, ಟೈಲ್‌ಲೈಟ್ ಹಾಗೂ ಫ್ಲಾಟ್ ಬೆಂಚ್ ಸೀಟ್‌ ಪಡೆದಿದೆ. ಇದರ ಮಸ್ಕುಲರ್ ಫ್ಯೂಲ್ ಟ್ಯಾಂಕ್, ಕನಿಷ್ಠ ಬಾಡಿ ವರ್ಕ್ ಮತ್ತು ಸಿಗ್ನೇಚರ್ ರೆಟ್ರೊ-ಪ್ರೇರಿತ ಸ್ಟೈಲಿಂಗ್ ಎಂಥವರನ್ನು ಆಕರ್ಷಿಸುತ್ತದೆ.

ಗಮನಾರ್ಹವಾದ ಗೋಲ್ಡ್ ಅಪ್‌ಸೈಡ್‌ಡೌನ್ (USD) ಫೋರ್ಕ್‌ಗಳೊಂದಿಗೆ ಜೋಡಿಯಾಗಿರುವ ಆಕ್ರಮಣಕಾರಿ ಟೋನ್, ಬೈಕ್‌ನ ರಸ್ತೆ ಉಪಸ್ಥಿತಿಯನ್ನು ಹೆಚ್ಚಿಸಿ, ಪ್ರೀಮಿಯಂ ಆಕರ್ಷಣೆಯನ್ನು ಬಲಪಡಿಸುತ್ತದೆ. ಈ ಬೈಕ್ 2005 ಮಿ.ಮೀ ಉದ್ದ, 805 ಮಿ.ಮೀ ಅಗಲ ಹಾಗೂ 180 ಮಿ.ಮೀ ಎತ್ತರವಿದೆ. ಜೊತೆಗಿದು 120 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1325 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಒಟ್ಟಾರೆ 137 ಕೆ.ಜಿ ತೂಕವಿದೆ.

yamaha-xsr155-metallic-black-edition-top-things

ಹೊಸ ಯಮಹಾ XSR155 ಮೆಟಾಲಿಕ್ ಬ್ಲ್ಯಾಕ್ ಎಡಿಷನ್ ಫೀಚರ್ಸ್ ವಿಷಯಕ್ಕೆ ಬಂದರೆ ಸರಿ ಸುಮಾರು 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಇದ್ದು, ಒಮ್ಮೆ ಸಂಪೂರ್ಣ ಟ್ಯಾಂಕ್ ತುಂಬಿಸಿ 480 ಕಿ.ಮೀ ಓಡಿಸಬಹುದು. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್‌ಫೋನ್‌ ಬ್ಲ್ಯೂಟೂತ್ ಕನೆಕ್ಟಿವಿಟಿ ಹಾಗೂ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್‌ನ್ನು ಹೊಂದಿದೆ. ಎಲ್ಲಾ ರೈಡರ್‌ಗಳಿಗೆ ಹೊಂದಿಕೊಳ್ಳುವಂತೆ ಸೀಟ್ ಎತ್ತರ 810 ಮಿ.ಮೀ ಇದೆ.

ಹೊಸ ಬಣ್ಣದ ಇತ್ತೀಚಿನ ಸೇರ್ಪಡೆಯಾಗಿ, ಗೋಲ್ಡನ್ USD ಫ್ರಂಟ್ ಫೋರ್ಕ್‌ಗಳನ್ನು ಹೊಂದಿರುವ ಮೆಟಾಲಿಕ್ ಬ್ಲ್ಯಾಕ್ ವೇರಿಯೆಂಟ್ ಗಮನಾರ್ಹ, ಪ್ರೀಮಿಯಂ ನೋಟವನ್ನು ಬಯಸುವ ಗ್ರಾಹಕರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ. ಹಾಗಾಗಿ ಬೆಲೆ ತುಸು ಹೆಚ್ಚಾಗಿದ್ದು, ಮೆಟಾಲಿಕ್ ಬ್ಲ್ಯಾಕ್ ಎಡಿಷನ್ ಬೆಲೆಯು ಈಗ ರೂ. 1,58,990 (ಎಕ್ಸ್-ಶೋರೂಂ) ಇದೆ ಎಂದು ಯಮಹಾ ತಿಳಿಸಿದೆ.

ಹೊಸ ಯಮಹಾ XSR155 ಮೆಟಾಲಿಕ್ ಬ್ಲ್ಯಾಕ್ ಎಡಿಷನ್ ಮೋಟಾರ್‌ಸೈಕಲ್ 18.1 ಬಿಎಚ್ ಪವರ್ ಹಾಗೂ 14.2 ಎನ್‌ಎಂ ಪೀಕ್ ಟಾರ್ಕ್ ಹೊರಹಾಕುವ ಪವರ್‌ಫುಲ್ 155 ಸಿಸಿ ಲಿಕ್ವಿಡ್ - ಕೂಲ್ಡ್, 4-ವಾಲ್ವ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. ಇದು 6 - ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 48 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, March 5, 2026, 10:20 [IST]
English summary
Yamaha xsr155 metallic black edition top things
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+