ಹೋಂಡಾ ಆಕ್ಟಿವಾ ಗೇರ್ ಲೆಸ್ ಸ್ಕೂಟರ್ ಲಾಂಚ್
ದೇಶದಲ್ಲಿ ಅಗ್ರಪಂಕ್ತಿಯ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ನೂತನ ಆಕ್ಟಿವಾ-ಐ ಸ್ಕೂಟರನ್ನು ಲಾಂಚ್ ಮಾಡಿದೆ. ಸಂಪೂರ್ಣ ಗೇರ್ ಲೆಸ್ ಆಗಿರುವ ಹೋಂಡಾ ಆಕ್ಟಿವಾ-ಐ (Activa-I) ದೆಹಲಿ ಎಕ್ಸ್ ಶೋ ರೂಂ ದರ 44,200 ರು.ಗಳಾಗಿವೆ.
110 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಹೋಂಡಾ ಆಕ್ಟಿವಾ-ಐ ಮಾಸಂತ್ಯದಲ್ಲಿ ಮಾರುಕಟ್ಟೆ ಪ್ರವೇಶ ಪಡೆಯಲಿದೆ. ಈ ಹೊಸ ಆವೃತ್ತಿಯು ಹೋಂಡಾವು ವೈಯಕ್ತಿಕ ಕಾಂಪಾಕ್ಟ್ ಸ್ಕೂಟರ್ ವಿಭಾಗದಲ್ಲಿ ಗುರುತಿಸಿಕೊಂಡಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಎಚ್‌ಎಂಎಸ್‌ಐ ಅಧ್ಯಕ್ಷ ಹಾಗೂ ಸಿಇಒ ಕೆಟಾ ಮುರಮಟ್ಸು, ವೈಯಕ್ತಿಕ ಕಾಂಪಾಕ್ಟ್ ವಿಭಾಗದಲ್ಲಿ ಹೋಂಡಾ ಆಕ್ಟಿವಾ-I ಹೊಸ ಅಲೆಯೆಬ್ಬಿಸಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಹೋಂಡಾದ ಮೂರು ಗೇರ್ ಲೆಸ್ ಸ್ಕೂಟರ್‌ಗಳಿವೆ. ಅವುಗಳೆಂದರೆ ಡಿಯೊ, ಆಕ್ಟಿವಾ ಹಾಗೂ ಎವಿಯೇಟರ್. 100ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಈ ಎಲ್ಲ ಸ್ಕೂಟರ್‌ಗಳ ಎಕ್ಸ್ ಶೋ ರೂಂ ದರಗಳು 44,000ದಿಂದ ಹಿಡಿದು 54,000 ವರೆಗಿದೆ.

ಹೋಂಡಾ ಆಕ್ಟಿವಾ-i ಕಲರ್ ವೆರಿಯಂಟ್
Alpha Red-Metallic
Purple Metallic
Pearl Sunbeam White
Beige Metallic

ಎಂಜಿನ್
4 ಸ್ಟ್ರೋಕ್ ಏರ್ ಕೂಲ್ಡ್ ಎಂಜಿನ್
109.2 ಸಿಸಿ ಡಿಸ್‌ಪ್ಲೇಸ್‌ಮೆಂಟ್
ಪೀಕ್ ಪವರ್ 8 ಬಿಎಚ್‌ಪಿ, 7500 ಆರ್‌ಪಿಎಂ
ಪೀಕ್ ಟರ್ಕ್ಯೂ 8.74 ಎನ್‌ಎಂ, 5500 ಆರ್‌ಪಿಎಂ
ವಿ ಮ್ಯಾಟಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಸೆಲ್ಫ್ ಸ್ಟಾರ್ಟ್ ಆಂಡ್ ಕಿಕ್ ಸ್ಟಾರ್ಟ್ ಆಪ್ಷನ್

