ಹರ್ಲಿ ದೇಶದಲ್ಲೇ ಜೋಡಣೆ; ದರ ಕಡಿತ ನಿರೀಕ್ಷೆ

ಬೈಕ್ ಪ್ರೇಮಿಗಳಿಗೆ ಶುಭ ಸುದ್ದಿ ಬಂದೊದಗಿದ್ದು, ಲಗ್ಷುರಿ ಕ್ರೂಸರ್ ಮೋಟಾರ್‌ಸೈಕಲ್ ತಯಾರಕರಾದ ಹರ್ಲಿ ಡೇವಿಡ್ಸನ್, ತನ್ನ ಮೂರು ಮಾಡೆಲ್‌ಗಳ ಜೋಡಣೆ ಕಾರ್ಯವನ್ನು ಭಾರತದಲ್ಲೇ ಆರಂಭಿಸಿದೆ.

ಫಾಟ್ ಬಾಯ್, ಫಾಟ್ ಬಾಯ್ ಸ್ಪೆಷಲ್ ಹಾಗೂ ಹೆರಿಟೇಜ್ ಸಾಫ್ಟೈಲ್ ಕ್ಲಾಸಿಕ್‌ಗಳೆಂಬ ಮೂರು ಕ್ರೂಸರ್ ಬೈಕ್‌ಗಳ ಜೋಡಣೆ ಕಾರ್ಯವನ್ನು ದೇಶಿಯವಾಗಿ ಆರಂಭಿಸಲಾಗಿದೆ. ಕೇಂದ್ರ ಬಜೆಟ್‌ನಲ್ಲಿ ಆಮದು ಶುಲ್ಕ ಹೆಚ್ಚಳಗೊಳಿಸಿದ ಬೆನ್ನಲ್ಲೇ ಹರ್ಲಿಯಿಂದ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ.

2013-14ರ ಸಾಲಿನ ಕೇಂದ್ರ ಬಜೆಟ್‌ನಲ್ಲಿ 800ಸಿಸಿಗಿಂತಲೂ ಮೇಲ್ಪಟ್ಟ ಬೈಕ್‌ಗಳ ಆಮದು ಶುಲ್ಕವನ್ನು ಶೇಕಡಾ 60ರಿಂದ 75ರ ತನಕ ಏರಿಕೆಗೊಳಿಸಲಾಗಿತ್ತು. ಇದರಿಂದಾಗಿ ವಿಪರೀತ ತೆರಿಗೆ ಹೊರೆ ತಪ್ಪಿಸಲು ಹರ್ಲಿ ಡೇವಿಡ್ಸನ್ ದೇಶಕ್ಕೆ ಆಮದು ಮಾಡುತ್ತಿರುವ 12 ಬೈಕ್‌ಗಳ ಪೈಕಿ ಒಂಬತ್ತು ಮಾದರಿಗಳನ್ನು ಕಂಪ್ಲೀಟ್ ನಾಕ್ ಡೌನ್ (ಸಿಕೆಡಿ) ಸಿದ್ಧಾಂತ ಮೂಲಕ ಸ್ಥಳೀಯವಾಗಿ ಜೋಡಣೆ ಕಾರ್ಯ ಆರಂಭಿಸಿದೆ.

ಒಂದು ವೇಳೆ ಹರ್ಲಿ ಬೈಕ್‌ಗಳನ್ನು ಸಂಪೂರ್ಣವಾಗಿ ಆಮದು ಮಾಡುತ್ತಿದ್ದರೆ ದರಗಳಲ್ಲಿ ಭಾರಿ ಏರಿಕೆ ಕಾಣುತ್ತಿದ್ದವು. ಆದರೆ ಹರಿಯಾಣ ಘಟಕದಲ್ಲಿ ಜೋಡಣೆ ಕಾರ್ಯ ನಡೆಯಲಿರುವುದರಿಂದ ನೈಜ ದರಕ್ಕಿಂತಲೂ ಶೇಕಡಾ 20ರಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ.

