ಇಂಡಿಯಾ ಬೈಕ್ ವೀಕ್ ಬಿಸಿಯೇರಿಸಿದ ಬಿಕಿನಿ ಬೈಕ್ ವಾಶ್
ಕಳೆದ ಬಾರಿಯಂತೆ ಇಂಡಿಯಾ ಬೈಕ್ ವೀಕ್ 2014 ಆದ್ಧೂರಿಯಾಗಿ ಸಂಪನ್ನಗೊಂಡಿದೆ. ಪ್ರವಾಸಿ ತಾಣ ಗೋವಾದಲ್ಲಿ ನಡೆದ ಬೈಕ್ ಹಬ್ಬದಲ್ಲಿ ಪ್ರತಿ ಸಲದಂತೆ ಈ ಬಾರಿಯೂ ಬಿಕಿನಿ ಬೈಕ್ ವಾಶ್ ಪ್ರಮುಖ ಆಕರ್ಷಣೀಯವಾಗಿತ್ತು.
ವೀಕ್ಷಕರ ಅಭಿಪ್ರಾಯದಂತೆ 2014 ಇಂಡಿಯಾ ಬೈಕ್ ವೀಕ್ ಬಹಳ ಆದ್ಧೂರಿಯಾಗಿ ಸಾಗಿತ್ತು. ಈ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡವರಿಗೆ ಖಂಡಿತ ನಿರಾಸೆ ಕಾದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿಯ ಬೈಕ್ ಹಬ್ಬ ಹಿಂದಿನಕ್ಕಿಂತಲೂ ಹೆಚ್ಚು ಸುಸಜ್ಜಿತವಾಗಿ ಆಯೋಜನೆಯಾಗಿತ್ತು. ಆಹಾರ, ಪಾನೀಯದಿಂದ ತೊಡಗಿ ಬೈಕ್ ಪ್ರದರ್ಶನದಂತಹ ಎಲ್ಲ ವಿಚಾರದಲ್ಲೂ ಜನಮನ ಗೆಲ್ಲುವಲ್ಲಿ ಇಂಡಿಯಾ ಬೈಕ್ ವೀಕ್ ಯಶಸ್ವಿಯಾಗಿತ್ತು.

ಈ ನಡುವೆ ಎಲ್ಲರೂ ಕಾತರದಿಂದ ಕಾದು ಕುಳಿತಿದ್ದ ಬಿಕಿನಿ ಬೈಕ್ ವಾಶ್ ಕೂಡಾ ಬಿಸಿಯೇರಿಸಿತ್ತು. ಇಲ್ಲಿಗೆ ಆಗಮಿಸಿದ್ದ ರೂಪದರ್ಶಿಗಳು ಸೋಪ್ ಹಾಗೂ ನೀರಿನ ಸಹಾಯದಿಂದ ಬೈಕ್ ತೊಳೆಯುವಲ್ಲಿ ತಲ್ಲೀನರಾಗಿದ್ದರು.

ತಮ್ಮ ಅಂಗಾಂಗ ಪ್ರದರ್ಶನಕ್ಕಿಟ್ಟಿದ್ದ ಇಂತಹ ರೂಪದರ್ಶಿಗಳ ಸೌಂದರ್ಯ ವರ್ಣನೆಯಲ್ಲಿ ಯುವ ಉತ್ಸಾಹಿ ಬೈಕ್ ಪ್ರೇಮಿಗಳು ತೊಡಗಿದ್ದರು.

ಮೊದಲ ನೋಟದಲ್ಲಿ ರೂಪದರ್ಶಿಗಳ ಉದ್ದೇಶ ಬೈಕ್ ತೊಳೆಯುವುದೇ ಅಥವಾ ಮೈಮಾಟ ಪ್ರದರ್ಶನವೇ ಎಂಬುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿತ್ತು. ಅನುಮಾನವೇ ಬೇಡ ಇಲ್ಲಿ ಎರಡೂ ವಿಚಾರಗಳಿಗೆ ಸಿಕ್ಕಾಬಿಟ್ಟಿ ಪ್ರಚಾರ ಲಭಿಸಿತ್ತು.

ಅಂತಿಮದಲ್ಲಿ ಬೈಕನ್ನು ತೊಳೆಯುವುದರಲ್ಲಂತೂ ಬಿಕಿನಿಗಳು ಯಶಸ್ಸನ್ನು ಕಂಡಿದ್ದರು. ಆದರೆ ನೋಡುಗರ ಕುತೂಹಲ ಮಾತ್ರ ಇನ್ನು ಕಮ್ಮಿಯಾಗಿರಲಿಲ್ಲ.


Click it and Unblock the Notifications








