ಸ್ಕೂಟರ್ ಸೆಗ್ಮೆಂಟ್‌ಗೆ ಬಜಾಜ್ ರಿ ಎಂಟ್ರಿ!

ದಶಕಗಳಿಂದಲೂ ದೇಶದ ಸ್ಕೂಟರ್ ಸೆಗ್ಮೆಂಟ್‌ನಲ್ಲಿ ಬಜಾಜ್ ತನ್ನದೇ ಆದ ಸ್ಥಾನಮಾನವನ್ನು ಉಳಿಸಿಕೊಂಡಿದೆ. ಸ್ಕೂಟರ್ ಎಂದಾಕ್ಷಣ ನಮ್ಮ ಮನದಲ್ಲಿ 'ಬಜಾಜ್' ಎಂಬ ಪದ ಹೊಳೆಯುತ್ತದೆ. ಇಂದಿಗೂ ಬಜಾಜ್ ಸ್ಕೂಟರ್ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದಂತೂ ನಿಜ.

ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದರಿಂದ ಸ್ಕೂಟರ್ ಸೆಗ್ಮೆಂಟ್ ಸ್ಥಗಿತಗೊಳಿಸಲಾಗುವುದು ಎಂದು ಬಜಾಜ್ ಹೇಳಿಕೆ ಕೊಟ್ಟಿತ್ತು. ಆದರೆ ಇದೀಗ ಬಂದಿರುವ ವರದಿಯ ಪ್ರಕಾರ ದೇಶದ ಮುಂಚೂಣಿಯ ಸ್ಕೂಟರ್ ತಯಾರಕ ಕಂಪನಿಯಾದ ಬಜಾಜ್ ಆಟೋ, ನೂತನ ಕ್ರಿಸ್ಟಲ್ ಆಟೋಮ್ಯಾಟಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಪ್ರಸ್ತುತ ಸ್ಕೂಟರ್ ಬಹುಬೇಗನೇ ಮಾರುಕಟ್ಟೆಗೂ ಪ್ರವೇಶಿಸಲಿದೆ.

ನಿಮ್ಮ ಮಾಹಿತಿಗಾಗಿ, 2007ರಲ್ಲಿ ಬಜಾಜ್ ಕ್ರಿಸ್ಟಲ್ ಆಟೋಮ್ಯಾಟಿಕ್ ಸ್ಕೂಟರನ್ನು ಮೊದಲ ಬಾರಿಗೆ ಲಾಂಚ್ ಮಾಡಿತ್ತು. ಹಾಗಾಗಿ ಬಜಾಜ್ ಕ್ರಿಸ್ಟಲ್ ಎಲ್ಲರಿಗೂ ಪರಿಚಿತವಾಗಿರುವ ಹೆಸರಾಗಿದೆ. ಹಾಗಿದ್ದರೆ ರಿ ಎಂಟ್ರಿ ಕೊಡಲಿರುವ ಬಜಾಜ್ ಕ್ರಿಸ್ಟಲ್ ವಿಶೇಷತೆಗಳ ಬಗ್ಗೆ ಅರಿಯೋಣ ಬನ್ನಿ...

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನಿರ್ವಹಣೆ ನೂತನ ಕ್ರಿಸ್ಟಲ್‌ನ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಬಜಾಜ್‌ನ ಎಲ್ಲ ಉತ್ಪಾದನೆಗಳಂತೆಯೇ ನೂತನ ಬಜಾಜ್ ಕ್ರಿಸ್ಟಲ್‌ ಕೂಡಾ ಡಿಟಿಎಸ್-ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಇದರ 95 ಸಿಸಿ DTS-i ಎಂಜಿನ್ 7500 ಆರ್‌ಪಿಎಂನಲ್ಲಿ 7.2 ಪಿಎಸ್ ಪೀಕ್ ಪವರ್ ಉತ್ಪಾದಿಸಲಿದೆ. ಹಾಗೆಯೇ 5500 ಆರ್‌ಪಿಎಂನಲ್ಲಿ 7.66 ಎನ್‌ಎಂ ಟರ್ಕ್ಯೂ ಹೊಂದಿರಲಿದೆ.

