ಇಂಡಿಯಾ ಬೈಕ್ ವೀಕ್‌ನಲ್ಲಿ ಹರ್ಲಿ ಡೇವಿಡ್ಸನ್ ಅಗ್ಗದ ಬೈಕ್
ಸಮುದ್ರ ತೀರ ಪ್ರದೇಶದಲ್ಲಿ ಸ್ಥಿತಗೊಂಡಿರುವ ದೇಶದ ನೆಚ್ಚಿನ ಪ್ರವಾಸಿ ತಾಣ ಗೋವಾದಲ್ಲಿ ನಡೆಯುತ್ತಿರುವ ಇಂಡಿಯಾ ಬೈಕ್ ವೀಕ್ 2014 ಹಬ್ಬದಲ್ಲಿ ಬೈಕುಗಳ ಪ್ರದರ್ಶನ ಮೇಳ ಭಾರಿ ಜೋರಾಗಿಯೇ ನಡೆಯುತ್ತಿದೆ.
ಇಂಡಿಯಾ ಬೈಕ್ ವೀಕ್‌ಗೆ ಕಿಚ್ಚು ಹಚ್ಚಿದ ಡ್ರೈವ್ ಸ್ಪಾರ್ಕ್
ಈ ಮಹತ್ತರ ಮೇಳದಲ್ಲಿ ಭಾಗವಹಿಸಲು ನಮ್ಮ ಡ್ರೈವ್ ಸ್ಪಾರ್ಕ್ ತಂಡದ ಸಹಪಾಠಿಗಳು ಸಹ ತೆರಳಿರುವುದರ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುತ್ತೇವೆ. ಪ್ರಸ್ತುತ ಅಂತಿಮ ದಿನವಾಗಿರುವ ಇಂದೂ ಹರ್ಲಿ ಡೇವಿಡ್ಸನ್‌ನಿಂದ ಮುಂಬರುವ ಅಗ್ಗದ ಬೈಕ್ ಸೇರಿದಂತೆ ಹಲವಾರು ಕಸ್ಟಮೈಸ್ಡ್ ಬೈಕ್‌ಗಳ ಪ್ರದರ್ಶನವಾಗಿದೆ. ಆಕರ್ಷಕ ಚಿತ್ರ ಹಾಗೂ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ.

ದೇಶದ ಗ್ರಾಹಕರು ಅತಿ ಕುತೂಹಲದಿಂದ ಎದುರು ನೋಡುತ್ತಿರುವ ಬೈಕ್ ಹರ್ಲಿ ಡೇವಿಡ್ಸನ್ ಸ್ಟ್ರೀಟ್ 750. ಇದು ಹರ್ಲಿಯಿಂದ ಆಗಮನವಾಗಲಿರುವ ಅಗ್ಗದ ಬೈಕಾಗಿರಲಿದೆ.

ನಾವು ಈ ಹಿಂದೆ ತಿಳಿಸಿರುವಂತೆಯೇ ಹರ್ಲಿ ಡೇವಿಡ್ಸನ್ ಸ್ಟ್ರೀಟ್ 750 ಹಾಗೂ 500 ಸಿಸಿ ಬೈಕ್‌ಗಳು ಭಾರತದಲ್ಲೇ ಉತ್ಪಾದನೆಯಾಗಲಿದೆ. ಇದು ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಪ್ರವೇಶಿಸಲು ನೆರವಾಗಲಿದೆ.

ಎಲ್ಲ ಹೊಸತನದಿಂದ ಕೂಡಿದ ಫ್ಲ್ಯಾಟ್‌ಫಾರ್ಮ್‌ನಲ್ಲಿ ಆಗಮನವಾಗಲಿರುವ ನೂತನ ಹರ್ಲಿ ಅಗ್ಗದ ಬೈಕ್‌ಗಳು ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ಇದರ ಜತೆಗೆ ಹರ್ಲಿ ಡೇವಿಡ್ಸನ್ 750 ತಲಹದಿಯಲ್ಲಿ ಇನ್ನು ಮೂರು ವಿಭಿನ್ನ ಬೈಕ್‌ಗಳನ್ನು ಇಂಡಿಯಾ ಬೈಕ್ ವೀಕ್‌ನಲ್ಲಿ ಪ್ರದರ್ಶನವಾಗಿದೆ.

ಅಷ್ಟೇ ಅಲ್ಲದೆ ಇನ್ನಿತರ ಪ್ರತಿಸ್ಪರ್ಧಿಗಳಿಂದಲೂ ಅನೇಕ ಕಸ್ಟಮೈಸ್ಡ್ ಬೈಕ್‌ಗಳು ಗೋವಾದಲ್ಲಿ ಪ್ರದರ್ಶನಗೊಂಡಿದೆ. ಅಲ್ಲದೆ ಶ್ರೇಷ್ಠ ಬೈಕ್ ವಿಜೇತರನ್ನು ಸದ್ಯದಲ್ಲೇ ಆಯೋಜಕರು ಘೋಷಿಸಲಿದ್ದಾರೆ.

ಮೂಲಗಳ ಪ್ರಕಾರ ಹರ್ಲಿ ಡೇವಿಡ್ಸನ್ 750 ಬೈಕ್‌ಗಳಲ್ಲಿ ಲಿಕ್ವಿಡ್ ಕೂಲ್ಡ್ ರೆವೊಲ್ಯೂಷನ್ ಎಕ್ಸ್(ವಿ-ಟ್ವಿನ್) ಎಂಜಿನ್ ಬಳಕೆಯಾಗಲಿದೆ. ದೇಶದ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಇದನ್ನು ತಯಾರಿಸಲಾಗುತ್ತಿದೆ.

ಇಂಡಿಯಾ ಬೈಕ್ ವೀಕ್‌ನಲ್ಲಿ ಡ್ರೈವ್ ಸ್ಪಾರ್ಕ್ ಕಲರವ

ಇಂಡಿಯಾ ಬೈಕ್ ವೀಕ್‌ನಲ್ಲಿ ಡ್ರೈವ್ ಸ್ಪಾರ್ಕ್ ಕಲರವ

ಇಂಡಿಯಾ ಬೈಕ್ ವೀಕ್‌ನಲ್ಲಿ ಡ್ರೈವ್ ಸ್ಪಾರ್ಕ್ ಕಲರವ

ಇಂಡಿಯಾ ಬೈಕ್ ವೀಕ್‌ನಲ್ಲಿ ಡ್ರೈವ್ ಸ್ಪಾರ್ಕ್ ಕಲರವ

ಇಂಡಿಯಾ ಬೈಕ್ ವೀಕ್‌ನಲ್ಲಿ ಡ್ರೈವ್ ಸ್ಪಾರ್ಕ್ ಕಲರವ

ಇಂಡಿಯಾ ಬೈಕ್ ವೀಕ್‌ನಲ್ಲಿ ಡ್ರೈವ್ ಸ್ಪಾರ್ಕ್ ಕಲರವ

ಇಂಡಿಯಾ ಬೈಕ್ ವೀಕ್‌ನಲ್ಲಿ ಡ್ರೈವ್ ಸ್ಪಾರ್ಕ್ ಕಲರವ


Click it and Unblock the Notifications








