ಸ್ಟಾರ್ಟ್-ಸ್ಟಾಪ್-ಸ್ಟಾರ್ಟ್; ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಲಾಂಚ್
ಜಗತ್ತಿನ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಬಹುನಿರೀಕ್ಷಿತ ಸ್ಪ್ಲೆಂಡರ್ ಐಸ್ಮಾರ್ಟ್ (iSMART) ಪ್ರಯಾಣಿಕ ಬೈಕನ್ನು ಲಾಂಚ್ ಮಾಡಿದೆ. ಇದರಲ್ಲಿ ಆಳವಡಿಸಲಾಗಿರುವ ನೂತನ ಐ3ಎಸ್ (i3S) ತಂತ್ರಗಾರಿಕೆಯು ಹೆಚ್ಚು ಇಂಧನ ಉಳಿತಾಯ ಮಾಡಲು ನೆರವಾಗಲಿದೆ.
ಬೆಂಗಳೂರು ಎಕ್ಸ್ ಶೋ ರೂಂ ದರ: ರು. 48,014
ಕಾರುಗಳಲ್ಲಿ ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನವು ಸಾಮಾನ್ಯವಾಗಿದೆ. ಇದೇ ಮೊದಲ ಬಾರಿಗೆ ಇಂತಹದೊಂದು ತಂತ್ರಜ್ಞಾನ ಬೈಕ್‌ಗೂ ಆಳವಡಿಕೆಯಾಗುತ್ತಿದೆ. ಇದು ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ಎಂಜಿನ್ ಕಾಲಹರಣ ಮಾಡುವಾಗ ಇಂಧನ ಉಳಿಸಲು ನೆರವಾಗಲಿದೆ. ಅಷ್ಟಕ್ಕೂ ಏನಿದು ಐಡಲ್ ಸ್ಟಾರ್ಟ್-ಸ್ಟಾಪ್ (ಐ3ಎಸ್) ತಂತ್ರಗಾರಿಕೆ ? ಮುಂದಕ್ಕೆ ಓದಿರಿ...

ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ಇಂಧನ ಉಳಿತಾಯ ನಿಟ್ಟಿನಲ್ಲಿ ಐಡಲ್ ಸ್ಟಾರ್ಟ್-ಸ್ಟಾಪ್ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗುತ್ತದೆ. ಇದು ಸ್ವಯಂಚಾಲಿತವಾಗಿ ಕೆಲಸ ಮಾಡಲಿದ್ದು, ಬಳಿಕ ಕ್ಲಚ್ ಅದುಮಿದರೆ ವಾಹನದ ಎಂಜಿನ್ ನಿಧಾನವಾಗಿ ಚಲಿಸಲು ಬಿಡಲಿದೆ. ಹೀರೊ ಸಂಸ್ಥೆಯ ಪ್ರಕಾರ, ಸ್ಪ್ಲೆಂಡರ್ ಐಸ್ಮಾರ್ಟ್‌ನಲ್ಲಿ ಆಳವಡಿಸಲಾಗಿರುವ ತಂತ್ರಜ್ಞಾನವು ಸದ್ಯದಲ್ಲೇ ಇತರ ಮಾದರಿಗಳಿಗೂ ಪರಿಚಯವಾಗಲಿದೆ.

ಅಂದ ಹಾಗೆ ನೂತನ ಸ್ಪ್ಲೆಂಡರ್ ಐಸ್ಮಾರ್ಟ್, 97.2 ಸಿಸಿ ಏರ್ ಕೂಲ್ಡ್ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 7.8 ಪಿಎಸ್ ಪವರ್ ಉತ್ಪಾದಿಸುವ (8.04 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಒಟ್ಟು ನಾಲ್ಕು ಕಲರ್ ವೆರಿಯಂಟ್‌ಗಳಲ್ಲಿ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಆಗಮನವಾಗಿದೆ. ಅವುಗಳೆಂದರೆ
ಸ್ಪೋರ್ಟ್ಸ್ ರೆಡ್,
ಲೀಫ್ ಗ್ರೀನ್,
ಎಕ್ಸೆಲೆಂಟ್ ಬ್ಲ್ಯೂ ಮತ್ತು
ಹೆವಿ ಗ್ರೇ

ನೂತನ ಸ್ಪ್ಲೆಂಡರ್ ಐಸ್ಮಾರ್ಟ್ ಮುಖಾಂತರ ಶೈಲಿ, ಕಾರ್ಯಕ್ಷಮತೆ ಮತ್ತು ಸುರಕ್ಷತೆಯ ಸಂಯೋಜನೆಯನ್ನು ಕಾಣಬಹುದಾಗಿದೆ. ಇದರ ಐ3ಎಸ್ ತಂತ್ರಗಾರಿಕೆಯನ್ನು ಗ್ರಾಹಕರನ್ನು ಇಷ್ಟಪಡುವ ನಂಬಿಕೆಯನ್ನು ಕಂಪನಿ ವ್ಯಕ್ತಪಡಿಸಿದೆ.

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿದ್ದ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಸಾಮಾನ್ಯ ಆವೃತ್ತಿಗಿಂತಲೂ ಸ್ವಲ್ಪ ದುಬಾರಿಯೆನಿಸಲಿದೆ. ಇದರ ವಿನ್ಯಾಸ ಎನ್‌ಎಕ್ಸ್‌ಜಿ ಆವೃತ್ತಿಗೆ ಸಾಮತ್ಯೆ ಪಡೆದುಕೊಂಡಿದೆ.

ಇನ್ನು ಕಂಪನಿಯ ಪ್ರಕಾರ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಪ್ರತಿ ಲೀಟರ್‌ಗೆ 68 ಕೀ.ಮೀ. ಮೈಲೇಜ್ ನೀಡುವಲ್ಲಿ ಸಕ್ಷಮವಾಗಿರಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ)
ಬೆಂಗಳೂರು - 48,014 ರು.
ದೆಹಲಿ - 47,250 ರು.
ಮುಂಬೈ - 48,192 ರು.
ಚೆನ್ನೈ - 48,549 ರು.
ಕೋಲ್ಕತ್ತಾ - 48,014 ರು.


Click it and Unblock the Notifications








