ಜರ್ಮನಿಯಲ್ಲಿ ಡುಕಾಟಿ 2015 ಸ್ಕ್ರ್ಯಾಂಬ್ಲರ್ ಅನಾವರಣ
ಇಟಲಿಯ ಪ್ರತಿಷ್ಠಿತ ಮೋಟಾರ್‌ಸೈಕಲ್ ಸಂಸ್ಥೆಯಾಗಿರುವ ಡುಕಾಟಿ, ಜರ್ಮನಿಯಲ್ಲಿ ಹೊಸತಾದ 2015 ಸ್ಕ್ರ್ಯಾಂಬ್ಲರ್ ಮಾದರಿಯನ್ನು ಪ್ರದರ್ಶಿಸಿದೆ.
ಈ ಮಹತ್ವಕಾಂಕ್ಷಿ ಬೈಕ್ ಬಗ್ಗೆ ಅನೇಕ ವದಂತಿ ಹಾಗೂ ರಹಸ್ಯ ಚಿತ್ರಣಗಳು ಹೊರಬಂದಿದ್ದವು. ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಇವೆಲ್ಲಕ್ಕೂ ವಿರಾಮ ಹಾಕುವಲ್ಲಿ ಸಂಸ್ಥೆಯು ಯಶಸ್ವಿಯಾಗಿದೆ.

ಇದಕ್ಕೆ ಮತ್ತೊಂದು ಕಾರಣವೂ ಇದೆ. ಯಾಕೆಂದರೆ 2014 ಜರ್ಮನ್ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲೂ ಡುಕಾಟಿ ಭಯಭೇರಿ ಮೊಳಗಿಸಿತ್ತು.

ಅನೇಕ ಶೈಲಿಯಲ್ಲಿ ಹೊಸ ಸ್ಕ್ರ್ಯಾಂಬ್ಲರ್ ಲಭ್ಯವಿರಲಿದೆ. ಇದು ಐಕಾನ್, ಅರ್ಬನ್ ಎಂಡ್ಯುರೊ, ಕ್ಲಾಸಿಕ್ ಮತ್ತು ಫುಲ್ ಥ್ರೋಟಲ್ ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ. ಅದೇ ರೀತಿ ಗ್ರಾಹಕರು ತಮಗಿಷ್ಟವಾದ ಬಣ್ಣಗಳನ್ನು ಆಯ್ಕೆ ಮಾಡಬಹುದಾಗಿದೆ.

ಅಂದ ಹಾಗೆ ಡುಕಾಟಿ ಸ್ಕ್ರ್ಯಾಂಬ್ಲರ್, ಒಯಿಲ್/ಏರ್ ಕೂಲ್ಡ್, ಎಲ್ ಟ್ವಿನ್ 803 ಸಿಸಿ ಜೊತೆ ಎರಡು ವಾಲ್ವ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 75 ಅಶ್ವಶಕ್ತಿ (68 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಆಧುನಿಕ ತಂತ್ರಗಾರಿಕೆಯೊಂದಿಗೆ ಸಾಂಪ್ರದಾಯಿಕ ವಿನ್ಯಾಸವನ್ನು ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್‌ನಲ್ಲಿ ಕಾಯ್ದುಕೊಳ್ಳಲಾಗಿದೆ. ಇದು ಎಲ್‌ಇಡಿ ಲೈಟ್ ಗೈಡ್, ಎಲ್‌ಇಡಿ ರಿಯರ್ ಲೈಟ್ ಜೊತೆ ಡಿಫ್ಯೂಶನ್ ಲೈಟ್ ಪಡೆದುಕೊಳ್ಳಲಿದೆ.

ಇನ್ನು ದರದ ಬಗ್ಗೆ ಮಾತನಾಡುವುದಾದ್ದಲ್ಲಿ ಸ್ಕ್ರ್ಯಾಂಬ್ಲರ್ ಐಕಾನ್ 5.24 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಹಾಗೆಯೇ ಅರ್ಬನ್ ಎಂಡ್ಯುರೊ, ಫುಲ್ ಥ್ರೋಟಲ್ ಮತ್ತು ಕ್ಲಾಸಿಕ್ ಮಾದರಿಗಳು 6.17 ಲಕ್ಷ ರು.ಗಳಷ್ಟು ಬೆಲೆ ಬಾಳಲಿದೆ.

ಹಾಗಿದ್ದರೂ ಡುಕಾಟಿ ಸ್ಕ್ರ್ಯಾಂಬ್ಲರ್ ಯಾವಾಗ ಭಾರತ ಪ್ರವೇಶ ಪಡೆಯಲಿದೆ ಎಂಬುದಕ್ಕೆ ಇದುವರೆಗೆ ಯಾವುದೇ ಮಾಹಿತಿಗಳು ಹೊರಬಂದಿಲ್ಲ.


Click it and Unblock the Notifications