ಅರೆರೆ...ಸ್ಪ್ಲೆಂಡರ್ ಹಿಂದಿಕ್ಕಿದ ಹೋಂಡಾ ಆಕ್ಟಿವಾ ಸಕತ್ ಫೇಮಸ್ಸು

By Nagaraja

ದೇಶದ ಅಲ್ಲಲ್ಲ ಒಂದು ವೇಳೆ ಇಡೀ ವಿಶ್ವದ ದ್ವಿಚಕ್ರ ವಾಹನ ಇತಿಹಾಸದ ಐತಿಹಾಸಕ ಕ್ಷಣವೆಂದೇ ಬಣ್ಣಿಸಲ್ಪಡಬೇಕಾಗಿರುವ ಈ ಸಂದರ್ಭದಲ್ಲಿ ಇದುವರೆಗೆ ದೇಶದ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದ್ದ ಹೀರೊ ಸ್ಪ್ಲೆಂಡರ್ ಮಾರಾಟವನ್ನು ಹಿಂದಿಕ್ಕುವಲ್ಲಿ ಹೋಂಡಾ ಆಕ್ಟಿವಾ ಕೊನೆಗೂ ಯಶಸ್ಸು ಕಂಡಿದೆ.

ಹೀರೊ ಜತೆಗಿನ ಬಾಂಧವ್ಯ ಕಡಿದುಕೊಂಡ ಬಳಿಕ ತನ್ನದೇ ಆದ ವ್ಯಾಪಾರ ಕುದುರಿಸಿಕೊಳ್ಳುತ್ತಿರುವ ಹೋಂಡಾದ ಜನಪ್ರಿಯ ಆಕ್ಟಿವಾ ಇದೀಗ ದೇಶದ ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಬೈಕ್ ಎಂಬ ಖ್ಯಾತಿಗೆ ಪಾತ್ರವಾಗಿದೆ.

ದೇಶದ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಯುವ ಮನಸ್ಕರಿಂದ ಹಿಡಿದು ದೊಡ್ಡವರ ವರೆಗೂ ಕಾಲೇಜು, ಕಚೇರಿ ಇತ್ಯಾದಿ ಪ್ರದೇಶಗಳಿಗೆ ತೆರಳಲು ಗೇರ್ ಲೆಸ್ ಸ್ಕೂಟರುಗಳನ್ನು ಹರಸುತ್ತಾರೆ. ಇದು ಸ್ತ್ರಿ ಪುರಷರಲ್ಲಿ ಸಮಾನ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದೆ.

ಅರೆರೆ...ಸ್ಪ್ಲೆಂಡರ್ ಹಿಂದಿಕ್ಕಿದ ಹೋಂಡಾ ಆಕ್ಟಿವಾ ಸಕತ್ ಫೇಮಸ್ಸು

ಕಳೆದೆರಡು ದಶಕಗಳಿಂದಲೂ ದೇಶದ ರಸ್ತೆಗಳಲ್ಲಿ ರಾಜರೋಷವಾಗಿ ಸಂಚರಿಸುತ್ತಿದ್ದ ಸ್ಪ್ಲೆಂಡರ್‌ ಹಿಂದಿಕ್ಕುವಲ್ಲಿ ಹೋಂಡಾ ಆಕ್ಟಿವಾ ಯಶಸ್ಸನ್ನು ಕಂಡಿದೆ.

ಅರೆರೆ...ಸ್ಪ್ಲೆಂಡರ್ ಹಿಂದಿಕ್ಕಿದ ಹೋಂಡಾ ಆಕ್ಟಿವಾ ಸಕತ್ ಫೇಮಸ್ಸು

2013 ಸೆಪ್ಟೆಂಬರ್ ತಿಂಗಳಲ್ಲಿ ಹೋಂಡಾ 141,996 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು. ಅದೇ ಹೊತ್ತಿದೆ ಹೀರೊ ಮೊಟೊಕಾರ್ಪ್‌‍ನ ಸ್ಪ್ಲೆಂಡರ್ 124217 ಯುನಿಟ್‌ಗಳಷ್ಟೇ ಮಾರಾಟ ಕಾಣುವ ಮೂಲಕ ಹಿನ್ನಡೆ ಅನುಭವಿಸಿದೆ.

ಅರೆರೆ...ಸ್ಪ್ಲೆಂಡರ್ ಹಿಂದಿಕ್ಕಿದ ಹೋಂಡಾ ಆಕ್ಟಿವಾ ಸಕತ್ ಫೇಮಸ್ಸು

ನಗರ ಪ್ರದೇಶದ ಗ್ರಾಹಕರಲ್ಲಿ ಹೋಂಡಾ ಆಕ್ಟಿವಾಗೆ ಅತಿಹೆಚ್ಚು ಬೇಡಿಕೆ ಕಂಡುಬಂದಿದೆ. ಅದೇ ಹೊತ್ತಿಗೆ ಉಪನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ಪ್ಲೆಂಡರ್ ಇದೀಗಲೂ ಅಚ್ಚುಮೆಚ್ಚಿನ ಬೈಕ್ ಎನಿಸಿಕೊಂಡಿದೆ.