ಸಸ್ಫೆಷನ್
ಹಿಂದೆ ಹಾಗೂ ಎದುರಗಡೆ ಸ್ಪ್ರಿಂಗ್ ಲೋಡಡ್ ಹೈಡ್ರಾಲಿಕ್ ಸಸ್ಫೆಷನ್

ಮೈಲೇಜ್
ಕಂಪನಿಯ ಪ್ರಕಾರ ಪ್ರತೀ ಲೀಟರ್‌ಗೆ 60 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಇತರ ವೈಶಿಷ್ಟ್ಯಗಳು
ಬ್ಯಾಟರಿ ಎಂಎಫ್-12V 3Ah
ಹೆಡ್ ಲ್ಯಾಂಪ್- 12 V 55W
ಅಂಡರ್‌ಬೋನ್ ಟೈಪ್ ಫ್ರೇಮ್
ಡೈಮಷನ್- 1795ಎಂಎಂ x 705ಎಂಎಂ x 1115 ಎಂಎಂ
ವೀಲ್ ಬೇಸ್ 1238 ಎಂಎಂ
ಸೀಟ್ ಎತ್ತರ 765ಎಂಎಂ

ಇತರ ವೈಶಿಷ್ಟ್ಯಗಳು
ಮುಂದು ಹಾಗೂ ಹಿಂದುಗಡೆ ಟೈರ್ ಆಕಾರ 90/100- 10 53J
ಹಿಂದೆ ಹಾಗೂ ಎದುರುಗಡೆ ಟ್ಯೂಬ್‌ಲೆಸ್ ಟೈರ್ ಕೊಂಬಿ- ಬ್ರೇಕ್ ತಂತ್ರಜ್ಞಾನ
ಫ್ರಂಟ್ ಹಾಗೂ ರಿಯರ್ ಡ್ರಮ್ ಬ್ರೇಕ್ ಡಯಾಮೀಟರ್ 130ಎಂಎಂ
ವಿಸ್ಕೊಸ್ ಪೇಪರ್ ಏರ್-ಫಿಲ್ಟರ್

ದೇಶದ ಆಟೋಮ್ಯಾಟಿಕ್ ಸ್ಕೂಟರ್ ಸೆಗ್ಮೆಂಟ್ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇವೆ. ಈ ನಿಟ್ಟಿನಲ್ಲಿ ಹೋಂಡಾ ಆಕ್ಟಿವಾ ಐ ಕೂಡಾ ಕಮಾಲ್ ಮಾಡುವ ನಿರೀಕ್ಷೆಯಿದೆ.

ರೆಡಿ ಟು ಫ್ಲೈ
ಐ ಆಮ್ ರೆಡಿ ಟು ಫ್ಲೈ (ಹಾರಲು ಸಿದ್ಧ) ಎಂಬ ಟ್ಯಾಗ್ ಅಡಿಯಲ್ಲಿ ನೂತನ ಹೋಂಡಾ ಸ್ಕೂಟರ್ ಆಗಮನವಾಗಲಿದೆ.

ಇನ್ನು ಆಕ್ಟಿವಾ ಆವೃತ್ತಿಗೆ ಹೋಲಿಸಿದರೆ ಹೋಂಡಾ ಆಕ್ಟಿವಾ ಐ ಕಡಿಮೆ ಭಾರವಾಗಿದ್ದು, ಕೇವಲ 103 ಕೆ.ಜಿ ತೂಕವಿದೆ.

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

ಹೋಂಡಾ ಆಕ್ಟಿವಾ-ಐ

ಹೋಂಡಾ ಆಕ್ಟಿವಾ-ಐ

ಹೋಂಡಾ ಆಕ್ಟಿವಾ-ಐ

ಹೋಂಡಾ ಆಕ್ಟಿವಾ-ಐ

ಹೋಂಡಾ ಆಕ್ಟಿವಾ-ಐ

ಹೋಂಡಾ ಆಕ್ಟಿವಾ-ಐ

ಹೋಂಡಾ ಆಕ್ಟಿವಾ-ಐ



Click it and Unblock the Notifications