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಮೈಲೇಜ್

ನಿಜವಾದ ಗ್ರಾಹಕ ಬಳಕೆಯ ನಿಯಮಗಳನ್ನು ಪರಿಗಣಿಸಿರುವ ಬಜಾಜ್ ಕ್ರಿಸ್ಟಲ್ ಪ್ರತೀ ಲೀಟರ್‌ಗೆ ಗರಿಷ್ಠ 50 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ನೂತನ ಬಜಾಜ್ ಕ್ರಿಸ್ಟಲ್ ಸ್ಕೂಟರ್ ಹೆಚ್ಚು ಸೀಟ್ ಸ್ಟೋರೆಜ್ ಜಾಗ ಕೂಡಾ ಹೊಂದಿದೆ. ಅಂದರೆ 22 ಲೀಟರ್ ಸ್ಪೇಸ್ ಹೊಂದಿರಲಿದೆ.

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಖಂಡಿತವಾಗಿಯೂ ಗೇರ್ ಬೈಕ್ ಇಷ್ಟಪಡದ ಗ್ರಾಹಕರು ಬಜಾಜ್‌ನ ಈ ನೂತನ ಅವಿಷ್ಕಾರವನ್ನು ಇಷ್ಟಪಡುವ ವಿಶ್ವಾಸವನ್ನು ಕಂಪನಿ ಹೊಂದಿದೆ.

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಅಂದ ಹಾಗೆ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳಂತಹ ಬಳಕೆದಾರ ಸ್ನೇಹಿ ಫೀಚರ್‌ಗಳನ್ನು ಬಜಾಜ್ ಕ್ರಿಸ್ಟಲ್ ಹೊಂದಿರಲಿದೆ. ಅಂದರೆ ಕತ್ತಲು ಪ್ರದೇಶದಲ್ಲಿ ಸಂಚರಿಸುವಾಗ ಹೆಡ್‌ಲ್ಯಾಂಪ್ ಸ್ವಯಂಚಾಲಿತವಾಗಿ ಆನ್ ಆಗಲಿದೆ. ಹಾಗೆಯೇ ಇದರ ಎಸ್ಎನ್‌ಎಸ್ ಟ್ವಿನ್ ಸ್ಪ್ರಿಂಗ್ ಸಸ್ಪೆಷನ್ ಆರಾಮದಾಯಕ ಚಾಲನೆಗೆ ನೆರವಾಗಲಿದೆ.

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಇದರ ಡಿಜಿಟಲ್ ಸ್ಪೀಡೊ ಮೀಟರ್ ಎರಡು ನೂತನ ಹಾಗೂ ಯೂನಿಕ್ ಫೀಚರ್ ಹೊಂದಿದೆ. ಲೊ ಬ್ಯಾಟರಿ ಇಂಡಿಕೇಟರ್, ಫ್ಯೂಯಲ್ ಗೇಜ್ ಹಾಗೂ ರಿವರ್ಸ್ ಇಂಡಿಕೇಟರ್ ಹೊಂದಿರಲಿದೆ.

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಫ್ರಿ ಬ್ಯಾಟರಿ ಹಾಗೂ ಆಟೋ ಚೋಕ್ ನಿರ್ವಹಣೆಯನ್ನು ಬಜಾಜ್ ಕ್ರಿಸ್ಟಲ್ ಡಿಟಿಎಸ್-ಐ ಹೊಂದಿದೆ. ಅಂದರೆ ಎಂಜಿನ್ ತಾಪಮಾನ 40 ಡಿಗ್ರಿಗಿಂತಲೂ ಕಡಿಮೆಯಾದಾಗ ಆಟೋ ಚೋಕ್ ಚಾಲನೆಯಾಗಲಿದೆ.

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಬಜಾಜ್ ಕ್ರಿಸ್ಟಲ್ ಡಿಟಿಎಸ್‌-ಐ

ಈ ಎಲ್ಲ ವೈಶಿಷ್ಟ್ಯಗಳು ಯಾವ ರೀತಿ ಬಜಾಜ್ ರಿ ಎಂಟ್ರಿಗೆ ಸಹಕಾರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Wednesday, January 16, 2013, 14:08 [IST]
English summary
Bajaj Auto is reportedly developing a new automatic scooter named as the Kristal. Bajaj's Scooter Re-entry The Bajaj Kristal, like all new Bajaj products, will be powered by a DTS-i engine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+