ಹೋಂಡಾದಿಂದ ಅಗ್ಗದ ಬೈಕ್ 'ಡ್ರೀಮ್ ನಿಯೋ' ಲಾಂಚ್
ಈಗಷ್ಟೇ ಹೋಂಡಾ ನೂತನ ಬೈಕ್ ಲಾಂಚ್ ಅಥವಾ ಅನಾವರಣ ಮಾಡುವ ಸಾಧ್ಯತೆಯಿದೆ ಎಂಬುದನ್ನು ನಾವು ವರದಿ ಮಾಡಿದ್ದೆವು. ಇದಕ್ಕೆ ಪೂರಕವೆಂಬಂತೆ ಜಪಾನ್ ಮೂಲದ ಹೋಂಡಾ ಮೋಟಾರ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ (ಎಚ್‌ಎಂಎಸ್‌ಐ) ಕಂಪನಿಯು ದೇಶಕ್ಕೆ ಅಗಿ ಅಗ್ಗದ ಬೈಕನ್ನು ಪರಿಚಯಿಸಿದೆ.
'ಡ್ರೀಮ್ ನಿಯೋ' ಎಂದು ಅರಿಯಲ್ಪಡುವ ನೂತನ 109 ಸಿಸಿ ಬೈಕ್ ಹೋಂಡಾದಿಂದ ಬಿಡುಗಡೆಯಾಗಿರುವ ಅಗ್ಗದ ಬೈಕಾಗಿದೆ. ಪ್ರಮುಖವಾಗಿಯೂ ಹೀರೊ ಮೊಟೊಕಾರ್ಪ್‌ನ ಜನಪ್ರಿಯ ಸ್ಪ್ಲೆಂಡರ್ ಆವೃತ್ತಿಗೆ ಪೈಪೋಟಿ ನೀಡಲಿದೆ.
ವೆರಿಯಂಟ್-ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಕಿಕ್/ಡ್ರಮ್/ಸ್ಪೋಕ್: 43,150 ರು.
ಕಿಕ್/ಡ್ರಮ್/ಅಲಾಯ್: 44,150 ರು.
ಸೆಲ್ಫ್/ಡ್ರಮ್/ಅಲಾಯ್: 47,240 ರು.
ಮೈಲೇಜ್ (ಪ್ರತಿ ಲೀಟರ್‌ಗೆ) : 74 ಕೀ.ಮೀ.

ಹೋಂಡಾ ಕಂಪನಿಯಿಂದ ಬಿಡುಗಡೆಯಾಗಿದ್ದ ಡಿಯೊ ಸ್ಕೂಟರ್ ಆವೃತ್ತಿ ದೇಶಕ್ಕೆ ಕಂಪನಿಯಿಂದ ಪರಿಚಯವಾಗಿದ್ದ ಅಗ್ಗದ ಪ್ರಯಾಣಿಕ ದ್ವಿಚಕ್ರ ವಾಹನವಾಗಿತ್ತು. ಇದರ ಎಕ್ಸ್ ಶೋ ರೂಂ ದರ 44,718 ರು.ಗಳಾಗಿವೆ.

100ರಿಂದ ಹಿಡಿದು 110ಸಿಸಿ ವಿಭಾಗಗಳಲ್ಲಿ ಶೇಕಡಾ 150ರಷ್ಟು ಪ್ರಗತಿ ಸಾಧಿಸುವುದು ಹೋಂಡಾ ಗುರಿಯಾಗಿದೆ. ಇದರಂತೆ ನೂತನ ಬೈಕ್ ದೇಶಕ್ಕೆ ಪರಿಚಯಿಸಲಾಗಿದೆ. ಒಟ್ಟಾರೆಯಾಗಿ 2013-14 ಆರ್ಥಿಕ ಸಾಲಿನ ಅಂತ್ಯದ ವೇಳೆ 39.3 ಲಕ್ಷ ಯುನಿಟ್ ಮಾರಾಟದ ಗುರಿಯಾಗಿರಿಸಿಕೊಂಡಿದೆ.

ವೆರಿಯಂಟ್-ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಕಿಕ್/ಡ್ರಮ್/ಸ್ಪೋಕ್: 43,150 ರು.
ಕಿಕ್/ಡ್ರಮ್/ಅಲಾಯ್: 44,150 ರು.
ಸೆಲ್ಫ್/ಡ್ರಮ್/ಅಲಾಯ್: 47,240 ರು.

ನೂತನ ಡ್ರೀಮ್ ನಿಯೊ 110ಸಿಸಿ ಎಂಜಿನ್ ನಿಯಂತ್ರಿಸಲ್ಪಡಲಿದೆ. ಇನ್ನು ಪ್ರತಿ ಲೀಟರ್ ಪೆಟ್ರೋಲ್‌ಗೆ 74 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಪ್ರಸ್ತುತ ಹೀರೊ ದೇಶದಲ್ಲಿ ಅತಿ ಅಗ್ಗದ ಎಚ್‌ಎಫ್ ಡಾವ್ನ್ ಬೈಕ್ ಮಾರಾಟ ಮಾಡುತ್ತಿದೆ. ಇದರ ಎಕ್ಸ್ ಶೋ ರೂಂ ದರ 36,600 ರು.ಗಳಾಗಿವೆ. ಹಾಗಾಗಿ ಹೋಂಡಾ ನೂತನ ಬೈಕ್ ಹೇಗೆ ಸವಾಲಾಗಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.


ಕೆಲವು ದಿನಗಳ ಹಿಂದೆಯಷ್ಟೇ 27 ಸಾವಿರು ರು.ಗಳ ಅಸುಪಾಸಿನಲ್ಲಿ ಯಮಹಾ ವಿಶ್ವದ ಅತಿ ಅಗ್ಗದ ಬೈಕ್ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಭಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.






Click it and Unblock the Notifications