ಹೀರೊ ಇಕೊ ಬೈಕ್ - ಮೈಲೇಜ್ ಜಾಸ್ತಿ ಕೊಡುತ್ತಾ?
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ, ಇದೀಗಷ್ಟೇ ಸ್ಪ್ಲೆಂಡರ್ ಐಸ್ಮಾರ್ಟ್ ಪ್ರಯಾಣಿಕ ಬೈಕ್ ಲಾಂಚ್ ಮಾಡಿತ್ತು. ಈ ನಡುವೆ ಮಗದೊಂದು ಎಚ್‌ಎಫ್-ಡಿಲಕ್ಸ್ ಇಕೊ ಬೈಕ್ ಲಾಂಚ್ ಆಗಿರುವ ವಿಷಯ ನಿಮ್ಮ ಗಮನಕ್ಕೆ ಬಂದಿರಬಹುದು.
ಹೀರೊ ಐಸ್ಮಾರ್ಟ್ ಲಾಂಚ್
ಅಷ್ಟಕ್ಕೂ ಹೀರೊ ಇಕೊ ಪ್ರಯಾಣಿಕ ಬೈಕ್ ಹೊಂದಿರುವ ವಿಶಿಷ್ಟತೆಗಳೇನು? ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿರಬಹುದು. ಇದೀಗ ಈ ಲೇಖನದಲ್ಲಿ ಈ ಬಗ್ಗೆ ವಿಸ್ತಾರವಾಗಿ ಹೇಳಿಕೊಡಲಿದ್ದೇವೆ. ನಿಜ ಹೇಳಬೇಕೆಂದರೆ ಹಿರೊ ಎಚ್‌ಎಫ್-ಡಿಲಕ್ಸ್ ಇಕೊ ಬಿಡುಗಡೆಯಾಗಿರುವುದು ಮಾಧ್ಯಮಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಗಿಟ್ಟಿಸಿಕೊಂಡಿರಲಿಲ್ಲ.

ಅಂದ ಹಾಗೆ ನೂತನ ಹೀರೊ ಎಚ್‌ಎಫ್ ಡಿಲಕ್ಸ್ ಆವೃತ್ತಿಯು ಇಕೊ ಸ್ಟಿಕ್ಕರ್ ಪಡೆದುಕೊಂಡಿದ್ದು, ಸಂಸ್ಥೆಯ ಪ್ರಕಾರ ಇದು ಅತ್ಯಂತ ದಕ್ಷ ಆವೃತ್ತಿಯಾಗಿರಲಿದೆ. ನ್ಯೂ ಜನರೇಷನ್ ಎಚ್‌ಎಫ್ ಡಿಲಕ್ಸ್ ಭಾಗವಾಗಿ ಕೆಲವೊಂದು ಪರಿಷ್ಕೃತ ವೈಶಿಷ್ಟ್ಯಗಳೊಂದಿಗೆ ಇಕೊ ವರ್ಷನ್ ಪರಿಚಯವಾಗಿದೆ.

ಹೀರೊ ಎಚ್‌ಎಫ್ ಡಿಲಕ್ಸ್ ಇಕೊ ಆವೃತ್ತಿಯ ಮೊದಲ ವೈಶಿಷ್ಟ್ಯ ಏನೆಂದರೆ ಇದು ಮುಂದಕ್ಕೆ ಚಲಿಸಿದಂತೆ ಗಾಳಿ ಸುಗಮವಾಗಿ ಹಾದು ಹೋಗುವ ಸಲುವಾಗಿ ಏರೋಡೈನಾಮಿಕ್ ಶೈಲಿಯ ವಿಂಗ್ ಮಿರರ್ ಲಗತ್ತಿಸಲಾಗಿದೆ. ಇನ್ನು ಕ್ರಾಶ್ ಗಾರ್ಡ್‌ನಲ್ಲಿ ಸ್ಟೈಲಿಷ್ ಏರ್‌ಫಾಯಿಲ್ಸ್ ಕೊಡಲಾಗಿದೆ. ಇಲ್ಲದೆ ಕಡಿಮೆ ಉರುಳುವಿಕೆಯ ಪ್ರತಿರೋಧ ಚಕ್ರಗಳನ್ನು ಆಳವಡಿಸಲಾಗಿದೆ. ಇವೆಲ್ಲವೂ ಅತ್ಯುತ್ತಮ ಇಂಧನ ಕ್ಷಮತೆ ನೀಡಲು ನೆರವಾಗಲಿದೆ.

ಹಾಗಿದ್ದರೂ ಅಧಿಕೃತ ಮೈಲೇಜ್ ವಿವರಣೆಯನ್ನು ಹೀರೊ ಇದುವರೆಗೆ ಬಹಿರಂಗಪಡಿಸಿಲ್ಲ. ಎಆರ್‌ಎಐ ಪ್ರಕಾರ ಸಾಮಾನ್ಯ ಎಚ್‌ಎಫ್ ಡಿಲಕ್ಸ್ ಆವೃತ್ತಿಯು ಪ್ರತಿ ಲೀಟರ್‌ಗೆ 87 ಕೀ.ಮೀ. ಮೈಲೇಜ್ ನೀಡುತ್ತಿದೆ.

ನೂತನ ಎಚ್‌ಎಫ್ ಡಿಲಕ್ಸ್ ಇಕೊ 97.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಫೋರ್ ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 7.8 ಪಿಎಸ್ ಪವರ್ (8.04) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ದರ ಮಾಹಿತಿ
ಸ್ಟಾಂಡರ್ಡ್ ಎಚ್‌ಎಫ್-ಡಿಲಕ್ಸ್ ಆವೃತ್ತಿಗಿಂತಲೂ ಹೀರೊ ಎಚ್‌ಎಫ್ ಇಕೊ 5,000 ರು.ಗಳಷ್ಟು ದುಬಾರಿಯಾಗಲಿದೆ.
ದೆಹಲಿ ಎಕ್ಸ್ ಶೋ ರೂಂ ದರ ರು. 50,500


Click it and Unblock the Notifications








