ಹೋಂಡಾದ ಐಕಾನಿಕ್ ಗೋಲ್ಡ್‌ವಿಂಗ್ ಈಗ 40ರ ಹರೆಯ

By Nagaraja

ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರು ಕಂಪನಿ ಲಿಮಿಟೆಡ್ ಸಂಸ್ಥೆಯ ಐಕಾನಿಕ್ ಗೋಲ್ಡ್‌ವಿಂಗ್ ಟೂರಿಂಗ್ ಬೈಕ್ ಬಗ್ಗೆ ನೀವು ಕೇಳಿರಬಹುದು. ಈ ಬೈಕ್ ಬಿಡುಗಡೆಗೊಂಡು ಇದೀಗ 40 ವರ್ಷಗಳೇ ತುಂಬುತ್ತಿದೆ.

ಹೌದು, 1974 ಅಕ್ಟೋಬರ್ ತಿಂಗಳಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಗೋಲ್ಡ್‌ವಿಂಗ್ 2014 ಅಕ್ಟೋಬರ್‌ನಲ್ಲಿ 40ರ ವಸಂತವನ್ನು ತಲುಪಲಿದೆ. ಇದರಂಗವಾಗಿ ಗೋಲ್ಡ್‌ವಿಂಗ್ ಸಂಭ್ರಮಾಚರಣೆಗೆ ತಯಾರಾಗುತ್ತಿರುವ ಹೋಂಡಾ ಹೊಸತಾದ 40ನೇ ವಾರ್ಷಿಕ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಹೋಂಡಾದ ಐಕಾನಿಕ್ ಗೋಲ್ಡ್‌ವಿಂಗ್ ಬೈಕ್ ಈಗ 40ರ ಹರೆಯ

ಉತ್ತರ ಅಮೆರಿಕ, ಪಶ್ಚಿಮ ಯುರೋಪ್, ಆಸ್ಟ್ರೇಲಿಯಾ ಮತ್ತು ತವರೂರಾದ ಜಪಾನ್‌‍ನಲ್ಲಿ ಹೆಚ್ಚು ಪ್ರಖ್ಯಾತಿ ಗಿಟ್ಟಿಸಿಕೊಂಡಿರುವ ಹೋಂಡಾ ಗೋಲ್ಡ್ ವಿಂಗ್ ಮಾದರಿಯಲ್ಲಿ ಕಳೆದ 40 ವರ್ಷಗಳಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿತ್ತು.

ಹೋಂಡಾದ ಐಕಾನಿಕ್ ಗೋಲ್ಡ್‌ವಿಂಗ್ ಬೈಕ್ ಈಗ 40ರ ಹರೆಯ

ಉದಾಹರಣೆಗೆ 1975ರಲ್ಲಿ 999 ಸಿಸಿ ಫ್ಲ್ಯಾಟ್ ಫೋರ್ ಎಂಜಿನ್ ಆಳವಡಿಸಲಾಗಿದ್ದ ಇದಕ್ಕೆ 2001ರಲ್ಲಿ 1832 ಸಿಸಿ ಫ್ಲ್ಯಾಟ್ ಸಿಕ್ಸ್ ಎಂಜಿನ್ ಆಳವಡಿಸಲಾಗಿತ್ತು. ಇನ್ನು 2012ರಲ್ಲಿ ಪ್ರಸ್ತುತ ಮಾದರಿ ಫೇರ್ಡ್ ವಿನ್ಯಾಸ ಪಡೆದುಕೊಂಡಿತ್ತಲ್ಲದೆ ಹೊಂದಾಣಿಸಬಹುದಾದ ವಿಂಡ್ ಸ್ಕ್ರೀನ್, ಸ್ಯಾಡಲ್‌ಬ್ಯಾಗ್, ಟ್ರಂಕ್, ಸಹ ಪ್ರಯಾಣಿಕರಿಗೆ ಒರಗಿಕೊಳ್ಳಲು ಸೀಟು, ಸ್ಯಾಟಲೈಟ್ ನೇವಿಗೇಷನ್, ರೇಡಿಯೋ, ಸಿಕ್ಸ್ ಸ್ಪೀಕರ್ ಆಡಿಯೋ ಸಿಸ್ಟಂ ಜೊತೆ ಎಂಪಿ3 ಮತ್ತು ಐಪೊಡ್ ಕನೆಕ್ಟಿವಿಟಿ, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ವ್ಯವಸ್ಥೆಗಳನ್ನು ಒದಗಿಸಲಾಗಿತ್ತು.

ಹೋಂಡಾದ ಐಕಾನಿಕ್ ಗೋಲ್ಡ್‌ವಿಂಗ್ ಬೈಕ್ ಈಗ 40ರ ಹರೆಯ

ಇದೀಗ ಬರಲಿರುವ ಗೋಲ್ಡ್‌ವಿಂಗ್ ವಿಶೇಷ 40ನೇ ವಾರ್ಷಿಕ ಮಾದರಿಯು ನಾಲ್ಕು ವರ್ಣಗಳನ್ನು ಪಡೆಯಲಿದೆ. ಇದರೊಂದಿಗೆ 1975ರಲ್ಲಿ ಬಿಡುಗಡೆಯಾಗಿದ್ದ ಗೋಲ್ಡ್ ವಿಂಗ್ ಜಿಎಲ್1000 ಬೈಕ್‌ಗೆ ಹೊಸ ಆಯಾಮ ದೊರಕಲಿದೆ.

ಹೋಂಡಾದ ಐಕಾನಿಕ್ ಗೋಲ್ಡ್‌ವಿಂಗ್ ಬೈಕ್ ಈಗ 40ರ ಹರೆಯ

ಪ್ರಮುಖವಾಗಿಯೂ ದೀರ್ಘ ಪ್ರಯಾಣ ಕೈಗೊಳ್ಳುವವರಿಗೆ ಹೋಂಡಾ ಗೋಲ್ಡ್ ವಿಂಗ್ ಅದ್ಭುತ ಅನುಭವ ನೀಡುತ್ತಿತ್ತು. ಇದರ ದೇಹ ಶೈಲಿಯನ್ನು ಪ್ರಯಾಣಿಕರ ಅನುಕೂಲತೆಯನ್ನು ಗಮದಲ್ಲಿಟ್ಟುಕೊಂಡು ರಚಿಸಲಾಗಿತ್ತು.

ಹೋಂಡಾದ ಐಕಾನಿಕ್ ಗೋಲ್ಡ್‌ವಿಂಗ್ ಬೈಕ್ ಈಗ 40ರ ಹರೆಯ

ಒಟ್ಟಿನಲ್ಲಿ ಇದೀಗ ಆಗಮನವಾಗಲಿರುವ 2015 ಗೋಲ್ಡ್‌ವಿಂಗ್ ವಾಹನ ಪ್ರೇಮಿಗಳನ್ನು ಹೆಚ್ಚು ಕುತೂಹಲವನ್ನುಂಟು ಮಾಡಿದೆ. ಇದರ ಎಂಜಿನ್ ಮತ್ತು ಇತರ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಗಳು ಇನ್ನಷ್ಟು ಹೊರಬರಲಿದೆ.

More from DriveSpark

Article Published On: Tuesday, September 9, 2014, 10:19 [IST]
English summary
The Honda Goldwing is four decades old next year and to celebrate the Japanese marque will release a 40th anniversary model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+