ಇಂಡಿಯಾ ಬೈಕ್ ವೀಕ್‌ನಲ್ಲಿ ದೇಶದಲ್ಲೇ ಅತಿ ದುಬಾರಿಯ ವೆಸ್ಪಾ ಸ್ಕೂಟರ್ ಚಮಕ್
ದೇಶದ ಬೈಕ್ ಪ್ರೇಮಿಗಳು ಕಾತರದಿಂದ ಕಾದು ಕುಳಿತಿದ್ದ ಇಂಡಿಯಾ ಬೈಕ್ ವೀಕ್ ಬಂದೇ ಬಿಟ್ಟಿದೆ. ಇದರಂತೆ ಇಟಲಿಯ ಅತಿ ಪುರಾತನ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಪಿಯಾಜಿಯೊದ ಐಕಾನಿಕ್ ಬ್ರಾಂಡ್ ಆಗಿರುವ ವೆಸ್ಪಾದಿಂದ ಹೊಸತಾದ ಜಿಟಿಎಸ್ 300 ಮಾದರಿಯನ್ನು ಪ್ರದರ್ಶಿಸಲಾಗಿದೆ.
ಭಾರತಕ್ಕೆ ಕಾಲಿಟ್ಟಿರುವ ಕೆಲವೇ ವರ್ಷಗಳಲ್ಲಿ ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿರುವ ವೆಸ್ಪಾ ಕೇವಲ ಮಹಿಳೆಯರನ್ನು ಮಾತ್ರವಲ್ಲತೆ ಪುರುಷರ ಪ್ರೀತಿಗೂ ಪಾತ್ರವಾಗಿದೆ. ಅಮೆರಿಕದಲ್ಲಿ 4.1 ಲಕ್ಷ ರು.ಗಳಷ್ಟು ದುಬಾರಿಯೆನಿಸಿರುವ ವೆಸ್ಪಾ ಜಿಟಿಎಸ್ 300 ಭಾರತದಲ್ಲೂ ಇದಕ್ಕೆ ಸಮಾನವಾದ ಬೆಲೆ ಕಾಯ್ದುಕೊಳ್ಳುವ ಸಾಧ್ಯತೆಯಿದೆ.

ಇನ್ನು ವೆಸ್ಪಾ ಜಿಟಿಎಸ್300 2015 ವರ್ಷಾಂತ್ಯದಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಇದು ವೆಸ್ಪಾದ ಅತ್ಯಂತ ಶಕ್ತಿಶಾಲಿ ಸ್ಕೂಟರ್‌ಗಳಲ್ಲಿ ಒಂದಾಗಿದೆ.

ವೆಸ್ಪಾ ಜಿಟಿಎಸ್300 ಮಾದರಿಯು ಇಟಲಿಯ ಶೈಲಿಯೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಪಡೆದುಕೊಂಡಿದೆ. ಇನ್ನು ಎಲ್‌ಸಿಡಿ ಪರದೆ ಕೂಡಾ ನಿರ್ಣಾಯಕವೆನಿಸಲಿದೆ. ಇದಲ್ಲದೆ ಟ್ರಿಪ್ ಮೀಟರ್, ಓಡೋಮೀಟರ್, ಗಡಿಯಾರ ಮುಂತಾದ ವಿಶಿಷ್ಟತೆಯನ್ನು ಪಡೆದುಕೊಳ್ಳಲಿದೆ.

ವೆಸ್ಪಾ ಜಿಟಿಎಸ್300 ಅತ್ಯಂತ ಶಕ್ತಿಶಾಲಿ 278 ಸಿಸಿ ಸಿಂಗಲ್ ಸಿಲಿಂಡರ್ ಮೋಟಾರ್‌ನಿಂದ ನಿಯಂತ್ರಿಸ್ಪಡಲಿದ್ದು, 21.2 ಅಶ್ವಶಕ್ತಿ (22.3 ತಿರುಗುಬಲ) ಉತ್ಪಾದಿಸಲಿದೆ. ಅಂತೆಯೇ ಸಿವಿಟಿ ಗೇರ್ ಬಾಕ್ಸ್ ಪಡೆಯಲಿದೆ.

ಮುಂಭಾಗ ಹಾಗೂ ಹಿಂಬದಿಯಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಪಡೆದುಕೊಂಡಿರುವ ವೆಸ್ಪಾ ಜಿಟಿಎಸ್300, ಗಂಟೆಗೆ ಗರಿಷ್ಠ 128 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಂತೆಯೇ ಮುಂಭಾಗದಲ್ಲಿ ಸಿಂಗಲ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಹಾಗೂ ಹಿಂಬದಿಯಲ್ಲಿ ಟ್ವಿನ್ ಶಾಕ್ ಸಸ್ಪೆನ್ಷನ್‌ಗಳನ್ನು ಪಡೆಯಲಿದೆ.

ಕೊನೆಯದಾಗಿ ವೆಸ್ಪಾ ಜಿಟಿಎಸ್300 ಪ್ರತಿ ಲೀಟರ್‌ಗೆ 28 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಅಂತಿಮವಾಗಿ ಈ ಐಕಾನಿಕ್ ಸ್ಕೂಟರ್ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಭಾರತ ಮಾರುಕಟ್ಟೆಯನ್ನು ತಲುಪಲಿದೆ. ಹಾಗೊಂದು ವೇಳೆ ಇದು ಭಾರತ ಮಾರುಕಟ್ಟೆಗೆ ಎಂಟ್ರಿ ಕೊಟ್ಟಲ್ಲಿ ದೇಶದಲ್ಲಿ ಮಾರಾಟವಾಗಲಿರುವ ಅತ್ಯಂತ ದುಬಾರಿಯ ಸ್ಕೂಟರ್ ಎಂದೆನಿಸಿಕೊಳ್ಳಲಿದೆ.


Click it and Unblock the Notifications