ಡುಗಾಟಿಯಿಂದ ಹಗುರವಾದ ದುಬಾರಿ ಬೈಕ್ ಅನಾವರಣ
ಫೋಕ್ಸ್‌ವ್ಯಾಗನ್ ಗ್ರೂಪ್ ಅಧೀನತೆಯಲ್ಲಿರುವ ಡುಗಾಟಿ ಗರಿಷ್ಠ ನಿರ್ವಹಣೆಯ ಬೈಕ್‌ಗಳನ್ನು ಉತ್ಪಾದಿಸುವದರಲ್ಲಿ ಖ್ಯಾತಿ ಪಡೆದ ಕಂಪನಿ. ಪ್ರಸ್ತುತ ಇಟಲಿ ಮೂಲದ ಕಂಪನಿಯು ಎಲ್ಲ ಹೊಸತನದಿಂದ ಕೂಡಿದ ನೂತನ ಹಗುರವಾದ ದುಬಾರಿ ಸೂಪರ್ ಬೈಕ್‌ವೊಂದನ್ನು ಅನಾವರಣಗೊಳಿಸಿದೆ.
ಡುಗಾಟಿ ಪೈಕಿ ಹೆಚ್ಚು ಕ್ರೀಡಾತ್ಮಕ ಲುಕ್ ಪಡೆದಿರುವ 2013 1199 ಪನಿಂಗಲ್ (panigale) ಆರ್ ಬೈಕ್ ತಲಹದಿಯಲ್ಲಿ ನೂತನ 1199 ಸೂಪರ್ಲೆಗೆರಾ ಬೈಕ್ ತಯಾರಿಸಲಾಗಿದೆ.
ಇದರ ಪ್ರಮುಖ ವಿಶೇಷವೆಂದರೆ ಹಗುರ ಭಾರದತ್ತ ಹೆಚ್ಚಿನ ಗಮನ ಹರಿಸಿದೆ. ಅಲ್ಲದೆ ಪನಿಂಗಲ್ ಆರ್ ಆವೃತ್ತಿಗಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದೆ.

ಕೇವಲ ಸೀಮಿತ ಆವೃತ್ತಿಗಳಿಗೆ ಮಾತ್ರ 1199 ಪನಿಗಲ್ ಸೂಪರ್ಲೆಗೆರಾ ಬೈಕ್ ಲಭ್ಯವಾಗಲಿದೆ. ಅಂದರೆ ಕೇವಲ 500 ಯುನಿಟ್ ಮಾತ್ರ ಸಿದ್ಧಗೊಳ್ಳಲಿದೆ.

ಅಂದರೆ ನೂತನ ಸೂಪರ್ಲೆಗೆರಾ ಖಾಸಗಿ ಬಳಕೆಗೆ ಮಾತ್ರ ಲಭ್ಯವಾಗಿರಲಿದೆ.

ಸಂಪೂರ್ಣ ಇಂಧನ ತುಂಬಿಸಿದಾಗ ಪಿನಗಲ್ ಆರ್ 189 ಕೆ.ಜಿ ತೂಕ ಹೊಂದಿರಲಿದೆ. ಇನ್ನೊಂದೆಡೆ ಹಗುರ ಭಾರ ಎನಿಸಿಕೊಂಡಿರುವ ಡುಗಾಟಿ 177 ಕೆ.ಜಿ ಮಾತ್ರ ಭಾರವಿದೆ.

ಹಾಗೆಯೇ 1198 ಸಿಸಿ ವಿ ಟ್ವಿನ್ ಎಂಜಿನ್ ಇರಲಿದ್ದು, 200 ಅಶ್ವಶಕ್ತಿ ಉತ್ಪಾದಿಸಲಿದೆ.

ಭಾರ ಕಡಿಮೆ ಮಾಡುವ ನಿಟ್ಟಿನಲ್ಲಿ ಟೈಟಾನಿಯಂ ಸೇರಿದಂತೆ ಹಗುರ ಭಾರತ ಬಿಡಿಭಾಗಗಳನ್ನು ಬಳಕೆ ಮಾಡಲಾಗಿದೆ.

ಇದರ ಮೊನೊಕಾಕ್ ಮತ್ತು ಸಬ್ ಫ್ರೇಮ್‌ಗಳನ್ನು ಮ್ಯಾಗ್ನೆಶಿಯಂನಿಂದ ಅಭಿವೃದ್ಧಿಪಡಿಸಲಾಗಿದ್ದು, ಸಂಪೂರ್ಣ ದೇಹವನ್ನು ಕಾರ್ಬನ್ ಫೈಬರ್‌ನಿಂದ ರಚಿಸಲಾಗಿದೆ.

ಎಕ್ಸಾಸ್ಟ್ ಸಿಸ್ಟಂ, ಬೋಲ್ಟ್ ಸೇರಿದಂತೆ ಇತರ ಪರಿಕರಗಳನ್ನು ಸಹ ಟೈಟಾನಿಯಂನಿಂದ ತಯಾರಿಸಲಾಗಿದೆ.

ಇನ್ನು ಗಂಟೆಗೆ ಗರಿಷ್ಠ 300 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದರಲಿದೆ.

ಡುಗಾಟಿ ವೀಲಿ ಕಂಟ್ರೋಲ್, ಡುಗಾಟಿ ಟ್ರಾಕ್ಷನ್ ಕಂಟ್ರೋಲ್, ಎಂಜಿನ್ ಬ್ರೇಕ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಯಾಲಿಬ್ರೇಷನ್ ಮತ್ತು ಡುಗಾಟಿ ಡಾಟಾ ಅನಾಲೀಸಿಸ್ ಲಭ್ಯವಿರಲಿದೆ.

ಇವೆಲ್ಲದರ ಜತೆಗೆ ಸೂಪರ್ಲೆಗೆರಾಗಾಗಿ ವಿಶೇಷ ರೇಸ್ ಕಿಟ್‌ವೊಂದನ್ನು ಡುಗಾಟಿ ಒದಗಿಸುತ್ತಿದೆ.

ಡುಗಾಟಿ ಸೂಪರ್ಲೆಗೆರಾ ಸೀಮಿತ ಆವೃತ್ತಿ ಬೆಲೆ 65,000 ಅಮೆರಿಕನ್ ಡಾಲರ್ ಆಗಿದೆ. ಇದನ್ನು ಭಾರತೀಯ ರುಪಾಯಿ ಮೌಲ್ಯಕ್ಕೆ ಪರಿವರ್ತಿಸಿದರೆ 40 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ಅಷ್ಟಕ್ಕೂ ಡುಗಾಟಿ ಸೂಪರ್ಲೆಗೆರಾ ಬೈಕ್ ಖರೀದಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಯಾಕೆಂದರೆ ಇದು ಕಂಪನಿ ಆದ್ಯತೆಯ ಆಧಾರದಲ್ಲಿ ಹಂಚಲಾಗುವುದು.


Click it and Unblock the Notifications