ಅರೆರೆ...ಸ್ಪ್ಲೆಂಡರ್ ಹಿಂದಿಕ್ಕಿದ ಹೋಂಡಾ ಆಕ್ಟಿವಾ ಸಕತ್ ಫೇಮಸ್ಸು

ಆಕ್ಟಿವಾ ಯಶಸ್ಸಿನಿಂದ ಸ್ಫೂರ್ತಿ ಪಡೆದಿರುವ ಹೋಂಡಾ, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸ್ಕೂಟರ್ ಮಾದರಿಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.

ಯಾತಕ್ಕಾಗಿ ಜನರು ಆಟೋಮ್ಯಾಟಿಕ್ ಸ್ಕೂಟರ್ ಇಷ್ಟಪಡುತ್ತಾರೆ?

ಯಾತಕ್ಕಾಗಿ ಜನರು ಆಟೋಮ್ಯಾಟಿಕ್ ಸ್ಕೂಟರ್ ಇಷ್ಟಪಡುತ್ತಾರೆ?

  • ನಿರ್ವಹಣೆ ಸುಲಭ: ಅಧಿಕ ವಾಹನ ದಟ್ಟಣೆ ಪ್ರದೇಶದಲ್ಲಿ ಮ್ಯಾನುವಲ್ ಗೇರ್ ಅಥವಾ ಕ್ಲಚ್‌ಗೆ ಹೋಲಿಸಿದರೆ ಆಟೋಮ್ಯಾಟಿಕ್ ಸ್ಕೂಟರ್‌ಗಳನ್ನು ಓಡಿಸುವುದು ಸುಲಭ,
  • ಪುರುಷ, ಸ್ತ್ರೀಯರಿಗೆ ಹೊಂದಿಯಾಗುವ ವಿನ್ಯಾಸ,
  • ಹೆಚ್ಚಿನ ಸ್ಟೋರೆಜ್ ಸ್ಪೇಸ್,
  • ಸೀರೆ ಉಟ್ಟ ಸ್ತ್ರೀಯರಿಗೂ ಸುಖಕರ ರೈಡಿಂಗ್
  • ನೆಗೆಟಿವ್ ಅಂಶಗಳು

    ನೆಗೆಟಿವ್ ಅಂಶಗಳು

    • ಇನ್ನು ಆಟೋಮ್ಯಾಟಿಕ್ ಸ್ಕೂಟರ್‌ಗಳ ನಕರಾತ್ಮಕ ಅಂಶಗಳನ್ನು ಪರಿಗಣಿಸಿದಾಗ ಕಡಿಮೆ ಇಂಧನ ಕ್ಷಮತೆ ಪ್ರಮುಖವಾಗಿ ಎದ್ದು ಕಾಣಿಸುತ್ತದೆ.
    • ಸಣ್ಣದಾದ ಚಕ್ರ ಹಾಗೂ ಒರಟಾದ ರಸ್ತೆಗಳಲ್ಲಿ ರೈಡಿಂಗ್ ಕಷ್ಟಕರ,
    • ದೂರ ಪ್ರಯಾಣಕ್ಕೆ ಹೆಚ್ಚು ಸುಖಕರವಾಗಿರುವುದಿಲ್ಲ.
    • ಅರೆರೆ...ಸ್ಪ್ಲೆಂಡರ್ ಹಿಂದಿಕ್ಕಿದ ಹೋಂಡಾ ಆಕ್ಟಿವಾ ಸಕತ್ ಫೇಮಸ್ಸು

      ಒಟ್ಟಾರೆಯಾಗಿ ಹೇಳುವುದಾದರೆ ನಿಮ್ಮ ದಿನನಿತ್ಯದ ಯಾತ್ರೆಯಲ್ಲಿ ಕಡಿಮೆ ದೂರದ ಪ್ರದೇಶಕ್ಕೆ ಸ್ಕೂಟರುಗಳನ್ನು ಹಾಗೆಯೇ ಹೆಚ್ಚು ದೂರದ ಪ್ರದೇಶಕ್ಕೆ ತೆರಳಲು 110ಸಿಸಿ ಬೈಕ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

More from DriveSpark

Article Published On: Tuesday, November 5, 2013, 16:36 [IST]
English summary
Scooters are not only the fastest growing segment of the Indian automotive market, but are increasingly taking on their most-erstwhile rival - bikes, as the gearless vehicles gain favour here. Honda Activa displaced the two-decade-old market leader Hero's Splendor motorcycle from the top slot in September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+