ಕೋಲಾರದಲ್ಲಿ ಹೋಂಡಾ 3ನೇ ತಯಾರಿಕ ಘಟಕ ಆರಂಭ

By Nagaraja

ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಮೋಟಾರ್ ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‌ಎಂಎಸ್‌ಐ) ಕರ್ನಾಟಕದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಘಟಕವನ್ನು ಮಂಗಳವಾರ ಆರಂಭಿಸಿದೆ.

ಕರ್ನಾಟಕದ ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಆರಂಭಗೊಂಡಿರುವ ಹೋಂಡಾ ಮೂರನೇ ಉತ್ಪಾದಕ ಘಟಕವನ್ನು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಸಚಿವರಾದ ಎಚ್. ಮುನಿಯಪ್ಪ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹೋಂಡಾ ಸಂಸ್ಥೆಯ ಹಲವು ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.

ಹೋಂಡಾ ನೂತನ ಉತ್ಪನ್ನಗಳನ್ನು ತ್ವರಿತ ಗತಿಯಲ್ಲಿ ತಯಾರಿಸುವುದು ಹಾಗೂ ಗ್ರಾಹಕರಿಗೆ ತಲುಪಿಸುವುದು ನೂತನ ಘಟಕದ ಗುರಿಯಾಗಿರಲಿದೆ. 96 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿರುವ ನೂತನ ಘಟಕದಲ್ಲಿ 1,350 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಇಲ್ಲಿ 4,500ರಷ್ಟು ಹೋಂಡಾ ಸಿಬ್ಬಂದಿಗಳು ಕೆಲಸ ನಿರ್ವಹಿಸಲಿದ್ದು, ಬೆಂಗಳೂರಿನಿಂದ 52 ಕೀ.ಮೀ. ದೂರದಲ್ಲಿ ಘಟಕ ಸ್ಥಿತಗೊಂಡಿದೆ.

ಕೋಲಾರದಲ್ಲಿ ಹೋಂಡಾ 3ನೇ ತಯಾರಿಕ ಘಟಕ ಆರಂಭ

ಜೂನ್ ತಿಂಗಳಿನಿಂದ ಉತ್ಪಾದನೆ ಆರಂಭಗೊಳಲಿದ್ದು, ಮೊದಲ ಹಂತದಲ್ಲಿ 12 ಲಕ್ಷ ಯುನಿಟ್ ಉತ್ಪಾದಿಸುವ ಗುರಿಯಿರಿಸಲಾಗಿದೆ. ಹಾಗೆಯೇ ಎರಡನೇ ಹಂತದ ಅಂತ್ಯದ ವೇಳೆ ಈ ಪ್ರಮಾಣವನ್ನು 18 ಲಕ್ಷಕ್ಕೆ ವೃದ್ಧಿಸುವ ಇರಾದೆ ಹೊಂದಿದೆ. 'ಜಾಯ್ ಟು ದಿ ನೆಕ್ಸ್ಟ್ ಜನರೇಷನ್' ಅಡಿಯಲ್ಲಿ ನೂತನ ಘಟಕದಲ್ಲಿ ಮೂಲಸೌಕರ್ಯ ಒದಗಿಸಲಾಗಿದೆ.

ಕೋಲಾರದಲ್ಲಿ ಹೋಂಡಾ 3ನೇ ತಯಾರಿಕ ಘಟಕ ಆರಂಭ

ಕೋಲಾರದ ಹೋಂಡಾ ಘಟಕವು ದಕ್ಷಿಣ ಭಾರತದಲ್ಲಿ ಕಂಪನಿಯ ಮೊದಲ ಘಟಕ ಎನಿಸಿಕೊಂಡಿದೆ. ಆರಂಭದಲ್ಲಿ ಡ್ರೀಮ್ ಯುಗ ಹಾಗೂ ಆಕ್ಟಿವಾ ಆವೃತ್ತಿಗಳನ್ನು ಇಲ್ಲಿ ತಯಾರಿಸಲಾಗುವುದು.

ಕೋಲಾರದಲ್ಲಿ ಹೋಂಡಾ 3ನೇ ತಯಾರಿಕ ಘಟಕ ಆರಂಭ

ಘಟಕದ ಕುರಿತು ವಿವರಣೆ ನೀಡಿದ ಹೋಂಡಾ ಕಂಪನಿ ಉಪಾಧ್ಯಕ್ಷ ಯದ್ವಿಂದರ್, ಇಂದೊಂದು ನೈಸರ್ಗಿಕ ಹೊಣೆಗಾರಿಕೆ ಘಟಕವಾಗಿದ್ದು, ಹಸಿರು ಕೈಗಾರಿಕೆ ಪರಿಯಲ್ಪನೆಯಡಿ ನೂತನ ಘಟಕದಲ್ಲಿ ಮಳೆ ನೀರು ಸಂಗ್ರಹ ಮೂಲಕ ಘಟಕಕ್ಕೆ ನೀರು ಪೂರೈಸಿಕೊಳ್ಳಲಾಗುವುದು ಎಂದಿದ್ದಾರೆ.

ಹೋಂಡಾ ಡ್ರೀಮ್ ಯುಗಾ

ಹೋಂಡಾ ಡ್ರೀಮ್ ಯುಗಾ

ಹೋಂಡಾ ಆಕ್ಟಿವಾ

ಹೋಂಡಾ ಆಕ್ಟಿವಾ

More from DriveSpark

Article Published On: Wednesday, May 29, 2013, 11:13 [IST]
English summary
Honda Motorcycle & Scooter India Pvt. Ltd. (HMSI), the 2nd largest 2Wheeler company in India inaugurated its most advanced and latest third 2Wheeler production plant at Narsapura Area, District Kolar (Karnataka) today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+