ಹರ್ಲಿ ಡೇವಿಡ್ಸನ್ ಫಾಟ್ ಬಾಯ್

ಹರ್ಲಿ ಡೇವಿಡ್ಸನ್ ಫಾಟ್ ಬಾಯ್

ಕಂಪ್ಲೀಟ್ ಬಿಲ್ಟ್ ಅಪ್ (ಸಿಬಿಯು) ದರ: 19.45 ಲಕ್ಷ ರು.

ಇದೀಗ ಕಂಪ್ಲೀಟ್ ನಾಕ್ ಡೌನ್ (ಸಿಕೆಡಿ) ದರ: 14.9 ಲಕ್ಷ ರು.

ಹರ್ಲಿ ಡೇವಿಡ್ಸನ್ ಫಾಟ್ ಬಾಯ್ ಸ್ಪೆಷಲ್

ಹರ್ಲಿ ಡೇವಿಡ್ಸನ್ ಫಾಟ್ ಬಾಯ್ ಸ್ಪೆಷಲ್

ಕಂಪ್ಲೀಟ್ ಬಿಲ್ಟ್ ಅಪ್ (ಸಿಬಿಯು) ದರ: 19.70 ಲಕ್ಷ ರು.

ಇದೀಗ ಕಂಪ್ಲೀಟ್ ನಾಕ್ ಡೌನ್ (ಸಿಕೆಡಿ) ದರ 15.6 ಲಕ್ಷ ರು.

ಹರ್ಲಿ ಡೇವಿಡ್ಸನ್ ಹೆರಿಟೇಜ್ ಸಾಫ್ಟೈಲ್ ಕ್ಲಾಸಿಕ್

ಹರ್ಲಿ ಡೇವಿಡ್ಸನ್ ಹೆರಿಟೇಜ್ ಸಾಫ್ಟೈಲ್ ಕ್ಲಾಸಿಕ್

ಕಂಪ್ಲೀಟ್ ಬಿಲ್ಟ್ ಅಪ್ (ಸಿಬಿಯು) ದರ: 20.45 ಲಕ್ಷ ರು.

ಇದೀಗ ಕಂಪ್ಲೀಟ್ ನಾಕ್ ಡೌನ್ (ಸಿಕೆಡಿ) ದರ 16.25 ಲಕ್ಷ ರು.

Harley-Davidson Starts Local Assembly Of New Models

ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯು ಉತ್ತಮ ಬೈಕ್ ಕ್ರೇಜ್ ಹೊಂದಿದೆ. ಇದರೊಂದಿಗೆ ದೇಶದಲ್ಲಿ ಸದೃಢ ಮಾರುಕಟ್ಟೆ ಹೊಂದುವುದು ಹರ್ಲಿ ಡೇವಿಡ್ಸನ್ ಯೋಜನೆಯಾಗಿದೆ.

Harley-Davidson Starts Local Assembly Of New Models

ಪ್ರಸ್ತುತ ಜೋಡಣೆ ಕಾರ್ಯವು ಹರ್ಲಿ ಡೇವಿಡ್ಸನ್ ಮಾರಾಟದಲ್ಲೂ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದ್ದು, ಸೇಲ್ಸ್‌ನಲ್ಲಿ ಪ್ರಗತಿ ಕಾಣಲಿದೆ.

Harley-Davidson Starts Local Assembly Of New Models

ಹರ್ಲಿ ಡೇವಿಡ್ಸನ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅನೂಪ್ ಪ್ರಕಾಶ್

More from DriveSpark

Article Published On: Saturday, March 9, 2013, 13:04 [IST]
English summary
Harley-Davidson, the luxury cruiser motorcycle maker will start assembly of three additional models in India. These models are the Fat Boy, Fat Boy Special and Heritage Softtail Classic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+