ಹರ್ಲಿಯಿಂದ ಬರಲಿದೆ 500ಸಿಸಿ, ಎಲೆಕ್ಟ್ರಿಕ್ ಬೈಕ್

By Nagaraja

ಇದು ಬೈಕ್ ಉತ್ಸಾಹಿಗಳ ಪಾಲಿಗೆ ಮಹತ್ವದ ಸುದ್ದಿಯಾಗಿದ್ದು, ಇನ್ನು ಮುಂದೆ ಅಮೆರಿಕದ ದಿಗ್ಗಜ ಕಂಪನಿಯಾದ ಹರ್ಲಿ ಡೇವಿಡ್ಸನ್ ಭಾರತಕ್ಕಾಗಿ ವಿಶೇಷವಾದ 500ಸಿಸಿ ಬೈಕ್‌ಗಳನ್ನು ಉತ್ಪಾದಿಸಲಿದೆ. ಅಷ್ಟೇ ಅಲ್ಲದೆ ನಿಕಟ ಭವಿಷ್ಯದಲ್ಲಿ ವಿದ್ಯುತ್ ಚಾಲಿತ ಬೈಕ್‌ಗಳನ್ನು ಉತ್ಪಾದಿಸುವುದರ ಬಗ್ಗೆ ಪ್ರಸ್ತಾಪವಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೌದು, ಈ ಬ್ರೇಕಿಂಗ್ ಸುದ್ದಿಯನ್ನು ಹರ್ಲಿ ಡೇವಿಡ್ಸನ್ ಸಿಒಒ ಮ್ಯಾಥ್ಯೂ ಲೆವಾಟಿಕ್ ಬಹಿರಂಗಪಡಿಸಿದ್ದು, ಭಾರತ ಹಾಗೂ ಇತರ ಏಷ್ಯಾ ರಾಷ್ಟ್ರಗಳನ್ನು ಗುರಿಯಿರಿಸಿಕೊಂಡು ನೂತನ 500ಸಿಸಿ ಕ್ರೂಸರ್ ಬೈಕ್ ಉತ್ಪಾದಿಸುತ್ತಿರುವುದಾಗಿ ವಿವರಣೆ ನೀಡಿದ್ದಾರೆ.

ಅಮೆರಿಕ ಮೂಲದ ಹರ್ಲಿ ಡೇವಿಡ್ಸನ್, ಬ್ರೆಜಿಲ್ ಹೊರತುಪಡಿಸಿದರೆ ಭಾರತದಲ್ಲಿ ಮಾತ್ರ ಜೋಡಣೆ ಘಟಕವನ್ನು ಹೊಂದಿದೆ. ಭಾರತದ ವಿಸ್ತಾರವಾದ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೂಂಡಿರುವ ಹರ್ಲಿ, ದೇಶದಲ್ಲಿ 2010ನೇ ಇಸವಿಯಲ್ಲಿ ಕ್ರೂಸರ್ ಬೈಕ್ ಮಾರಾಟವನ್ನು ಆರಂಭಿಸಿತ್ತು. ಭಾರತದಲ್ಲಿರುವ ಹರ್ಲಿ ಘಟಕ ರಾಷ್ಟ್ರ ರಾಜಧಾನಿ ದೆಹಲಿ ಸಮೀಪದ ಗುರ್ಗಾಂವ್‌ನಲ್ಲಿ ಸ್ಥಿತಗೊಂಡಿದೆ.

ಹರ್ಲಿ ಸಂಭ್ರಮ

ಹರ್ಲಿ ಸಂಭ್ರಮ

110ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಹರ್ಲಿ ಡೇವಿಡ್ಸನ್, 500ಸಿಸಿ ಬೇಬಿ ಬೈಕ್ ಉತ್ಪಾದಿಸುವ ಸೂಚನೆ ನೀಡಿರುವ ಮೂಲಕ ಭಾರತೀಯ ಬೈಕ್ ಪ್ರಿಯರಿಗೆ ಬಹುದೊಡ್ಡ ಉಡುಗೊರೆಯನ್ನು ನೀಡಿದೆ.

ದರ ಮಾಹಿತಿ

ದರ ಮಾಹಿತಿ

ಭಾರತೀಯ ಗ್ರಾಹಕರ ಪಾಲಿಗೆ 500ಸಿಸಿ ಎಂಬುದು ಬಹುದೊಡ್ಡ ಎಂಜಿನ್ ಆಯಾಮವಾಗಿರಲಿದೆ. ಆದರೆ ಗರಿಷ್ಠ ನಿರ್ವಹಣೆ ಬಯಸುವ ಬೈಕ್ ಪ್ರೇಮಿಗಳಿಗೆ ಇದು ಉತ್ತಮ ರೈಡಿಂಗ್ ಅನುಭವ ನೀಡಲಿದೆ. ಇನ್ನು ದರ 5 ಲಕ್ಷ ರು. ಅಂದಾಜಿಸಲಾಗುತ್ತಿದೆ.

ದೆಹಲಿ ಆಠೋ ಎಕ್ಸ್‌ಪೋ

ದೆಹಲಿ ಆಠೋ ಎಕ್ಸ್‌ಪೋ

ಪ್ರಸ್ತುತ ಅಭಿವೃದ್ಧಿ ಹಂತದಲ್ಲಿರುವ ಹರ್ಲಿ ಡೇವಿಡ್ಸನ್ 500ಸಿಸಿ ಬೈಕ್, ಮುಂದಿನ ವರ್ಷಾರಂಭದಲ್ಲಿ ಸಾಗಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣುವ ಸಂಭವವಿದೆ.

ಹರ್ಲಿ ಸ್ಪೋರ್ಟ್‌ಸ್ಟರ್

ಹರ್ಲಿ ಸ್ಪೋರ್ಟ್‌ಸ್ಟರ್

ಹರ್ಲಿ ಡೇವಿಡ್ಸನ್‌ ಸ್ಪೋರ್ಟ್‌ಸ್ಟರ್ 883ಸಿಸಿ ಬೈಕ್ ಪ್ರಸ್ತುತ ಹರ್ಲಿಯಿಂದ ಉತ್ಪಾದನೆಯಾಗುತ್ತಿರುವ ಅತಿ ಕಡಿಮೆ ಆಯಾಮ ಹೊಂದಿರುವ ಬೈಕಾಗಿದೆ. ಇದನ್ನು ಕಂಪ್ಲೀಟ್ ನೌಕ್ಡ್ ಡೌನ್ ಮುಖಾಂತರ ಗುರ್ಗಾಂವ್ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ.

ಎಲೆಕ್ಟ್ರಿಕ್ ಬೈಕ್

ಎಲೆಕ್ಟ್ರಿಕ್ ಬೈಕ್

ಅದೇ ಹೊತ್ತಿಗೆ ಎಲೆಕ್ಟ್ರಿಕ್ ಬೈಕ್ ಬೈಕ್ ಉತ್ಪಾದಿಸುವುದಾಗಿ ಹರ್ಲಿ ಡೇವಿಡ್ಸನ್ ತಿಳಿಸಿದೆ. ಅಂದರೆ ನಿಕಟ ಭವಿಷ್ಯದಲ್ಲಿ ಹರ್ಲಿಯಿಂದ ವಿದ್ಯುತ್ ಚಾಲಿತ ಬೈಕ್ ಕೂಡಾ ನಿರೀಕ್ಷಿಸಬಹುದಾಗದೆ.

More from DriveSpark

Article Published On: Wednesday, September 4, 2013, 17:03 [IST]
English summary
This is huge. While not totally unexpected, it is a major news never the less. During the Harley Davidson 110th anniversary celebrations at Milwaukee, company COO Matthew Levatich must have left many a mouth agape when he revealed the company's plans to come out with a 500cc baby Harley Davidson
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+